https://youtube.com/shorts/Uyg7eLAiO4c?si=HGl_mdjplGhkcNCz
newsics.com
ಜೋಗಿ ಪ್ರೇಮ್ ನಿರ್ದೇಶನ ‘ಕೆಡಿ ದಿ ಡೆವಿಲ್’ ಬಿಡುಗಡೆಗೆ ರೆಡಿಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಈ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಜೋಗಿ ಪ್ರೇಮ್ ಸಿನಿಮಾದ ಹಾಡುಗಳು ಕ್ರೇಜ್ ಅನ್ನೇ ಹುಟ್ಟಾಕುತ್ತವೆ. ಅವರು ನಿರ್ದೇಶಿಸುವ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷವಾದ ಕಾಳಜಿ ಇರುತ್ತೆ. ಆದರೆ, ಇದ್ಯಾಕೋ ಮೊದಲ ಬಾರಿಗೆ ಗಡಿರೇಖೆಯನ್ನು ದಾಟಿದಂತೆ ಬಾಸವಾಗುತ್ತಿದೆ. ‘ಕೆಡಿ’ ಸಿನಿಮಾದ ನಾಲ್ಕನೇ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ “ಸರಸೆ ನಿನ್ನ ಸೆರಗ..” ಹಿಂದಿ ವರ್ಷನ್ಗೆ ವಿರೋಧ ವ್ಯಕ್ತವಾಗುತ್ತಿದೆ
ಹಂದಿಗಳ ಹತ್ರ ಬೈಸಿಕೊಳ್ಳಂಗ್ ಆಗೋಯ್ತಲ್ಲ ಗುರು ನಮ್ ಕತೆ. #KDTheDevil ನಿಮಗೆ ಸಿನಿಮಾ ಮಾಡಕ್ ಬರಲ್ಲ ಅಂದ್ರೆ ಹೆಂಗಾದ್ರೂ ತೋಟ ಇದೆ. ಆರಾಮ ನೋಡಿಕೊಂಡು ಇರಪ್ಪ ನಿಮ್ಗಳಿಂದ ಇಡೀ ಕನ್ನಡ ಚಿತ್ರರಂಗದ ಮರ್ಯಾದೆ ತೆಗಿಬೇಡಿ” ಎಂದು ನೆಟ್ಟಿಗರೊಬ್ಬರು ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ವಿರುದ್ಧ ಆರೋಶ ಹೊರ ಹಾಕಿದ್ದಾರೆ. ಇಂತಹ ಸಾಂಗ್ಗಳಿಂದ ಕನ್ನಡ ಚಿತ್ರರಂಗದ ಮರ್ಯಾದೆ ಹಾಳಾಗುತ್ತಿದೆ ಎಂದು ಸಿಟ್ಟಿಗೆದ್ದಿದ್ದಾರೆ.
https://www.newsics.com/2026/03/17/woman-suffers-heart-attack-before-she-can-finish-speaking/