https://youtube.com/shorts/wcgOU8WO_jc?si=ko9vW9TLLev8Rg2l
newsics.com
ಕಳ್ಳರ ಕೆಲಸವೇ ಕಳ್ಳತನ ಮಾಡುವುದು. ಹಣ ಬರುತ್ತೆ ಅಂದರೆ ಏನು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಚಿನ್ನ-ಬೆಳ್ಳಿ, ಹಣ, ಬೈಕ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಗ್ಯಾಂಗ್ ಮಾಡುವುದನ್ನ ನೋಡಿದ್ದೇವೆ. ಅಲ್ಲದೇ ಚಪ್ಪಲಿ ಕಳ್ಳರು ಸಹ ಇದ್ದಾರೆ. ಆದ್ರೆ, ಇತ್ತೀಚೆಗೆ ಮಹಿಳೆಯರ ಒಳ ಉಡುಪು ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ.
ಇದೀಗ ವಿಕೃತಕಾಮಿಯೊಬ್ಬ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.
ತೊಳೆದ ಒಣಗಲು ಹಾಕಿದ ಬಟ್ಟೆಗಳಲ್ಲಿ ಮಹಿಳೆಯರ ಒಳಉಡುಪುಗಳು ಕಳ್ಳತನವಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಮನೆಗಳಲ್ಲಿ ಒಂಟಿಯಾಗಿರುವ ಮಹಿಳೆಯರು ವೈರಲ್ ವಿಡಿಯೋ ನೋಡಿ ಆತಂಕಗೊಂಡಿದ್ದಾರೆ.
ಸದ್ಯ ಈ ವಿಡಿಯೋ ಸ್ಥಳೀಯಮಟ್ಟದಲ್ಲಿ ವೈರಲ್ ಆಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಿಕೃತಕಾಮಿ ಮುಖಚಹರೆ ಸರಿಯಾಗಿ ಕಾಣಿಸಿಲ್ಲ. ಹಾಗಾಗಿ ಯಾರು ಈ ವ್ಯಕ್ತಿ? ಸ್ಥಳೀಯ ನಿವಾಸಿಯಾ ಅಥವಾ ಬೇರೆ ಪ್ರದೇಶದವನಾ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
https://www.newsics.com/2026/03/31/horrific-massacre-in-mining-area-death-toll-rises-to-73/