Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಶ್ರೀಮಂತರಾಗಬೇಕಂದ್ರೆ ಈ 5 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ!
ಲೈಫ್‌ಸ್ಟೈಲ್

ಶ್ರೀಮಂತರಾಗಬೇಕಂದ್ರೆ ಈ 5 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ!

Share
2 Min Read
SHARE

.https://youtube.com/shorts/T_aMW9fkptU?si=5dNoX3esn0X-svY6

ಸಾಮಾನ್ಯವಾಗಿ ಮಧ್ಯಮ ವರ್ಗದವರು ಆರ್ಥಿಕ ಬಿಕ್ಕಟ್ಟು ಅನ್ನೋದು ಜೀವನದಲ್ಲಿ ದಿಢೀರನೆ ಎದುರಾಗುತ್ತೆ ಎಂದು ನಂಬ್ತಾರೆ.

ಆದರೆ ಹೂಡಿಕೆ ತಜ್ಞ ವಾರೆನ್ ಬಫೆಟ್ ಪ್ರಕಾರ, ಆರ್ಥಿಕ ಬಿಕ್ಕಟ್ಟು ದುತ್ತೆಂದು ಬರೋಲ್ಲ. ನಾವು ದಿನನಿತ್ಯ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕ್ರಮೇಣ ಬೆಳೆದು ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ನೋಡೋಕೆ ಸಣ್ಣ ತಪ್ಪುಗಳಂತೆ ಕಾಣುತ್ತವೆ. ಕಾಲಾನಂತರದಲ್ಲಿ ನಮ್ಮ ಆರ್ಥಿಕ ಸ್ಥಿತಿಯನ್ನೇ ಬುಡಮೇಲೂ ಮಾಡಿಹಾಕುತ್ತವೆ. ಆದ್ದರಿಂದ, ಶ್ರೀಮಂತರಾಗಲು ಈ ಕೆಳಗಿನ ಅಭ್ಯಾಸಗಳಿಂದ ದೂರವಿರುವುದು ಒಳಿತು.

ಈಗಂತೂ ಪ್ರತಿಯೊಬ್ಬರ ಬಳಿ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತೆ. ಅದು ನಮಗೆ ಅಗತ್ಯವಿದೆಯೇ ಇಲ್ವೋ ಅನ್ನೋದು ಮುಖ್ಯವಾಗಿರೊಲ್ಲ. ಬ್ಯಾಂಕಿಂಗ್ ಜಾಹೀರಾತು ನೋಡಿ ಕ್ರೆಡಿಟ್ ಕಾರ್ಡ್‌ಗೆ ಅಪ್ಲೆ ಮಾಡುವವರೇ ಹೆಚ್ಚು. ಕ್ರೆಡಿಟ್ ಕಾರ್ಡ್ ಬಳಸುವ ಅಬ್ಬರದಲ್ಲಿ ನಾವು ಅದರ ಹಿಂದಿರುವ ಭಾರಿ ಹುನ್ನಾರವನ್ನು ಮರೆಯುತ್ತೇವೆ. ಶೇ. 18ಕ್ಕಿಂತ ಹೆಚ್ಚಿನ ಬಡ್ಡಿ ಪಾವತಿಸುವುದು ಎಂದರೆ ಕಷ್ಟಪಟ್ಟು ದುಡಿದ ಹಣವನ್ನು ಸುಮ್ಮನೆ ಬ್ಯಾಂಕಿಗೆ ಸುರಿದಂತೆ. ಮೊದಲು ದುಬಾರಿ ಬಡ್ಡಿಯ ಸಾಲಗಳನ್ನು ತೀರಿಸುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ. ಈ ಬಡ್ಡಿಯ ವಿಷವರ್ತುಲದಿಂದ ಎಷ್ಟು ಬೇಗ ಹೊರಬರುತ್ತೀರೋ, ಅಷ್ಟು ಬೇಗ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ರಾತ್ರೋರಾತ್ರಿ ಶ್ರೀಮಂತರಾಗುವ ಆತುರ ಹೆಚ್ಚಿನವರನ್ನು ನಷ್ಟಕ್ಕೆ ತಳ್ಳುತ್ತದೆ. ಗಿಡ ಮರವಾಗಿ ಬೆಳೆಯಲು ಹೇಗೆ ಸಮಯ ಬೇಕೋ, ಹಾಗೆಯೇ ಹಣ ಬೆಳೆಯಲು ಕೂಡ ತಾಳ್ಮೆ ಅಗತ್ಯ. ಹೆಚ್ಚಿನವರು ಮೊದಲು ಖರ್ಚು ಮಾಡಿ, ಉಳಿದರೆ ಮಾತ್ರ ಉಳಿತಾಯ ಮಾಡುತ್ತಾರೆ. ಆದರೆ ಬಫೆಟ್ ಹೇಳುವ ಸರಿಯಾದ ಕ್ರಮವೆಂದರೆ: ಮೊದಲು ಹೂಡಿಕೆಗೆ ಹಣ ಮೀಸಲಿಡಿ, ಅನಂತರ ಉಳಿದ ಹಣದಲ್ಲಿ ನಿಮ್ಮ ಖರ್ಚುಗಳನ್ನು ನಿಭಾಯಿಸಿ.
ಕೇವಲ ಸಮಾಜದಲ್ಲಿ ಗೌರವ ಪಡೆಯಲು, ಒಣಪ್ರತಿಷ್ಠೆ ಪ್ರದರ್ಶನಕ್ಕಾಗಿ ದೊಡ್ಡ ಮನೆ, ಕಾರು ಖರೀದಿಸುವುದು ಬುದ್ಧಿವಂತಿಕೆಯಲ್ಲ. ಇದಕ್ಕಾಗಿ ಪಡೆಯುವ ಬ್ಯಾಂಕ್ ಸಾಲ, ಅದರ ದುಬಾರಿ ಬಡ್ಡಿ, ಅಥವಾ ಮಾಸಿಕ ಕಂತುಗಳು(EMI) ನಿಮ್ಮ ಆದಾಯದ ಬಹುಭಾಗವನ್ನು ನುಂಗಿ ಹಾಕುತ್ತವೆ. ಇದರಿಂದ ಉಳಿತಾಯ ಮತ್ತು ಹೂಡಿಕೆಗೆ ಹಣವೇ ಉಳಿಯುವುದಿಲ್ಲ. ಮನೆ ಎನ್ನುವುದು ವಾಸಿಸಲು ನೆಮ್ಮದಿ ನೀಡುವ ಜಾಗವಾಗಿರಬೇಕೇ ಹೊರತು, ಪ್ರದರ್ಶನದ ವಸ್ತುವಾಗಬಾರದು.

ಲಕ್ಸುರಿ ಜೀವನಕ್ಕಾಗಿ ಜೂಜಾಟ ಅಥವಾ ಲಾಟರಿಯಂತಹ ಸುಲಭ ದಾರಿಗಳನ್ನು ಆಯ್ದುಕೊಳ್ಳುವುದು ಅಪಾಯಕಾರಿ. ಲಾಟರಿಯಲ್ಲಿ ಹಣ ಸಿಗುತ್ತದೆ ಎಂಬ ಭ್ರಮೆಯಲ್ಲಿ ಮಾಡುವ ಸಣ್ಣ ಹೂಡಿಕೆಗಳು ಕೂಡ ಮುಂದೆ ನಿಮ್ಮನ್ನು ದೊಡ್ಡ ನಷ್ಟಕ್ಕೆ ಸಿಲುಕಿಸಬಹುದು. ಕಷ್ಟಪಟ್ಟು ದುಡಿದ ಹಣವನ್ನು ಅದೃಷ್ಟದ ಮೇಲೆ ಪಣಕ್ಕಿಡುವ ಬದಲು, ಸುರಕ್ಷಿತ ಮಾರ್ಗಗಳಲ್ಲಿ ಹೂಡಿಕೆ ಮಾಡುವುದು ಬಫೆಟ್ ನೀಡುವ ಅಮೂಲ್ಯ ಸಲಹೆ.
ಅನೇಕರು ಕೇವಲ ಸ್ಟೇಟಸ್‌ಗಾಗಿ ಸಾಲ ಮಾಡಿ ಹೊಸ ಕಾರುಗಳನ್ನು ಖರೀದಿಸುತ್ತಾರೆ. ಕಾರು ರಸ್ತೆಗೆ ಇಳಿಯುತ್ತಿದ್ದಂತೆಯೇ ಅದರ ಮೌಲ್ಯ ಕಡಿಮೆಯಾಗುತ್ತಾ ಹೋಗುತ್ತದೆ, ಆದರೆ ನಿಮ್ಮ ಸಾಲದ ಕಂತುಗಳು ಮಾತ್ರ ಹಾಗೆಯೇ ಇರುತ್ತವೆ. ಸ್ವತಃ ವಾರೆನ್ ಬಫೆಟ್ ಅವರೇ ಹಲವು ವರ್ಷಗಳ ಕಾಲ ಹಳೆಯ ಕಾರನ್ನೇ ಬಳಸುತ್ತಿದ್ದರು. ಪ್ರತಿಷ್ಠೆಗಾಗಿ ಹೊಸ ಕಾರು ಖರೀದಿಸುವುದು ಆರ್ಥಿಕವಾಗಿ ನಷ್ಟದ ಹಾದಿಯಾಗಿದೆ. ಹೀಗಾಗಿ ನೀವು ಶ್ರೀಮಂತರಾಗಲು ಬಯಸಿದರೆ ಈ ಅಭ್ಯಾಸಗಳನ್ನ ಇಂದೇ ಬಿಟ್ಟುಬಿಡಿ, ಹಣ ಉಳಿತಾಯ, ಹೂಡಿಕೆಯ ಕಡೆ ಗಮನಹರಿಸಲು ಪ್ರಾರಂಭಿಸಿ.

 

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ 05-04-2026, ಭಾನುವಾರ, ಇಂದು‌ ನಿಮ್ಮ ಅದೃಷ್ಟದ ದಿಕ್ಕು, ಬಣ್ಣ ಯಾವುದು?

TAGGED:Want to get rich? Quit these 5 habits today!
Share This Article
Facebook Twitter Copy Link Print
Previous Article ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ : ಏಪ್ರಿಲ್.10ರಿಂದ ಹೊಸ ನಿಯಮ ಜಾರಿ
Next Article ಮನೆಯವರಿಗೆ ವಿಡಿಯೋ ಕಾಲ್ ಮಾಡಿ ಬಳಿಕ ತಲೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮ*ಹತ್ಯೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?