Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಡೊನಾಲ್ಡ್ ಟ್ರಂಪ್ ಸತ್ತರಾ? ಇದು ನಿಜವಾ?
Uncategorized

ಡೊನಾಲ್ಡ್ ಟ್ರಂಪ್ ಸತ್ತರಾ? ಇದು ನಿಜವಾ?

Share
2 Min Read
SHARE

ಡೊನಾಲ್ಡ್ ಟ್ರಂಪ್ ಅವರೇ ಇನ್ನಿಲ್ಲವಾಗಿದ್ದಾರೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬತೊಡಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್​ಗೆ  ದಾಖಲಿಸಲಾಗಿದೆ.

ಅವರು ಸತ್ತೇ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದಾರೆ. ಅವರಿಗೇನೂ ಆಗಿಲ್ಲ ಎನ್ನುವ ಪ್ರತಿವಾದಗಳೂ ಇವೆ. ಆದರೆ, ಟ್ರಂಪ್ ಅನಾರೋಗ್ಯಗೊಂಡಿರುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಹೊರಬಂದಿಲ್ಲ.

ಟ್ರಂಪ್ ಅವರನ್ನು ವಾಲ್ಟರ್ ರೀಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಕೆಲ ವರದಿಗಳು ಹೇಳುತ್ತಿವೆ ಎಂದು ವಿಜ್ಞಾನಿ, ವೈದ್ಯಕೀಯ ತಜ್ಞೆ ಎಂದು ಹೇಳಿಕೊಳ್ಳುವ ಡಾ. ಜೇನ್ ರೂಬಿ ಎಂಬಾಕೆ ಟ್ವೀಟ್ ಮಾಡಿದ್ದಾರೆ. ವಾಲ್ಟರ್ ರೀಡ್ ಆಸ್ಪತ್ರೆಯ ಸುತ್ತಲಿನ ರಸ್ತೆಗಳನ್ನು ಮುಚ್ಚಲಾಗಿದೆ. ಅಧ್ಯಕ್ಷರು ಇವತ್ತು ಸಾರ್ವಜರಿಕರಿಗೆ ಕಾಣಿಸಿಕೊಳ್ಳುವುದಿಲ್ಲವೆಂದು ಶ್ವೇತ ಭವನ ಪ್ರಕಟಿಸಿದೆ ಎಂದು ತಮ್ಮ ಮಾಹಿತಿಗೆ ಇಂಬುಕೊಡುವ ಸಂಗತಿಗಳನ್ನು ಡಾ. ಜೇನ್ ತಿಳಿಸಿದ್ದಾರೆ.

ಚಾರ್ಲಿ ಕಿರ್ಕ್ ಎನ್ನುವ ವ್ಯಕ್ತಿಯೊಬ್ಬರು, ಡೊನಾಲ್ಡ್ ಟ್ರಂಪ್ ಅವರ ಬೆಂಗಾವಲು ವಾಹನಗಳು ಆಸ್ಪತ್ರೆಯತ್ತ ಸಾಗುತ್ತಿರುವ ದೃಶ್ಯದ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಈ ವಿಡಿಯೋ 2024ರ ಜುಲೈನದ್ದು. ಚುನಾವಣಾ ಪ್ರಚಾರ ಭಾಷಣದ ವೇಳೆ ಟ್ರಂಪ್ ಗಾಯಗೊಂಡಾಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗಿನ ದೃಶ್ಯ ಇದು ಎಂದು ಅನೇಕ ಜನರು ಸ್ಪಷ್ಟನೆ ಕೊಟ್ಟಿದ್ದಾರೆ.

2024ರ ಜುಲೈನಲ್ಲಿ ಟ್ರಂಪ್ ಅವರನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿತ್ತು. ಗುಂಡು ಕಿವಿಯನ್ನು ಸವರಿಕೊಂಡು ಹೋಗಿತ್ತು. ಟ್ರಂಪ್ ಕೊನೆ ಕ್ಷಣದಲ್ಲಿ ತಲೆ ಅಲುಗಾಡಿಸಿದ ಪರಿಣಾಮ ಅವರು ಸಾವಿನಿಂದ ಬಚಾವಾಗಿದ್ದರು. ಆಗ ಗಾಯಗೊಂಡಿದ್ದ ಅವರನ್ನು ಪೆನ್​ಸಿಲ್ವೇನಿಯಾದ ಬಟ್ಲರ್​ನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಆದರೆ, ಈಗ ವಾಲ್ಟರ್ ರೀಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ. ಮೇರಿಲ್ಯಾಂಡ್​ನ ಬೆಥೆಸಾದಲ್ಲಿರುವ ವಾಲ್ಟರ್ ರೀಡ್ ಆಸ್ಪತ್ರೆಯಲ್ಲಿ ಐದು ತಿಂಗಳ ಹಿಂದೆ ಟ್ರಂಪ್ ಅವರನ್ನು ದಾಖಲಿಸಲಾಗಿತ್ತು ಎಂದು ಕೆಲ ಓದುಗರು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ಸತ್ತಿದ್ದಾರೆ, ಸ್ಟೀಫನ್ ಮಿಲ್ಲರ್ ಅಧ್ಯಕ್ಷಗಿರಿ ನಿಭಾಯಿಸುತ್ತಿದ್ದಾರಾ?

ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ನಿನ್ನೆ ಇರಾನ್ ವಿರುದ್ಧ ಎಚ್ಚರಿಕೆಯ ಸಂದೇಶ ಪೋಸ್ಟ್ ಮಾಡಿದ್ದರು. ಹಾರ್ಮುಜ್ ಜಲಸಂಧಿ ತೆರೆಯಲು ಅಥವಾ ಒಪ್ಪಂದ ಮಾಡಿಕೊಳ್ಳಲು ಇರಾನ್​ಗೆ ನೀಡಿದ್ದ 10 ದಿನಗಳ ಡೆಡ್​ಲೈನ್ ಮುಗಿಯುತ್ತಾ ಬಂದಿದೆ. ಅವರ ಮೇಲೆ ನರಕ ವಕ್ಕರಿಸಲು 48 ಗಂಟೆ ಮಾತ್ರ ಇದೆ ಎಂದು ಟ್ರಂಪ್ ಬರೆದುಕೊಂಡಿದ್ದರು.

ಆದರೆ, ಟ್ರಂಪ್ ಈ ಟ್ವೀಟ್ ಬರೆದಿಲ್ಲ. ಅವರು ಈಗ ವಾಲ್ಟರ್ ರೀಡ್​ನಲ್ಲಿ ಇದ್ದಾರೆ. ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದಾರೆ. ಶ್ವೇತ ಭವನದ ಅಧಿಕಾರಿ ಸ್ಟೀಫನ್ ಮಿಲ್ಲರ್ ಅವರು ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಆದರೆ, ಹೆಚ್ಚಿನ ಆನ್​ಲೈನ್ ಸಮುದಾಯವು ಈ ಸುದ್ದಿಯನ್ನು ಸುಳ್ಳು ಎಂದು ಹೇಳಿವೆ. ಹಿಂದೆಲ್ಲಾ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೊದಲಾದ ಬೇರೆ ಬೇರೆ ನಾಯಕರ ವಿಷಯದಲ್ಲೂ ಇಂಥ ಸಾವಿನ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವುದುಂಟು.

TAGGED:Is Donald Trump dead? News circulating on social media; is it true or a rumor?
Share This Article
Facebook Twitter Copy Link Print
Previous Article ಸ್ಟೇಟಸ್‌ಗಾಗಿ ಹೊಸ ಕಾರ್ ತಗೋತಿದ್ದೀರಾ? ಈ 5 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
Next Article Alcohol more expensive ವಾರ್ ಎಫೆಕ್ಟ್: ಮದ್ಯ ಮತ್ತಷ್ಟು ದುಬಾರಿ ಸಾಧ್ಯತೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read
Uncategorized

Karnataka Rain: ನಾಳೆಯ ಹವಾಮಾನ: ಕರ್ನಾಟಕದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?