https://youtube.com/shorts/b7DblvgZf1A?si=BCR0sxsn8Xzh1cnn
newsics.com
ವಸಾಯಿ: ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಓರ್ವ ಬಾಲಕನನ್ನು ದರ ದರನೆ ಎಳೆದು ತಲೆಕೆಳಗಾಗಿಸಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮತ್ತು ಮಗುವಿನ ತಂದೆಯ ನಡುವಿನ ಸಣ್ಣ ಜಗಳ ನಡೆದಿತ್ತು. ಕೋಪದ ಭರದಲ್ಲಿ, ಸಂದೀಪ್ ಪವಾರ್ ಎಂದು ಗುರುತಿಸಲಾದ ಆರೋಪಿ ಅಮಾಯಕ ಮಗುವಿನ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
https://www.newsics.com/2026/04/01/russian-military-plane-crashes-into-rock-29-dead/