newsics.com/ನ್ಯೂಸಿಕ್ಸ್
ಗುರುಗ್ರಾಮ: ನಿಶ್ಚಿತಾರ್ಥ ಹುಡುಗಿ ಜೊತೆ ಯುವಕನೊಬ್ಬ, ಲೈಂಗಿಕ ಉತ್ತೇಜಕ ಗುಳಿಗೆಗಳನ್ನು ಅತಿಯಾಗಿ ಸೇವಿಸಿದ ಪರಿಣಾಮ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
https://youtube.com/shorts/yrC3ODyMmjo?si=ybubL3Ee_pXg1sLS
ಮೃತನನ್ನು ನಾಗ್ಪುರ ಮೂಲದ ರೋಹಿತ್ ಲಾಲ್ (29) ಎಂದು ಗುರುತಿಸಲಾಗಿದೆ. ಈತ ದೆಹಲಿಯ ‘ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ.
ರೋಹಿತ್ ಮತ್ತು ಆತನ ಸಹೋದ್ಯೋಗಿಯೊಬ್ಬರು ಪ್ರತಿದಿನ ಒಟ್ಟಿಗೆ ಕಚೇರಿಗೆ ಹೋಗುತ್ತಿದ್ದರು. ಆದರೆ ಅಂದು ರೋಹಿತ್ ಎಷ್ಟು ಕರೆ ಮಾಡಿದರೂ ಫೋನ್ ಸ್ವೀಕರಿಸಿರಲಿಲ್ಲ, ಅತ್ತ ರೂಮಿನ ಬಾಗಿಲನ್ನೂ ತೆರೆದಿರಲಿಲ್ಲ. ಇದರಿಂದ ಸಂಶಯಗೊಂಡ ಸಹೋದ್ಯೋಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಒಳಹೋದಾಗ ರೋಹಿತ್ ಬೆಡ್ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.
ಪೊಲೀಸರು ತಪಾಸಣೆ ನಡೆಸಿದಾಗ ಕೊಠಡಿಯಲ್ಲಿ ಕೆಲವು ಲೈಂಗಿಕ ಉತ್ತೇಜಕ ಮಾತ್ರೆಗಳ ಖಾಲಿ ಪ್ಯಾಕೆಟ್‌ಗಳು ಹಾಗೂ ಹೆಲ್ತ್ ಸಪ್ಲಿಮೆಂಟ್‌ಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ರೋಹಿತ್ ಅಂದು ತನ್ನ ನಿಶ್ಚಿತ ವಧುವನ್ನು ಭೇಟಿಯಾಗಲು ಆಹ್ವಾನಿಸಿದ್ದನು. ಆಕೆಯ ಬರುವಿಕೆಗಾಗಿ ಕಾಯುತ್ತಿದ್ದ ರೋಹಿತ್, ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾತ್ರೆಗಳನ್ನು ಸೇವಿಸಿದ್ದ ಎನ್ನಲಾಗಿದೆ. ಆದರೆ, ಈ ಮಾತ್ರೆಗಳ ಅತಿಯಾದ ಸೇವನೆಯಿಂದ ತೀವ್ರ ಹೃದಯಾಘಾತ ಸಂಭವಿಸಿ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.