Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಇರಾನ್‌ನಲ್ಲಿ ಕಾನೂನುಬದ್ಧ ಮದುವೆಯ ವಯಸ್ಸು ಎಷ್ಟು?
Uncategorized

ಇರಾನ್‌ನಲ್ಲಿ ಕಾನೂನುಬದ್ಧ ಮದುವೆಯ ವಯಸ್ಸು ಎಷ್ಟು?

Share
2 Min Read
SHARE

ಇರಾನ್‌ನ ಕಾನೂನಿನ ಪ್ರಕಾರ, ಹುಡುಗಿಯರ ಕಾನೂನುಬದ್ಧ ಮದುವೆಯ ವಯಸ್ಸು 13 ವರ್ಷಗಳಾಗಿದ್ದು, ಹುಡುಗರಿಗೆ ಇದು 15 ವರ್ಷಗಳಾಗಿದೆ.

ಮದುವೆಗೂ ಇದೆ ವಿಶೇಷ ವಿನಾಯಿತಿ!

ಇರಾನ್‌ನ ಕಾನೂನುಗಳಲ್ಲಿ ಮದುವೆ ವಿಚಾರದಲ್ಲಿ ಕೆಲವು ವಿಶೇಷ ವಿನಾಯಿತಿಗಳೂ ಇವೆ. ಅದರಂತೆ, ಹುಡುಗಿಯ ತಂದೆ ಅಥವಾ ತಾತನ ಅನುಮತಿ ಮತ್ತು ನ್ಯಾಯಾಲಯದ ಒಪ್ಪಿಗೆ ಇದ್ದರೆ, 13 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿ ಮದುವೆ ನಡೆಯಬಹುದು. ಅಂದರೆ, ಅಲ್ಲಿನ ಕಾನೂನಿನ ಪ್ರಕಾರ 9 ಚಾಂದ್ರಮಾನ ವರ್ಷಗಳ ನಂತರ ಹುಡುಗಿಯರನ್ನು ಕಾನೂನುಬದ್ಧವಾಗಿ ವಯಸ್ಕರೆಂದು ಪರಿಗಣಿಸಲಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮದುವೆಗೆ ಅವಕಾಶ ದೊರೆಯುತ್ತದೆ.

ಮುಂದುವರೆದು, ಇರಾನ್‌ನಲ್ಲಿ ಮದುವೆಯ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರ ನಿರ್ಧಾರಕ್ಕೇ ಹೆಚ್ಚಿನ ಮಾನ್ಯತೆ ಇದೆ. ಅದರಂತೆ, ಹೆಣ್ಣುಮಗಳು ಎಷ್ಟೇ ವಯಸ್ಸಿನವಳಾಗಿದ್ದರೂ ಅವಳ ಮೊದಲ ಮದುವೆಗೆ ತಂದೆ ಅಥವಾ ತಾತನ ಅನುಮತಿ ಕಡ್ಡಾಯವಾಗಿದೆ. ಏತನ್ಮಧ್ಯೆ, ಮದುವೆಯ ನಂತರವೂ ಆಕೆಯ ಸ್ವಾತಂತ್ರ್ಯಕ್ಕೆ ಕೆಲವು ನಿರ್ಬಂಧಗಳಿವೆ. ಉದಾಹರಣೆಗೆ, ಪತ್ನಿಯು ವಿದೇಶ ಪ್ರವಾಸ ಮಾಡಲು ಅಥವಾ ಪಾಸ್‌ಪೋರ್ಟ್ ಪಡೆಯಲು ಪತಿಯ ಅನುಮತಿ ಪಡೆಯುವುದು ಅಲ್ಲಿನ ಕಾನೂನಿನ ಪ್ರಕಾರ ಅಗತ್ಯವಾಗಿದೆ.

ಇನ್ನೂ ಅಲ್ಲಿನ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಇರಾನ್‌ನಲ್ಲಿ ಪ್ರತಿ ವರ್ಷ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಾವಿರಾರು ಹುಡುಗಿಯರು ವಿವಾಹವಾಗುತ್ತಿದ್ದಾರೆ. ಅದರಂತೆ, ಸುಮಾರು ಶೇ. 17 ರಷ್ಟು ಹುಡುಗಿಯರು 18 ವರ್ಷ ತುಂಬುವ ಮೊದಲೇ ಸಂಸಾರ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇರಾನ್‌ನ ನಗರ ಪ್ರದೇಶಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ನಿಲುವುಗಳು ಕಾಣಿಸಿಕೊಳ್ಳುತ್ತಿವೆ. ಅದರಂತೆ, ನಗರ ಪ್ರದೇಶಗಳಲ್ಲಿ ವಾಸಿಸುವ ಯುವತಿಯರು ಸರಾಸರಿ 25ನೇ ವಯಸ್ಸಿನಲ್ಲಿ ಮತ್ತು ಪುರುಷರು 29 ರಿಂದ 30ನೇ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.

ವಿವಿಧ ದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಮದುವೆ ವಯಸ್ಸು ಎಷ್ಟು?

ಜಾಗತಿಕವಾಗಿ ಬಾಲ್ಯವಿವಾಹ ತಡೆಗಟ್ಟಲು ವಿವಿಧ ದೇಶಗಳು ತಮ್ಮದೇ ಆದ ಕಾನೂನುಬದ್ಧ ವಯಸ್ಸಿನ ಮಿತಿಯನ್ನು ಹೊಂದಿದ್ದು, ಅಮೆರಿಕ, ರಷ್ಯಾ, ಜಪಾನ್, ಸ್ವಿಟ್ಜರ್ಲೆಂಡ್, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಮದುವೆಯಾಗಲು ಕನಿಷ್ಠ 18 ವರ್ಷ ತುಂಬಿರಬೇಕು. ಚೀನಾ ಮತ್ತು ನೇಪಾಳ ದೇಶಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅಲ್ಲಿ ಮದುವೆಯ ವಯಸ್ಸನ್ನು ಕನಿಷ್ಠ 20 ವರ್ಷ ಎಂದು ನಿಗದಿಪಡಿಸಲಾಗಿದೆ.

ಆದರೆ, ಪಾಕಿಸ್ತಾನದಲ್ಲಿ ಇಂದಿಗೂ ಹೆಣ್ಣುಮಕ್ಕಳ ಮದುವೆಯ ಕಾನೂನುಬದ್ಧ ವಯಸ್ಸು 16 ವರ್ಷವಾಗಿದೆ. ಒಟ್ಟಾರೆಯಾಗಿ, ಹೆಚ್ಚಿನ ರಾಷ್ಟ್ರಗಳು ಹೆಣ್ಣುಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಹಿತದೃಷ್ಟಿಯಿಂದ 18 ವರ್ಷವನ್ನು ಕಡ್ಡಾಯಗೊಳಿಸುತ್ತಿದ್ದು, ಭಾರತದಲ್ಲೂ ಇದನ್ನು 21ಕ್ಕೆ ಏರಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.

TAGGED:What is the legal marriage age in Iran?
Share This Article
Facebook Twitter Copy Link Print
Previous Article ಬೀದಿ ಬದಿ ಪೋಹಾ, ಜಿಲೇಬಿ ಮಾರಿದ ಮಾಜಿ ಮುಖ್ಯಮಂತ್ರಿ; ವೈರಲ್ ವಿಡಿಯೋ ನೋಡಿ
Next Article PUC result ಇಂದು ಮಧ್ಯಾಹ್ನ ಸೆಕೆಂಡ್ ಪಿಯು ರಿಸಲ್ಟ್: ಎಲ್ಲೆಲ್ಲಿ ಫಲಿತಾಂಶ ಸಿಗುತ್ತೆ?

Popular Posts

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

You Might Also Like

Uncategorized

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read
Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?