Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಫಿಟ್ನೆಸ್ ಹೆಸರಲ್ಲಿ ಒಂದೇ ಒಂದು ದಿನಕ್ಕೆ 8 ಕೋಟಿ ಕಲೆಕ್ಷನ್!
ಕರ್ನಾಟಕವೈರಲ್

ಫಿಟ್ನೆಸ್ ಹೆಸರಲ್ಲಿ ಒಂದೇ ಒಂದು ದಿನಕ್ಕೆ 8 ಕೋಟಿ ಕಲೆಕ್ಷನ್!

Share
2 Min Read
SHARE

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮ್ಯಾರಥಾನ್ ಮತ್ತು ಹೈ-ಇಂಟೆನ್ಸಿಟಿ ಫಿಟ್ನೆಸ್ ಇವೆಂಟ್  ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಆದರೆ, ಈ ಇವೆಂಟ್‌ಗಳು ನಿಜವಾಗಿಯೂ ಆರೋಗ್ಯಕ್ಕಾಗಿಯೇ ಅಥವಾ ಬರೀ ಹಣ ಮಾಡುವ ತಂತ್ರವೇ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ  ಕಿಡಿ ಹೊತ್ತಿಸಿದೆ.

ಅಂಕಿತ ಕೇಡಿಯಾ ಎಂಬುವವರು ಬೆಂಗಳೂರಿನಲ್ಲಿ ನಡೆದ ಹೈರಾಕ್ಸ್ ಸ್ಪರ್ಧೆಯ ಬಗ್ಗೆ ಮಾಡಿದ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಫಿಟ್ನೆಸ್ ಹೆಸರಲ್ಲಿ ನಡೆಯುತ್ತಿರುವ ಈ ವ್ಯವಹಾರದ ಮುಖಬೆಲೆಯನ್ನು ಬಯಲು ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಹೈರಾಕ್ಸ್ ಇವೆಂಟ್‌ನಲ್ಲಿ ಸುಮಾರು 9,000 ಜನರು ಭಾಗವಹಿಸಿದ್ದರು. ಅಚ್ಚರಿಯ ವಿಷಯ ಅಂದ್ರೆ, ಒಬ್ಬೊಬ್ಬರಿಂದ 9,000 ರೂಪಾಯಿ ಪ್ರವೇಶ ಶುಲ್ಕ ಪಡೆಯಲಾಗಿತ್ತು. ಇದರ ಲೆಕ್ಕಾಚಾರ ಹಾಕಿದ್ರೆ, ಆಯೋಜಕರು ಒಂದೇ ದಿನದಲ್ಲಿ ಬರೋಬ್ಬರಿ 8.1 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ! ಬರೀ 8 ಕಿಲೋಮೀಟರ್ ಓಡಲು ಮತ್ತು ಕೆಲವು ವ್ಯಾಯಾಮ ಮಾಡಲು ಇಷ್ಟೊಂದು ದೊಡ್ಡ ಮೊತ್ತ ಪಾವತಿಸಬೇಕಾ? ಇದು ಫಿಟ್ನೆಸ್ ಗೀಳೋ ಅಥವಾ ಹಣದ ದಾಹವೋ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.

ಓಡಲು ಇಷ್ಟೊಂದು ಹಣ ಸುರಿಯುವುದು ಆರೋಗ್ಯದ ಕಾಳಜಿಯಲ್ಲ, ಬದಲಾಗಿ ಸೋಷಿಯಲ್ ಮೀಡಿಯಾದಲ್ಲಿ ನಾನು ಇದನ್ನ ಮಾಡಿದೆ ಅಂತ ತೋರಿಸಿಕೊಳ್ಳುವ ‘ವ್ಯಾಲಿಡೇಶನ್’ ಪಡೆಯುವ ಹಂಬಲ ಅಂತ ಹಲವರು ಅಭಿಪ್ರಾಯಪಟ್ಟಿದ್ದಾರೆ. “ವರ್ಷ ಪೂರ್ತಿ ಜಿಮ್ ಮೆಂಬರ್‌ಶಿಪ್‌ಗೆ 9 ಸಾವಿರ ಖರ್ಚು ಮಾಡಿದ್ರೆ ಆರೋಗ್ಯಕ್ಕಾದ್ರೂ ಒಳ್ಳೆಯದು, ಒಂದೇ ದಿನಕ್ಕೆ ಇಷ್ಟೊಂದು ಹಣ ಸುರಿಯುವುದು ಆರ್ಗನೈಸ್ಡ್ ಸ್ಕ್ಯಾಮ್” ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.

ಮ್ಯಾರಥಾನ್‌ಗಳಲ್ಲೂ ಇದೆ ‘ಹೈಕ್’ ಟ್ರೆಂಡ್
ಕೇವಲ ಫಿಟ್ನೆಸ್ ಇವೆಂಟ್ ಮಾತ್ರವಲ್ಲ, ಸಾಮಾನ್ಯ ಮ್ಯಾರಥಾನ್‌ಗಳಲ್ಲೂ ಈಗ ಶುಲ್ಕ ಗಗನಕ್ಕೇರಿದೆ. ಒಂದು ದಿನದ ಓಟಕ್ಕೆ 3,000 ದಿಂದ 5,000 ರೂಪಾಯಿ ಪಡೆಯಲಾಗುತ್ತಿದೆ. ಫಿಟ್ನೆಸ್ ಅನ್ನೋದು ಇತ್ತೀಚೆಗೆ ಐಷಾರಾಮಿ ಹವ್ಯಾಸವಾಗಿ ಬದಲಾಗುತ್ತಿದ್ದು, ಶ್ರೀಮಂತರು ತಮ್ಮ ಸ್ಟೇಟಸ್ ತೋರಿಸಿಕೊಳ್ಳುವ ದಾರಿಯಾಗಿದೆ ಅನ್ನೋದು ಕಟು ಸತ್ಯ.

ಫಿಟ್ನೆಸ್ ಎನ್ನುವುದು ಜೀವನಶೈಲಿಯಾಗಬೇಕೇ ಹೊರತು ಕೇವಲ ಫೋಟೋಗಾಗಿ ಮಾಡುವ ಪ್ರದರ್ಶನವಾಗಬಾರದು. ಯಾರೋ ತೋರಿಸುತ್ತಾರೆ ಎಂದು ಸಾವಿರಾರು ರೂಪಾಯಿ ಸುರಿಯುವ ಬದಲು, ಆ ಹಣವನ್ನು ಸರಿಯಾದ ಪೌಷ್ಟಿಕ ಆಹಾರ ಅಥವಾ ದೀರ್ಘಕಾಲದ ತರಬೇತಿಗೆ ಬಳಸುವುದು ಜಾಣತನ.

TAGGED:8 crores collection in a single day in the name of fitness!
Share This Article
Facebook Twitter Copy Link Print
Previous Article ಬಿಂದಿ, ಸಿಂಧೂರಕ್ಕೆ ನಿರ್ಬಂಧ, ಹಿಜಾಬ್‌ಗೆ ಅನುಮತಿ; ಏನಿದು ಲೆನ್ಸ್‌ಕಾರ್ಟ್ ಹೊಸ ನಿಯಮ?
Next Article ಯೋಗೇಶ್ ಗೌಡ ಕೊಲೆ ಕೇಸ್: ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ತೀರ್ಪು ಕೊಟ್ಟ ಕೋರ್ಟ್

Popular Posts

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?