newsics.com
ಬೆಂಗಳೂರು: ದೆಹಲಿಯ ಗುರುಗ್ರಾಮ ಮೂಲದ ಎಂಜಿನಿಯರ್ ಒಬ್ಬರು ಬೆಂಗಳೂರಿಗೆ ಸ್ಥಳಾಂತರವಾಗಲು ಸಾಧ್ಯವೇ ಇಲ್ಲ ಎಂಬ ಕಾರಣ ಒಡ್ಡಿ ಬರೋಬ್ಬರಿ ₹34 ಲಕ್ಷ ಪ್ಯಾಕೇಜ್ ಹೊಂದಿದ್ದ ಕೆಲಸದ ಆಫರ್ ತಿರಸ್ಕರಿಸಿದ್ದಾರೆನ್ನಲಾಗಿದೆ.
ಈ ಕುರಿತು ಗೌರವ್ ಶರಣ್ ಎಂಬುವರ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ನನಗೆ ಬೆಂಗಳೂರಿನಲ್ಲಿ ₹35 ಲಕ್ಷ ಪ್ಯಾಕೇಜ್ ಕೆಲಸದ ಆಫರ್ ಲಭಿಸಿತು. ಪ್ಯಾಕೇಜ್ ಹಾಗೂ ಕಂಪನಿಯು ಚೆನ್ನಾಗಿತ್ತು. ಆದರೆ ಬೇರೆಡೆಗೆ ಸ್ಥಳಾಂತರವಾಗುವಂತೆ ಬೇಡಿಕೆ ಇರಿಸಲಾಗಿತ್ತು. ಆದರೆ ಈ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ. ಏಕೆಂದರೆ ನನಗೆ ಎಂದಿಗೂ ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ’ ಎಂದಿದ್ದಾರೆ.
ಶರಣ್ ಅವರ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಪೈಕಿ ಬೆಂಗಳೂರಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ಸ್ನೇಹಾ ಜೈನ್ ಎಂಬುವರು ಪ್ರತಿಕ್ರಿಯಿಸಿದ್ದು, ‘ಅತ್ಯುತ್ತಮ ನಿರ್ಧಾರ. ಜೀವನದಲ್ಲಿ ಎಂದಿಗೂ ಬೆಂಗಳೂರಿಗೆ ಬರಬೇಡಿ’ ಎಂದಿದ್ದಾರೆ.
ಬಾಲಾಜಿ ಎಂಬುವರು ‘ನಾನು ಫ್ರೀಲ್ಯಾನ್ಸಿಂಗ್ ಮಾಡುತ್ತೇನೆ. ಆದರೆ ಗುರುಗ್ರಾಮ, ಹರಿಯಾಣ, ನೋಯ್ಡಾದಿಂದ ಎಂದಿಗೂ ಪ್ರಾಜೆಕ್ಟ್ಗಳನ್ನು ಒಪ್ಪುವುದಿಲ್ಲ. ಏಕೆಂದರೆ ಅವರು ಒಪ್ಪಂದದಂತೆ ಪಾವತಿಸುವುದಿಲ್ಲ. ಆದರೆ ಪುಣೆ, ಬೆಂಗಳೂರು, ಮುಂಬೈ, ಚೆನ್ನೈಯಲ್ಲಿ ಪರಿಸ್ಥಿತಿ ಹಾಗಿಲ್ಲ. ನೀವು ಅಲ್ಲಿನವರಿಗೆ ವಿಷಯ ತಿಳಿಸಿ’ ಎಂದು ಹೇಳಿದ್ದಾರೆ.
ಮೊಹಮ್ಮದ್ ಜುಬೈರ್ ಅವರು ‘ಒಳ್ಳೆಯ ನಿರ್ಧಾರ. ಬೆಂಗಳೂರಿಗರು ನಿಮಗೆ ಆಭಾರಿಯಾಗಿರುತ್ತಾರೆ’ ಎಂದಿದ್ದಾರೆ.
https://x.com/i/status/2035303965999632752