newsics.com
ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ . ಇತರೆ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಹೊಸ ಪ್ಲ್ಯಾನ್ಗಳನ್ನು ಒಂದಲ್ಲೊಂದು ಕಂಪೆನಿ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುತ್ತಾ ಇರುತ್ತದೆ. ಇದೀಗ ಏರ್‌ಟೆಲ್ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಕಳೆದ ಬಾರಿ ತನ್ನ ರೀಚಾರ್ಜ್ ಬೆಲೆಯನ್ನು ಹೆಚ್ಚು ಮಾಡುವುದಾಗಿ ಹೇಳಿತ್ತು, ಆದರೆ ಈಗ ಈ ಕ್ರಮವನ್ನು ಕೈಗೊಂಡಿದೆ.
ಇಲ್ಲಿಯವರೆಗೆ ಮಧ್ಯಮ ಅವಧಿಯ ವ್ಯಾಲಿಡಿಟಿಗೆ ಫೇವರಿಟ್ ಆಗಿದ್ದ 799 ರೂಪಾಯಿಗಳ ಪ್ಲಾನ್ ಅನ್ನು ಏರ್‌ಟೆಲ್ ಈಗ ಇತಿಹಾಸದ ಪುಟಕ್ಕೆ ಸೇರಿಸಿದೆ. ಅಷ್ಟೇ ಅಲ್ಲ, 84 ದಿನಗಳ ಕಾಲ ಆರಾಮವಾಗಿ ಡೇಟಾ ಬಳಸಲು ಅವಕಾಶ ನೀಡುತ್ತಿದ್ದ 859 ರೂಪಾಯಿಗಳ ಪ್ಲಾನ್ ಬೆಲೆಯನ್ನು ಈಗ 899 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಅಂದರೆ, ಕೇವಲ ಒಂದೇ ದಿನದಲ್ಲಿ ನಿಮ್ಮ ನೆಚ್ಚಿನ ಪ್ಲಾನ್ ಬೆಲೆ 40 ರೂಪಾಯಿಯಷ್ಟು ದುಬಾರಿಯಾಗಿದೆ..
ವಿಶೇಷವೆಂದರೆ, ಹೊಸದಾಗಿ ಜಾರಿಗೆ ಬಂದಿರುವ 899 ರೂಪಾಯಿ ಪ್ಲಾನ್‌ನಲ್ಲಿ ಬೆಲೆ ಹೆಚ್ಚಾಗಿದೆಯೇ ಹೊರತು ಸೌಲಭ್ಯಗಳಲ್ಲ. ಈ ಹಿಂದೆ ಸಿಗುತ್ತಿದ್ದ ‘ರಿವಾರ್ಡ್ಸ್ ಮಿನಿ’ ಮೂಲಕ ತಿಂಗಳಿಗೆ ಸಿಗುತ್ತಿದ್ದ 80 ರೂಪಾಯಿಗಳ ಕ್ಯಾಶ್‌ಬ್ಯಾಕ್ ಸೌಲಭ್ಯವನ್ನು ಕಂಪನಿ ಈಗ ಗುಟ್ಟಾಗಿ ತೆಗೆದುಹಾಕಿದೆ. ಅತ್ತ ಬೆಲೆಯೂ ಏರಿಕೆ, ಇತ್ತ ಸವಲತ್ತುಗಳೂ ಕಡಿತ ಇದು ಗ್ರಾಹಕರಿಗೆ ಏಟಿನ ಮೇಲೆ ಏಟು ನೀಡಿದಂತಾಗಿದೆ.
ನಿಮಗೆ 84 ದಿನಗಳವರೆಗೆ ದಿನಕ್ಕೆ 2GB ಡೇಟಾ ಬೇಕೆಂದರೆ ಈಗ ಸಾವಿರದ ಗಡಿ ದಾಟಲೇಬೇಕು. 1,029 ರೂಪಾಯಿ ಪಾವತಿಸಿದರೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆಫರ್ ಅಂತ ಜಿಯೋ-ಹಾಟ್ ಸ್ಟಾರ್ ಚಂದಾದಾರಿಕೆ ನೀಡುತ್ತಾರಾದರೂ, ಸಾಮಾನ್ಯ ಗ್ರಾಹಕನಿಗೆ ಇದು ‘ಬೆಲೆ ಏರಿಕೆ’ಯ ಬಿಸಿಯನ್ನೇ ಹೆಚ್ಚಿಸಿದೆ.
ಕಳೆದ ನವೆಂಬರ್‌ನಲ್ಲಿ 189 ರೂಪಾಯಿಯ ಆರಂಭಿಕ ಪ್ಲಾನ್ ಅನ್ನು ರದ್ದುಗೊಳಿಸಿದ್ದ ಕಂಪನಿ, ಈಗ ಒಂದರ ಮೇಲೊಂದರಂತೆ ಬೆಲೆ ಏರಿಸುತ್ತಿದೆ.