https://youtube.com/shorts/qIu1k1AjcVg?si=asT_CsSQI4v14g8C
newsics.com
ಇಳಿ ವಯಸ್ಸಿನಲ್ಲಿ ತಾವೇ ದುಡಿದು ತಿನ್ನುವವರನ್ನು ನೋಡುವಾಗ ನಿಜಕ್ಕೂ ಖುಷಿ ಎನಿಸುತ್ತದೆ. ಇದಕ್ಕೆ ಉದಾಹರಣೆಯಂತಿದ್ದಾರೆ ಈ ವೃದ್ಧೆ. ರಸ್ತೆ ಬದಿಯಲ್ಲಿ ಕಾರನ್ನು ತೊಳೆಯುವ ಕಾಯಕವನ್ನು ನಂಬಿ ಬದುಕುತ್ತಿರುವ ಈ ಅಜ್ಜಿಗೆ ವ್ಯಕ್ತಿಯೊಬ್ಬರು ಅನಿರೀಕ್ಷಿತವಾಗಿ ದೊಡ್ಡ ಮೊತ್ತದ ಹಣ ನೀಡಿ ಸಹಾಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ.
ಈ ವಿಡಿಯೋದಲ್ಲಿ ವಯೋವೃದ್ಧೆಯೊಬ್ಬರು ಕಾರುಗಳನ್ನು ತೊಳೆದು ಹಣ ಸಂಪಾದನೆ ಮಾಡುತ್ತಿದ್ದಾರೆ. ಕಾರಿನ ಗ್ಲಾಸ್ಗಳನ್ನು ಅದರ ಷೀಟ್ಗಳನ್ನು ತೊಳೆದು ಜನರು ನೀಡುವ ಹಣವನ್ನು ತೆಗೆದುಕೊಂಡು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಆದರೆ ಈ ಅಜ್ಜಿ ಇಷ್ಟೆಲ್ಲಾ ಸದ್ದು ಮಾಡಲು ಕಾರಣ, ಅಜ್ಜಿಯನ್ನು ಗಮನಿಸಿದ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಉದ್ದೇಶಪೂರ್ವಕವಾಗಿ ಗಲೀಜು ಮಾಡಿಕೊಂಡು ಅಜ್ಜಿಯನ್ನು ಕರೆದು ಕ್ಲೀನ್ ಮಾಡಿಸಿದರು.
ಹೀಗೆ ಕ್ಲೀನ್ ಮಾಡಿಸಿದ ಬಳಿಕ, ಆಕೆಯ ಕೈಗೆ ಭಾರಿ ಮೊತ್ತವನ್ನು ನೀಡಿದಾಗ ಅಜ್ಜಿ ಶಾಕ್ ಆಗಿ ಹೋದರು. ತಾವೇನು ಕನಸು ಕಾಣುತ್ತಿದ್ದೆವೆಯೋ ಎಂದು ಆಕೆಗೆ ಅನ್ನಿಸಿತೋ ಏನೊ. ಕೊನೆಗೆ ವಾಸ್ತವಕ್ಕೆ ಮರಳಿ, ದುಡ್ಡು ನೀಡಿದ ವ್ಯಕ್ತಿಗೆ ಮನಃಪೂರ್ವಕವಾಗಿ ಆಶೀರ್ವದಿಸಿದರು.
https://www.instagram.com/reel/DUtC9m4k_17/?igsh=MW83M2RlaDZjYWZ2bQ==