https://youtube.com/shorts/EOt-aJYYg5k?si=DmDCY_9WwqDDfAlH
newsics.com
ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂದಿಗೂ ‘ಜೋಡಿದಾರ್’ ಅಥವಾ ಬಹುಪತಿತ್ವ ಸಂಪ್ರದಾಯ ಅಸ್ತಿತ್ವದಲ್ಲಿದೆ. ಈ ಪದ್ಧತಿಯಂತೆ ಒಂದು ಕುಟುಂಬದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸಹೋದರರು ಒಬ್ಬಳೇ ಮಹಿಳೆಯನ್ನು ವಿವಾಹವಾಗುತ್ತಾರೆ. ಇಲ್ಲಿನ ಸುನೀತಾ ಚೌಹಾಣ್ ಎಂಬುವವರು ಪ್ರದೀಪ್ ನೇಗಿ ಮತ್ತು ಕಪಿಲ್ ನೇಗಿ ಎಂಬ ಸಹೋದರರನ್ನು ವಿವಾಹವಾಗಿದ್ದು, ಈ ವಿಶಿಷ್ಟ ಕುಟುಂಬಕ್ಕೆ ಈಗ ಮಗು ಜನಿಸಿದೆ.
ಮಗುವಿನ ಜನನ ಇಡೀ ಕುಟುಂಬದಲ್ಲಿ ಸಡಗರ ತಂದಿದೆ. ಒಬ್ಬ ತಂದೆ ಮನೆಯಲ್ಲೇ ಮಗುವನ್ನು ಸಂಭಾಳಿಸುತ್ತಿದ್ದರೆ, ಉದ್ಯೋಗದ ನಿಮಿತ್ತ ವಿದೇಶದಲ್ಲಿರುವ ಇನ್ನೊಬ್ಬ ತಂದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ಮಗುವಿನ ಆಗಮನ ನಮ್ಮ ಜೀವನವನ್ನು ಪೂರ್ಣಗೊಳಿಸಿದೆ. ಆದಷ್ಟು ಬೇಗ ಮನೆಗೆ ಮರಳಿ ನನ್ನ ಮಗುವನ್ನು ಎತ್ತಿಕೊಳ್ಳಲು ಕಾತುರನಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ ಈ ಕುಟುಂಬದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಸದ್ಯ ಸಿರ್ಮೌರ್ನ ಈ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸ್ಥಳೀಯರು ಮತ್ತು ಪರಿಚಿತರು ಈ ವಿಶಿಷ್ಟ ಕುಟುಂಬಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದರೆ.