Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಫೋಟೋಶೂಟ್‌ಗಾಗಿ ತಿಂಗಳ ಹಿಂದೆ ಬಣ್ಣ ಬಳಿಸಿಕೊಂಡಿದ್ದ ಆನೆ ಸಾವು! ವಿಡಿಯೋ ನೋಡಿ
ದೇಶಪ್ರಮುಖವಿದೇಶವೈರಲ್

ಫೋಟೋಶೂಟ್‌ಗಾಗಿ ತಿಂಗಳ ಹಿಂದೆ ಬಣ್ಣ ಬಳಿಸಿಕೊಂಡಿದ್ದ ಆನೆ ಸಾವು! ವಿಡಿಯೋ ನೋಡಿ

Share
1 Min Read
SHARE

ಗುಲಾಬಿ ಬಣ್ಣದ ಆನೆ ಮೇಲೆ ಅರೆಬೆತ್ತಲೆ ಫೋಟೋಶೂಟ್: ಮುಂದೇನಾಯ್ತು?

newsics.com

ಫೋಟೋ ಶೂಟ್‌ಗಾಗಿ ತಿಂಗಳ ಹಿಂದೆ ಬಣ್ಣ ಬಳಿಸಿಕೊಂಡು ಸುದ್ದಿಯಾಗಿದ್ದ ಜೈಪುರದ ಜನಪ್ರಿಯ ಆನೆ ‘ಚಂಚಲ್’ ಸಾವಿಗೀಡಾಗಿದೆ.

ವಿದೇಶಿ ಕಲಾವಿದೆಯೊಬ್ಬಳು ಆನೆಗೆ ಬಣ್ಣ ಬಳಿದಿದ್ದಲ್ಲದೆ ಅದರ ಮೇಲೆ ಅರೆಬೆತ್ತಲೆಯಾಗಿ ಕುಳಿತು ಫೋಟೋಶೂಟ್‌ ಮಾಡಿಸಿಕೊಂಡ ಒಂದೇ ತಿಂಗಳಲ್ಲಿ ಆನೆ ಚಂಚಲ್ ಮೃತಪಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಷ್ಯಾದ ಛಾಯಾಗ್ರಾಹಕಿಯೊಬ್ಬರು ತಮ್ಮ ಫೋಟೊಶೂಟ್‌ಗಾಗಿ ಈ ಆನೆಗೆ ಸಂಪೂರ್ಣವಾಗಿ ಗುಲಾಬಿ ಬಣ್ಣ ಬಳಿದಿದ್ದರು. ಈ ಘಟನೆ ನಡೆದು ಕೇವಲ ಒಂದು ತಿಂಗಳ ಅಂತರದಲ್ಲಿ ಆನೆ ಮೃತಪಟ್ಟಿರುವುದು ಪ್ರಾಣಿ ಪ್ರೇಮಿಗಳ ಬೇಸರಕ್ಕೆ ಎಡೆಮಾಡಿಕೊಟ್ಟಿದೆ.

ಕಂಟೇನರ್ ಗೆ ಕಾರು ಡಿಕ್ಕಿ : ನವವಿವಾಹಿತೆ ಸೇರಿ ಇಬ್ಬರು ಸ್ಥಳದಲ್ಲೇ ಸಾವು

ರಷ್ಯಾದ ಛಾಯಾಗ್ರಾಹಕಿ ಜೂಲಿಯಾ ಬುರುಲೇವಾ ಎಂಬುವರು ರಾಜಸ್ಥಾನದ ಜೈಪುರದಲ್ಲಿ ವಿಶೇಷ ಫೋಟೊಶೂಟ್ ಆಯೋಜಿಸಿದ್ದರು. ಇದಕ್ಕಾಗಿ ಅವರು 65 ವರ್ಷದ ಚಂಚಲ್ ಎಂಬ ಆನೆಯ ಮೈಗೆಲ್ಲಾ ಗುಲಾಬಿ ಬಣ್ಣ ಹಚ್ಚಿದ್ದರು. ಆನೆಯ ಮೇಲೆ ಮಾಡೆಲ್ ಒಬ್ಬರನ್ನು ಕುಳ್ಳಿರಿಸಿ ತೆಗೆದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಗಲೇ ಹಲವರು ಪ್ರಾಣಿಯ ಚರ್ಮಕ್ಕೆ ಬಣ್ಣ ಹಚ್ಚುವುದು ಅದಕ್ಕೆ ಹಿಂಸೆ ಎಂದು ಕಿಡಿಕಾರಿದ್ದರು. ಆನೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಈ ಫೋಟೊಶೂಟ್‌ನಿಂದಲೇ ಆನೆಗೆ ತೊಂದರೆಯಾಗಿದೆ ಎಂದು ನೆಟ್ಟಿಗರು ಛಾಯಾಗ್ರಾಹಕಿಯನ್ನು ದೂರುತ್ತಿದ್ದಾರೆ.

ಆದರೆ ಈ ಆರೋಪಗಳನ್ನು ಛಾಯಾಗ್ರಾಹಕಿ ಜೂಲಿಯಾ ನಿರಾಕರಿಸಿದ್ದಾರೆ. ಫೋಟೊಶೂಟ್‌ಗಾಗಿ ತಾನು ಕೇವಲ ನೈಸರ್ಗಿಕ ಮತ್ತು ಸಾವಯವ ಬಣ್ಣಗಳನ್ನು ಬಳಸಿದ್ದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಹಬ್ಬಗಳ ಸಮಯದಲ್ಲಿ ಬಳಸುವಂತಹ ಸುರಕ್ಷಿತ ಬಣ್ಣವನ್ನೇ ಆನೆಗೆ ಹಚ್ಚಲಾಗಿತ್ತು, ಇದರಿಂದ ಪ್ರಾಣಿಯ ಆರೋಗ್ಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇತ್ತ ಜೈಪುರ ಆನೆಗಳ ಸಂಘದ ಅಧ್ಯಕ್ಷ ಬಲ್ಲು ಖಾನ್ ಅವರು ಪ್ರತಿಕ್ರಿಯಿಸಿ, ಚಂಚಲ್ ಆನೆಯದ್ದು ನೈಸರ್ಗಿಕ ಸಾವು ಎಂದು ತಿಳಿಸಿದ್ದಾರೆ. ಆನೆಗೆ ವಯಸ್ಸಾಗಿತ್ತು ಮತ್ತು ಸಾವಿಗೂ ಮುನ್ನ ಬಣ್ಣವನ್ನು ಸಂಪೂರ್ಣವಾಗಿ ಅಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೂ ಕೂಡ ಸುಂದರವಾದ ಚಿತ್ರಗಳಿಗಾಗಿ ಪ್ರಾಣಿಗಳನ್ನು ಈ ರೀತಿ ಬಳಸಿಕೊಳ್ಳುವ ಬದಲು ಕೃತಕ ಬುದ್ಧಿಮತ್ತೆಯಂತಹ (AI) ತಂತ್ರಜ್ಞಾನ ಬಳಸಬಹುದಿತ್ತು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

This Elephant has died 💔
My question is where are the Dog lovers now ? #JusticeforChanchal #PinkElephant pic.twitter.com/iPFGKgARh7

— KOSH GUPTA 🇮🇳 (@koshgupta) April 1, 2026

TAGGED:An elephant that was painted a month ago for a photoshoot for a foreign woman has died!
Share This Article
Facebook Twitter Copy Link Print
Previous Article ಕಂಟೇನರ್ ಗೆ ಕಾರು ಡಿಕ್ಕಿ : ನವವಿವಾಹಿತೆ ಸೇರಿ ಇಬ್ಬರು ಸ್ಥಳದಲ್ಲೇ ಸಾವು
Next Article 40 ಲಕ್ಷ ಭಾರತೀಯರಿಂದ ವಿವಾಹೇತರ ಡೇಟಿಂಗ್ ಆ್ಯಪ್ ಬಳಕೆ : ಬೆಂಗಳೂರಿಗೆ ಅಗ್ರಸ್ಥಾನ

Popular Posts

Tragedy ಭೀಕರ ದುರಂತ; ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆ ಕುಸಿದು 13 ಪ್ರಯಾಣಿಕರು ದುರ್ಮರಣ

1 Min Read

Uber Intercity Report ದೇಶದ ಟಾಪ್ ‘ಇಂಟರ್‌ಸಿಟಿ’ ಮಾರ್ಗಗಳಲ್ಲಿ ಬೆಂಗಳೂರು-ಮೈಸೂರಿಗೆ 3ನೇ ಸ್ಥಾನ

1 Min Read

BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ

1 Min Read

Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ

2 Min Read

You Might Also Like

ಪ್ರಮುಖದೇಶ

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

2 Min Read
ಅನಾವರಣದೇಶಪ್ರಮುಖ

Mansoon Updats ISRO ಉಪಗ್ರಹ ಸೆರೆಹಿಡಿದ ಅಪರೂಪದ ಚಿತ್ರ; ಭಾರತದ 95% ಭಾಗ ದಟ್ಟ ಮಳೆಮೋಡಗಳ ಹೊದಿಕೆಯಲ್ಲಿ, ಮುಂಗಾರು ಮತ್ತಷ್ಟು ಬಿರುಸು

2 Min Read
Sportsದೇಶ

CWG 2026: ಲವ್ಲಿನಾ ಬೊರ್ಗೊಹೈನ್‌ಗೆ ಭಾರತದ ಮೊದಲ ಪದಕ ಖಚಿತ

2 Min Read
ದೇಶ

Election Commission SIR Updates ಕರ್ನಾಟಕದಲ್ಲಿ 52.97 ಲಕ್ಷ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?