https://youtube.com/shorts/cT9AQdRv8BA?si=HVgZ6-lH8mLj32-K
newsics.com
ಹಿಮಾಚಲ ಪ್ರದೇಶ: ಹಸಿವಿನಿಂದ ಪೇರಲ ಹಣ್ಣು (ಜಾಮೂನು) ಕೀಳಲು ಹೋದ ಪುಟ್ಟ ಬಾಲಕಿಯನ್ನು ನಿವೃತ್ತ ಯೋಧನೊಬ್ಬ ಅತ್ಯಂತ ಕ್ರೂರವಾಗಿ ಹಿಂಸಿಸಿ, ಸರಪಳಿಯಿಂದ ಕಟ್ಟಿಹಾಕಿದ ಘಟನೆ ಹಿಮಾಚಲ ಪ್ರದೇಶದ ಊನಾ ಜಿಲ್ಲೆಯಲ್ಲಿ ನಡೆದಿದೆ.
ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದ ಬಾಲಕಿಯೊಬ್ಬಳು ಹಸಿವಿನಿಂದಾಗಿ ನಿವೃತ್ತ ಯೋಧನ ಮನೆಯ ಮುಂದಿದ್ದ ಮರದಿಂದ ಪೇರಲ ಹಣ್ಣನ್ನು ಕಿತ್ತಿದ್ದಾಳೆ. ಇದರಿಂದ ಆಕ್ರೋಶಗೊಂಡ ಆ ವ್ಯಕ್ತಿ, ಮಗುವನ್ನು ಹಿಡಿದು ಚಿತ್ರಹಿಂಸೆ ನೀಡುವುದಲ್ಲದೆ, ಮನೆಯ ಮೆಟ್ಟಿಲ ಬಳಿಯ ಕಬ್ಬಿಣದ ಸರಳುಗಳಿಗೆ ಸರಪಳಿಯಿಂದ ಕಟ್ಟಿಹಾಕಿದ್ದಾನೆ.
ಬಾಲಕಿ ಭಯದಿಂದ ಕಿರುಚಾಡುತ್ತಿರುವುದನ್ನು ಗಮನಿಸಿದ ರೋಹಿತ್ ಎಂಬ ಯುವಕ ಧೈರ್ಯ ಮಾಡಿ ಹತ್ತಿರ ಹೋದಾಗ, ಮಗು ಕೈಮುಗಿದು ತನ್ನನ್ನು ರಕ್ಷಿಸುವಂತೆ ಕಣ್ಣೀರು ಹಾಕುತ್ತಾ ಬೇಡಿಕೊಂಡಿದ್ದಾಳೆ. ಆ ಸಮಯದಲ್ಲಿ ನಿವೃತ್ತ ಯೋಧನು ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾ, ಇವಳು ಕಳ್ಳತನ ಮಾಡಿದ್ದಾಳೆ ಎಂದು ಕೂಗಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರೋಹಿತ್ ತಕ್ಷಣವೇ ಪೊಲೀಸರಿಗೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.