https://youtube.com/shorts/cT9AQdRv8BA?si=HVgZ6-lH8mLj32-K
newsics.com
ತೆಲುಗಿನ ಖ್ಯಾತ ನಟರೊಬ್ಬರು ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ನಟನ ಈ ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪ್ರಭಾಸ್ ಅವರ ಆಪ್ತ ಗೆಳೆಯರೂ ಆಗಿರುವ ನಟ ಶರವಾನಂದ ಅವರು ‘ಬೈಕರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ತೆಲಂಗಾಣದ ಹೈದರಾಬಾದ್ನ ಮೂಸಾಪೇಟನಲ್ಲಿರುವ ಶ್ರೀರಾಮುಲು ಥಿಯೇಟರ್ಗೆ ನಟ ಶರವಾನಂದ ಭೇಟಿ ನೀಡಿದ್ದರು. ಈ ವೇಳೆ ನಟ ರಾಜಶೇಖರ್ ಸಹ ಅವರೊಟ್ಟಿಗಿದ್ದರು.
ಈ ವೇಳೆ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದ ನಟ ಶರವಾನಂದ, ‘ನಾನು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದೇನೆ. ನಿಮಗೆ ಇಷ್ಟವಾದ ಕೆಲ ಸಿನಿಮಾಗಳನ್ನು ಮಾಡಿದ್ದೇನೆ, ಕೆಲವು ಬಹಳ ಒಳ್ಳೆಯ ಸಿನಿಮಾಗಳನ್ನೂ ಮಾಡಿದ್ದೇನೆ. ಆದರೆ ಮತ್ತೊಮ್ಮೆ, ಅಭಿಲಾಷ್ (‘ಬೈಕರ್’ ಸಿನಿಮಾ ನಿರ್ದೇಶಕ) ನನ್ನನ್ನು ಇಲ್ಲಿಗೆ ಕರೆತಂದು ನಿರ್ದೇಶಕನೊಬ್ಬ ತನ್ನ ನಾಯಕನನ್ನು ನಿಜವಾಗಿಯೂ ಪ್ರೀತಿಸಿದಾಗ ಏನಾಗುತ್ತದೆ ಎಂಬುದನ್ನು ತೋರಿಸಿದ್ದಾನೆ. ಈ ಚಿತ್ರಮಂದಿರಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು’ ಎನ್ನುತ್ತಾ, ಕೆಳಗೆ ಮಲಗಿ ಸಾಷ್ಟಾಂಗ ನಮಸ್ಕಾರವನ್ನು ಶರವಾನಂದ ಮಾಡಿದ್ದಾರೆ.