newsics.com
ಕೇವಲ 11 ವರ್ಷದ ಬಾಲಕನೊಬ್ಬ ಇಲ್ಲಿ ಲೀಲಾಜಾಲವಾಗಿ ವಿಮಾನವನ್ನು ನಿಯಂತ್ರಿಸಿ, ಲ್ಯಾಂಡಿಂಗ್ ಮಾಡಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪುಟ್ಟ ಪೈಲಟ್‌ನ ಹೆಸರು ರಿಷಿ ಶರ್ಮಾ. ಕ್ಯಾಲಿಫೋರ್ನಿಯಾದ ಆಕ್ಸ್‌ನಾರ್ಡ್ ವಿಮಾನ ನಿಲ್ದಾಣದಲ್ಲಿ ತರಬೇತಿ ವಿಮಾನವನ್ನು ಅತ್ಯಂತ ಆತ್ಮವಿಶ್ವಾಸದಿಂದ ಮುನ್ನಡೆಸಿದ ರಿಷಿ,ಪೈಲಟ್ ತರಬೇತಿಯ ಅತ್ಯಂತ ಪ್ರಮುಖ ಹಂತವಾದ ಟಚ್ ಅಂಡ್ ಗೋ ಲ್ಯಾಂಡಿಂಗ್ ಅನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಬಾಲಕ ರಿಷಿ ರನ್‌ವೇ 25 ರಲ್ಲಿ ವಿಮಾನವನ್ನು ಅತ್ಯಂತ ಸಮತೋಲನದಿಂದ ಕೆಳಗೆ ಇಳಿಸುತ್ತಾನೆ. ಆಗ ಆತನ ಪಕ್ಕದಲ್ಲಿ ಕುಳಿತಿದ್ದ ತರಬೇತುದಾರ ವೆರಿ ಗುಡ್ ಲ್ಯಾಂಡಿಂಗ್ ಎಂದು ಪ್ರಶಂಸಿಸುವುದನ್ನು ನಾವು ಕೇಳಬಹುದು. ಲ್ಯಾಂಡ್ ಆದ ಮರುಕ್ಷಣವೇ ಮತ್ತೆ ಎಂಜಿನ್ ಪವರ್ ಹೆಚ್ಚಿಸಿ, ಫ್ಲ್ಯಾಪ್‌ಗಳನ್ನು (flaps) ಸರಿಹೊಂದಿಸಿ ಮತ್ತೆ ವಿಮಾನವನ್ನು ಗಾಳಿಯಲ್ಲಿ ಸರಾಗವಾಗಿ ಹಾರಿಸುತ್ತಾನೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಆತನ ಮುಖದಲ್ಲಿನ ತಾಳ್ಮೆ, ಗಮನ ಮತ್ತು ವಿಮಾನದ ಮೇಲಿನ ನಿಯಂತ್ರಣ ನಿಜಕ್ಕೂ ವಿಸ್ಮಯಕಾರಿಯಾಗಿದೆ.
ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕ್ಯಾಪ್ಶನ್‌ನಲ್ಲಿ “ಇದು ಕೇವಲ ಉತ್ತಮ ಲ್ಯಾಂಡಿಂಗ್ ಅಥವಾ ಅದೃಷ್ಟವೇ? ಸಣ್ಣ ಪೈಲಟ್, ಸ್ಮೂತ್ ಲ್ಯಾಂಡಿಂಗ್. ಗುರಿಯೆಡೆಗಿನ ಪಯಣದಲ್ಲಿ ಇದೊಂದು ಹೊಸ ಹೆಜ್ಜೆ” ಎಂದು ಬರೆಯಲಾಗಿದೆ.
https://www.instagram.com/reel/DWBwLsoFNI_/?igsh=YmgyZ2h4am4wMGkx