Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮದುವೆಯಾಗಿ ಒಂದೂವರೆ ತಿಂಗಳೊಳಗೆ ಹೆಂಡತಿ ನಾಪತ್ತೆ
ಕರ್ನಾಟಕಪ್ರಮುಖ

ಮದುವೆಯಾಗಿ ಒಂದೂವರೆ ತಿಂಗಳೊಳಗೆ ಹೆಂಡತಿ ನಾಪತ್ತೆ

Share
2 Min Read
SHARE

newsics.com

ಮದುವೆಯಾಗಿ ಇನ್ನೂ ಒಂದೂವರೆ ತಿಂಗಳು ಕಳೆದಿರುವಾಗಲೇ ನವವಧು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಮದುವೆಯಾದ ಎರಡು ತಿಂಗಳೊಳಗೆ ಪತ್ನಿ ಗಂಡನನ್ನು ಬಿಟ್ಟು ನಾಪತ್ತೆಯಾಗಿದ್ದಾರೆ. ಇತ್ತ ಸೊಸೆ ಮನೆ ಬಿಟ್ಟು ಹೋಗಿರೋದಕ್ಕೆ ನಾಗರಾಜ್ ತಂದೆ ಆಘಾತದಿಂದ ಮೃತಪಟ್ಟಿದ್ದಾರೆ, ಇದೀಗ ನಾಗರಾಜ್ ಪತ್ನಿಗಾಗಿ ಠಾಣೆ ಮೆಟ್ಟಿಲೇರಿದ್ದಾರೆ.

ಘಟನೆ ಹಿನ್ನೆಲೆ ನೋಡುವುದಾದರೆ, ನಾಗರಾಜ್ ಮತ್ತು ಸಂಜನಾ ಮದುವೆ ಈ ವರ್ಷ ಫೆಬ್ರವರಿ 8ರಂದು ನಡೆದಿತ್ತು. ನಾಗರಾಜ್ ಅವರು ಕೊಪ್ಪಳದ ಗೌರಿ ಅಂಗಳ ನಿವಾಸಿ, ಸಂಜನಾ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನವರು. ಹಿರಿಯರ ಒಪ್ಪಿಗೆಯ ಮೇರೆಗೆ ಎರಡು ಕುಟುಂಬಗಳು ಸಂಬಂಧ ಬೆಳೆಸಿ ಮದುವೆ ಮಾಡಿದ್ದವು. ಮದುವೆಯ ನಂತರ ದಂಪತಿಗಳು ನಾಗರಾಜ್ ಅವರ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಸಂತೋಷವಾಗಿಯೇ ಇದ್ದು, ಆದರೆ ಮಾರ್ಚ್ 21ರಂದು ಇದ್ದಕ್ಕಿದ್ದ ಹಾಗೇ ಹೆಂಡತಿ ನಾಪತ್ತೆಯಾಗಿದ್ದಾಳೆ.

ಘಟನೆ ದಿನ ಸಂಜನಾ ಗಂಡ ನಾಗರಾಜ್ ಅವರನ್ನು ಹತ್ತಿರದ ಮೆಡಿಕಲ್ ಶಾಪ್‌ಗೆ ಮಾತ್ರೆ ತರಲು ಕಳುಹಿಸಿ, ಇತ್ತ ನಾಪತ್ತೆಯಾಗಿದ್ದಾಳೆ. ನಾಗರಾಜ್ ಮನೆಗೆ ಹಿಂದಿರುಗಿದಾಗ ಸಂಜನಾ ಮನೆಯಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸುಳಿವು ಇರಲಿಲ್ಲ, ಇದು ಕುಟುಂಬಕ್ಕೆ ದೊಡ್ಡ ಶಾಕ್ ಆಗಿದ್ದು, ಈ ಸುದ್ದಿ ತಿಳಿದ ತಕ್ಷಣ ನಾಗರಾಜ್ ಅವರ ತಂದೆ ಖಂಡೆಪ್ಪ ಅವರಿಗೆ ತೀವ್ರ ಮಾನಸಿಕ ಆಘಾತವಾಗಿ, ಸೊಸೆ ಮನೆ ಬಿಟ್ಟು ಹೋದ ದುಃಖದಿಂದ ಹೃದಯಾಘಾತಕ್ಕೀಡಾಗಿ ಅದೇ ದಿನ ಸಾವನ್ನಪ್ಪಿದರು.

ಪತ್ನಿಯನ್ನು ಹುಡುಕಲು ಠಾಣೆ ಮೆಟ್ಟಿಲೇರಿದ ಗಂಡ

ಸದ್ಯ ನಾಗರಾಜ್ ತಮ್ಮ ಪತ್ನಿಯನ್ನು ಹುಡುಕುತ್ತಾ ತುಂಬಾ ಆತಂಕಕ್ಕೀಡಾಗಿದ್ದಾರೆ. ಸಂಜನಾ ಸಹೋದರ ರವಿ ಜೊತೆಗೂಡಿ ಅವರು ಕೊಪ್ಪಳ, ರಾಯಚೂರು, ಹೊಸಪೇಟೆ, ಹುಲಗಿ ಸೇರಿದಂತೆ ಹಲವು ಕಡೆಗಳಲ್ಲಿ ಅಲೆದಾಡಿದ್ದಾರೆ. ಊರು ಊರಿಗೆ ಹೋಗಿ, ಬಂಧುಗಳ ಮನೆಗಳಲ್ಲಿ ವಿಚಾರಿಸಿದ್ದಾರೆ. ಆದರೆ ಸಂಜನಾ ಸುಳಿವು ಸಿಕ್ಕಿಲ್ಲ, ತವರು ಮನೆಗೂ ಆಕೆ ಹೋಗಿಲ್ಲ. ಹೀಗಾಗಿ ಇದೀಗ ನಾಗರಾಜ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವರು ಪತ್ನಿಯನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ‘ನನಗೆ ನನ್ನ ಪತ್ನಿ ಬೇಕು. ಅವಳು ಎಲ್ಲಿದ್ದರೂ ಸುರಕ್ಷಿತವಾಗಿ ಹಿಂದಿರುಗಬೇಕು’ ಎಂದು ನಾಗರಾಜ್ ಮನವಿ ಮಾಡಿದ್ದಾರೆ.

ಸಂಜನಾ ಕೈಯಲ್ಲಿ ‘ರವಿ’ ಟ್ಯಾಟೂ ಬಗ್ಗೆ ಮಾಹಿತಿ

ಇನ್ನೂ ದೂರಿನಲ್ಲಿ ನಾಗರಾಜ್ ಮುಖ್ಯವಾದ ಮಾಹಿತಿಯನ್ನು ನೀಡಿದ್ದಾರೆ. ಸಂಜನಾ ಅವರ ಕೈಯಲ್ಲಿ “ರವಿ” ಎಂಬ ಹೆಸರಿನ ಟ್ಯಾಟೂ ಇದೆ ಎಂದು ಉಲ್ಲೇಖಿಸಿದ್ದಾರೆ. ಇದು ಪೊಲೀಸರಿಗೆ ಸಂಜನಾಳನ್ನು ಗುರುತಿಸಲು ಸಹಾಯವಾಗಬಹುದು ಎಂದು ಅವರು ನಂಬಿದ್ದಾರೆ.

ಸದ್ಯ ಎರಡು ಕುಟುಂಬಗಳೂ ಈಗ ತುಂಬಾ ಆತಂಕದಲ್ಲಿದ್ದಾರೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಇಂತಹ ಘಟನೆ ನಡೆಯುವುದು ಎಲ್ಲರಿಗೂ ಆಶ್ಚರ್ಯ ಮತ್ತು ದುಃಖ ತಂದಿದೆ. ಪೊಲೀಸರು ಈಗ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಸಂಜನಾ ಎಲ್ಲಿಗೆ ಹೋದಳು, ಯಾರೊಂದಿಗೆ ಹೋದಳು, ಏನು ಕಾರಣ ಎಂಬುದನ್ನು ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿದ್ದಾರೆ. ಸಂಜನಾ ಸುರಕ್ಷಿತವಾಗಿರುವುದು ಮತ್ತು ತನ್ನ ಕುಟುಂಬಕ್ಕೆ ಹಿಂದಿರುಗುವುದು ಎಲ್ಲರ ಆಸೆಯಾಗಿದೆ.

ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹಾದುಹೋದ ತೈಲ ಟ್ಯಾಂಕರ್ಗೆ ಬೆಂಕಿ

TAGGED:Wife goes missing within a month and a half of marriage
Share This Article
Facebook Twitter Copy Link Print
Previous Article ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹಾದುಹೋದ ತೈಲ ಟ್ಯಾಂಕರ್ಗೆ ಬೆಂಕಿ
Next Article SSLC ಅಂಕಪಟ್ಟಿಯಿಂದ ಹಿಂದಿ ವಿಷಯ ಔಟ್ ;ಮಧು ಬಂಗಾರಪ್ಪ ಹೇಳಿದ್ದೇನು?

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?