Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇಂದು ಭಾರತಕ್ಕೆ ಬಂದು ಸೇರಲಿದೆ ಮತ್ತೆರಡು ತೈಲ ಹಡಗು: 26,000 ಮೆಟ್ರಿಕ್ ಟನ್ ಎಲ್‌ಪಿಜಿ ಇಂದು ಮಂಗಳೂರು ಬಂದರಿಗೆ
ಕರ್ನಾಟಕದೇಶಪ್ರಮುಖವಿದೇಶ

ಇಂದು ಭಾರತಕ್ಕೆ ಬಂದು ಸೇರಲಿದೆ ಮತ್ತೆರಡು ತೈಲ ಹಡಗು: 26,000 ಮೆಟ್ರಿಕ್ ಟನ್ ಎಲ್‌ಪಿಜಿ ಇಂದು ಮಂಗಳೂರು ಬಂದರಿಗೆ

Share
2 Min Read
SHARE

https://youtube.com/shorts/Uyg7eLAiO4c?si=HGl_mdjplGhkcNCz

newsics.com

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಉದ್ವಿಗ್ನತೆಯಿಂದಾಗಿ ಎದುರಾಗಿದ್ದ ಅಡುಗೆ ಅನಿಲ ಪೂರೈಕೆ ವ್ಯತ್ಯಯದ ಆತಂಕಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಹೊತ್ತ ‘ಶಿವಾಲಿಕ್’ ಹಡಗು ಯುದ್ಧ ಪೀಡಿತ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಸೋಮವಾರ ಸಂಜೆ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿದೆ. ಇದು ಕೇವಲ ಗುಜರಾತ್‌ಗೆ ಮಾತ್ರವಲ್ಲ, ಕರ್ನಾಟಕದ ಮಂಗಳೂರಿಗೂ ಹಾಗೂ ದಕ್ಷಿಣ ಭಾರತದ ಎಲ್‌ಪಿಜಿ ಬಳಕೆದಾರರಿಗೂ ದೊಡ್ಡ ಮಟ್ಟದ ನೆಮ್ಮದಿ ತಂದಿದೆ..

 

ಒಂದು ಹಡಗಿನಿಂದ 26,000 ಮೆಟ್ರಿಕ್ ಟನ್ ಎಲ್‌ಪಿಜಿ ಇಂದು ಮಂಗಳೂರಿನಲ್ಲಿ ಅನ್‌ಲೋಡ್ ಆಗಲಿದೆ. ಇದು ದೇಶದ ಎಲ್‌ಪಿಜಿ ಕೊರತೆ ಭೀತಿಯನ್ನು ತಾತ್ಕಾಲಿಕವಾಗಿ ನೀಗಿಸುವ ನಿರೀಕ್ಷೆ ಇದೆ.

 

ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ನೂರಾರು ತೈಲ ಮತ್ತು ಎಲ್‌ಪಿಜಿ (LPG) ಸಾಗಿಸುತ್ತಿದ್ದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದ್ದವು. ಆದರೆ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಇರಾನ್ ಈಗಾಗಲೇ ನಾಲ್ಕು ಹಡಗುಗಳಿಗೆ ಅನುಮತಿ ನೀಡಿದ್ದು, ಅವುಗಳಲ್ಲಿ 2 ಹಡಗುಗಳು ಈಗಾಗಲೇ ಭಾರತ ತಲುಪಿವೆ.

 

ಮಾರ್ಚ್ 12ರಂದು ಕಚ್ಚಾ ತೈಲ ಹೊತ್ತ ಮೊದಲ ಹಡಗು ಮುಂಬೈ ತಲುಪಿತ್ತು. ನಂತರ ಮಾರ್ಚ್ 16ರಂದು ಎಲ್‌ಪಿಜಿ ಸಾಗಿಸುತ್ತಿದ್ದ ಶಿವಾಲಿಕ್ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸಿತು. ಈ ಹಡಗಿನಲ್ಲಿ ಒಟ್ಟು 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಇದ್ದು, ಅದರಲ್ಲಿ ಸುಮಾರು 20 ಸಾವಿರ ಮೆಟ್ರಿಕ್ ಟನ್ ಅನ್ನು ಮುಂದ್ರಾ ಬಂದರಿನಲ್ಲಿ ಅನ್‌ಲೋಡ್ ಮಾಡಲಾಗಿದೆ.

ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಇಂದೇ ಮಂಗಳೂರು ಬಂದರಿಗೆ ತಂದು ಅನ್‌ಲೋಡ್ ಮಾಡುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿ ಉಂಟಾಗಿದ್ದ ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್ ಸಿಗುವ ನಿರೀಕ್ಷೆಯಿದೆ.

ಇನ್ನು ನಂದಾದೇವಿ ಮತ್ತು ಜಗ್ ಲಾಡ್ಕಿ ಎಂಬ ಮತ್ತೆರಡು ಹಡಗುಗಳು ಇಂದು ಭಾರತ ತಲುಪುವ ಸಾಧ್ಯತೆ ಇದೆ. ನಂದಾದೇವಿ ಹಡಗಿನಲ್ಲಿ ಸುಮಾರು 40 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಇದ್ದು, ಜಗ್ ಲಾಡ್ಕಿ ಹಡಗು ಸುಮಾರು 81 ಸಾವಿರ ಟನ್ ಕಚ್ಚಾ ತೈಲವನ್ನು ಹೊತ್ತು ಬರುತ್ತಿದೆ.

https://www.newsics.com/2026/03/17/from-now-on-if-minors-are-married-criminal-cases-will-be-filed-against-parents-priests-and-hut-owners-high-courts-important-order/

TAGGED:000 metric tons of LPG to arrive at Mangalore port todayTwo more oil ships to arrive in India today: 26
Share This Article
Facebook Twitter Copy Link Print
Previous Article ಇನ್ಮುಂದೆ ಅಪ್ರಾಪ್ತರಿಗೆ ಮದುವೆ ಮಾಡಿದರೆ ಪೋಷಕರು, ಪುರೋಹಿತರು, ಛತ್ರದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ : ಹೈಕೋರ್ಟ್ ಮಹತ್ವದ ಆದೇಶ !
Next Article ಹೋಟೆಲ್‌ ನಲ್ಲಿ ಲವರ್ ಜೊತೆ ರೆಡ್-ಹ್ಯಾಂಡ್ ಸಿಕ್ಕಿ ಬಿದ್ದ ಪತ್ನಿ : ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?