newsics.com
ಹುಬ್ಬಳ್ಳಿ: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರಿಗೆ ರೋಡ್ ರೋಮಿಯೋಗಳು ಹಾಡಹಗಲೇ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದ ಮೂವರು ಯುವಕರು, ಯುವತಿಯ ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾರೆ. ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಾಡಹಗಲೇ ನಡು ರಸ್ತೆಯಲ್ಲಿ ನಡೆಯುತ್ತಿರುವ ಇಂತಹ ನೀಚ ಕೃತ್ಯಗಳಿಂದ ಮಹಿಳೆಯರು ಕಂಗಾಲಾಗಿದ್ದಾರೆ.
Personal Health ತಣ್ಣೀರು ಸ್ನಾನದಿಂದ ಲೈಂಗಿಕ ಉತ್ತೇಜನ ಸಾಧ್ಯವೇ? ತಜ್ಞರು ಹೇಳಿದ್ದೇನು?
ರಾಜ್ಯದ ಸರ್ಕಾರಿ ನೌಕರರಿಗೆ ಇನ್ನೂ ಸಿಕ್ಕಿಲ್ಲ ಸಂಬಳ: ವಿಳಂಬಕ್ಕೇನು ಕಾರಣ?
ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕ್! ಮತ್ತೆ ಬೆಲೆ ಏರಿಕೆ ಮಾಡಿದ ಕಂಪೆನಿ