newsics.com/ನ್ಯೂಸಿಕ್ಸ್
ರಾಯಚೂರು: ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಬಂದಿದ್ದ ಮಹಿಳೆ ಜೊತೆ ಆಸ್ಪತ್ರೆ ಸಿಬ್ಬಂದಿ ಕಾಲು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಸಿಬ್ಬಂದಿಗೆ ಸಂತ್ರಸ್ತೆ ಕಡೆಯವರು ಸಾರ್ವಜನಿಕವಾಗಿ ಥಳಿಸಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಘಟನೆ ಬಗ್ಗೆ ಎಳೆಎಳೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಮಾಹಿತಿ ಬಿಚ್ಚಿಟ್ಟಿದ್ದಾಳೆ. ಆತನಿಗೆ ಥಳಿಸಿದ್ದರ ಹಿಂದಿನ ಅಸಲಿ ಕಾರಣವನ್ನ ರಿವೀಲ್ ಮಾಡಿದ್ದಾರೆ.
ರಾಯಚೂರಿನ ಪ್ರತಿಯೊಬ್ಬರಿಗೂ ನಾನು ಈ ವಿಷಯವನ್ನು ತಿಳಿಸಲು ಬಯಸುತ್ತೇನೆ. ಆತನ ಹೆಸರು ಮೆಹಬೂಬ್. ಈತ ಸುರಕ್ಷಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ನಾನು ತೀವ್ರವಾದ ಡಿವಿಟಿ (DVT) ಸಮಸ್ಯೆಯಿಂದ ಬಳಲುತ್ತಿದ್ದೆ, ಹಾಗಾಗಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯರು ನನ್ನನ್ನು ಅಡ್ಮಿಟ್ ಆಗಲು ಹೇಳಿದರು. ಆಗ ಮೆಹಬೂಬ್ ಬಂದು ಪರದೆಯನ್ನು ಎಳೆದು, ನನ್ನ ಕಾಲನ್ನು ಮುಟ್ಟುತ್ತಾ, “ನಿಮ್ಮ ಕಾಲುಗಳು ಎಷ್ಟು ಸುಂದರ ಮತ್ತು ಮೃದುವಾಗಿವೆ, ನಿಮಗೆ ಮದುವೆಯಾಗಿದೆ ಅಲ್ವಾ, ಗಂಡನ ಜೊತೆ ನಿಮಗೆ ಆಪ್ತವಾಗಲು ಅನಿಸುವುದಿಲ್ಲವೇ?” ಎಂದು ಅಸಭ್ಯವಾಗಿ ಮಾತನಾಡಲಾರಂಭಿಸಿದ.
ನಾನು ಈಗಾಗಲೇ ನೋವಿನಲ್ಲಿದ್ದೆ, ಇದನ್ನು ಕೇಳಿ ಅಳಲು ಪ್ರಾರಂಭಿಸಿದೆ. ಸುರಕ್ಷಾ ಆಸ್ಪತ್ರೆಯವರು ಆತನನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಅಗತ್ಯ ಕ್ರಮಕೈಗೊಂಡರು. ಪೊಲೀಸರು ಸ್ಥಳಕ್ಕೆ ಬಂದರು, ಆದರೆ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರಿಂದ ಆತ ಬುದ್ದಿ ಕಲಿತಿರಬಹುದು ಎಂದು ನಾವು ಭಾವಿಸಿದೆವು. ಆದರೆ ನಂತರ ನನ್ನ ಅಕ್ಕ ಆತನಿಗೆ ಎಚ್ಚರಿಕೆ ನೀಡಲು ಫೋನ್ ಮಾಡಿದಾಗ, ಆತ ನಾನು ನಿಮಗೆ ಯಾರಿಗೂ ಹೆದರುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳ” ಎಂದು ಉದ್ಧಟತನದಿಂದ ಉತ್ತರಿಸಿದ್ದಾನೆ. ಇದು ನನ್ನ ಕುಟುಂಬದವರನ್ನು ಮತ್ತೆ ಕೆರಳಿಸಿತು. ನಾನು ಸಹಾಯಕ್ಕಾಗಿ ಬಜರಂಜದಳ, ಬಿಜೆಪಿ ನಾಯಕರು ಮತ್ತು ಎಲ್ಲರನ್ನೂ ವಿನಂತಿಸಿದೆ. ಎಲ್ಲರಿಗೂ ಕರೆ ಮಾಡಿದೆ. ಆದರೆ ನಮಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ಆದ್ದರಿಂದಲೇ ಈ ಕ್ರಮವನ್ನು ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.