https://youtube.com/shorts/b7DblvgZf1A?si=BCR0sxsn8Xzh1cnn
newsics.com
ಬೆಳಗಾವಿ : ಬೀದಿನಾಯಿಗಳ ಕಾಟ ಮಿತಿಮೀರಿದ್ದು, ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿಯಲ್ಲಿ 8-10 ನಾಯಿಗಳ ಹಿಂಡು ಯುವಕನೋರ್ವನನ್ನು ಬೆನ್ನಟ್ಟಿ ಭೀಕರವಾಗಿ ದಾಳಿ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಬಸವರಾಜ ಹೆಬ್ಬಾಳೆ (30) ಎಂಬುವವರು ಪ್ರಸ್ತುತ ಕೋಮಾ ಸ್ಥಿತಿ ತಲುಪಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ದೇಹದ ವಿವಿಧ ಭಾಗಗಳಿಗೆ ನಾಯಿಗಳು ಮನಬಂದಂತೆ ಕಚ್ಚಿದ್ದು, ಗಂಭೀರ ಸ್ಥಿತಿಯಲ್ಲಿರುವ ಯುವಕನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಳಗಾವಿ ನಗರದಲ್ಲೂ ತಾವರಪ್ಪ (48) ಎಂಬುವವರ ಮೇಲೆ ನಾಯಿ ದಾಳಿ ನಡೆದಿದ್ದು, ಅವರು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ 15 ದಿನಗಳ ಹಿಂದಷ್ಟೇ ಇದೇ ಗ್ರಾಮದಲ್ಲಿ 4 ವರ್ಷದ ಮಗುವಿನ ಮೇಲೂ ನಾಯಿಗಳು ದಾಳಿ ನಡೆಸಿದ್ದವು.
ಸರಣಿ ನಾಯಿ ದಾಳಿಗಳಿಂದ ಜಿಲ್ಲೆಯ ಜನತೆ ಕಂಗಾಲಾಗಿದ್ದು, ಕೂಡಲೇ ಬೀದಿನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ದಅಸಮಾಧಾನವನ್ನು ಹೋರ ಹಾಕುತ್ತಿದ್ದಾರೆ.
ಬಸ್ ನಿಲ್ದಾಣದ ಕಾರಿಡಾರ್‌ಗೆ ನುಗ್ಗಿದ ಬಸ್: ಮಗು ಸೇರಿ ನಾಲ್ವರಿಗೆ ಗಾಯ