ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಭಾರಿ ಸದ್ದು ಮಾಡುತ್ತಿತ್ತು. ಹೌದು, ಮೃಣಾಲ್ ಮತ್ತು ತಮಿಳಿನ ಸ್ಟಾರ್ ನಟ ಧನುಷ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದೆ.
ಈ ಗಾಸಿಪ್‌ಗೆ ಪುಷ್ಟಿ ನೀಡುವಂತೆ ಕಳೆದ ವರ್ಷ ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್‌ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ ‘ತೇರೆ ಇಷ್ಕ್ ಮೇ’ ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದನ್ನು ನೋಡಿದ ನೆಟ್ಟಿಗರು “ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ” ಎಂದು ಸುಳ್ಳು ಸುದ್ದಿಯ ಬೆಂಕಿಗೆ ತುಪ್ಪ ಸುರಿದಿದ್ದರು. ಆದರೆ ಈಗ ಈ ಎಲ್ಲಾ ಗಾಳಿ ಮಾತುಗಳಿಗೆ ಮೃಣಾಲ್ ಪಕ್ಕಾ ‘ಕ್ಲೈಮ್ಯಾಕ್ಸ್’ ಕೊಟ್ಟಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಮೃಣಾಲ್, “ನನ್ನ ವೈಯಕ್ತಿಕ ಜೀವನ ಹೆಡ್‌ಲೈನ್ ಆಗುವುದು ನನಗಿಷ್ಟವಿಲ್ಲ. ನಾನು ಮಾಡುವ ಕೆಲಸದಿಂದ ಜನರು ನನ್ನನ್ನು ಗುರುತಿಸಲಿ ಎಂದು ಬಯಸುತ್ತೇನೆ. ನಿಜ ಹೇಳಬೇಕೆಂದರೆ, ನನಗೆ ಡೇಟಿಂಗ್ ಮಾಡಲು ಈಗ ಸಮಯವೇ ಇಲ್ಲ” ಎಂದು ಸೀದಾ ಸಾದಾ ಉತ್ತರ ನೀಡಿದ್ದಾರೆ.
ಮೃಣಾಲ್ ಅವರು ಕೇವಲ ಡೇಟಿಂಗ್ ಬಗ್ಗೆ ಮಾತ್ರವಲ್ಲದೆ ತಮ್ಮ ಆರೋಗ್ಯದ ಬಗ್ಗೆಯೂ ಒಂದು ಶಾಕಿಂಗ್ ವಿಷಯ ಹಂಚಿಕೊಂಡಿದ್ದಾರೆ. “ನನ್ನ ಕಾಲಿನ ಲಿಗಮೆಂಟ್ ಹರಿದಿದೆ. ಎಕ್ಸ್-ರೇ ಮಾಡಿಸಿದ ಮೇಲೆ ಇದು ಗೊತ್ತಾಯಿತು. ಅದಕ್ಕೆ ಈಗ ತಕ್ಷಣ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಆದರೆ ಆ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದಕ್ಕೂ ನನಗೆ ಸಮಯ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾನು ಯಾರ ಜೊತೆ ಡೇಟಿಂಗ್ ಮಾಡಲು ಸಾಧ್ಯ?” ಎಂದು ಪ್ರಶ್ನಿಸುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
Beer sales booming ರಾಜ್ಯದಲ್ಲಿ ಸುಡುಬಿಸಿಲು: ತಣ್ಣನೆಯ ಬಿಯರ್ ಮಾರಾಟ ಬಲು ಜೋರು!