https://youtube.com/shorts/JFDfzeRUAUw?si=UPiQjhCFAIkLXEhb
newsics.com
ಬಾಲಿವುಡ್ ನಟಿ ಆಲಿಯಾ ಭಟ್ ಚಿಕ್ಕ ವಯಸ್ಸಿನಲ್ಲಿಯೇ 550 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ ನಟಿ. ಇವರ ಸಿನಿ ಪಯಣ ಮತ್ತು ವೈಯಕ್ತಿಕ ಜೀವನದ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನು ಇಲ್ಲಿ ಹೇಳುತ್ತಿದ್ದೇವೆ. ನಟಿ ಆಲಿಯಾ ಭಟ್, ನಟನಾ ಪ್ರಪಂಚಕ್ಕೆ ಕಾಲಿಟ್ಟು 12 ವರ್ಷಗಳಾಗಿದ್ದು, ಸುಮಾರು 16 ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಅದರಲ್ಲಿ 12 ಹಿಟ್, 2 ಫ್ಲಾಪ್ ಮತ್ತು 2 ಸರಾಸರಿ ಓಡಿವೆ. ಅವರ ಮುಂಬರುವ ನಾಲ್ಕು ಚಿತ್ರಗಳಿಗೆ ಸುಮಾರು 1000 ಕೋಟಿ ರೂ.ಬಂಡವಾಳ ಹಾಕಲಾಗಿದೆ. ಈ ಚಿತ್ರಗಳಲ್ಲಿ ಜಿಗ್ರಾ, ಲವ್ ಆ್ಯಂಡ್ ವಾರ್, ಜೀಲೆ ಜರಾ ಮತ್ತು ಬ್ರಹ್ಮಾಸ್ತ್ರ 2 ಚಿತ್ರಗಳು ಸೇರಿವೆ. ಆಲಿಯಾ ಈಗ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಎರಡನೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿ ಈಕೆಯದ್ದು.
ಆಲಿಯಾ ಬಹಳ ಕಡಿಮೆ ಸಮಯದಲ್ಲಿ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಅವರ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಆಲಿಯಾ ಅವರ ಸಂಪತ್ತಿನ ಬಗ್ಗೆ ಹೇಳುವುದಾದರೆ, ನಟಿ 550 ಕೋಟಿ ರೂ ಆಸ್ತಿ ಒಡತಿ. ಆಲಿಯಾ ಚಲನಚಿತ್ರಗಳಿಂದ ಮಾತ್ರವಲ್ಲದೆ ಇತರ ಮಾರ್ಗಗಳಿಂದಲೂ ಕೋಟಿ ಗಳಿಸುತ್ತಾರೆ.
ಆಲಿಯಾ ಒಂದು ಚಿತ್ರಕ್ಕೆ 10 ರಿಂದ 20 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾರೆ… ಆರ್‌ಆರ್‌ಆರ್ ಚಿತ್ರದಲ್ಲಿ ಕೇವಲ 20 ನಿಮಿಷಗಳ ದೃಶ್ಯಕ್ಕೆ ಆಲಿಯಾ 9 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆದಿದ್ದರು… ಇದಲ್ಲದೆ, ಆಲಿಯಾ ವೆಬ್ ಸರಣಿಗಳಲ್ಲಿ ನಟಿಸಿ ಭಾರಿ ಮೊತ್ತದ ಆದಾಯವನ್ನು ಗಳಿಸುತ್ತಾರೆ. ವಿವಿಧ ಜಾಹೀರಾತುಗಳ ಮೂಲಕವೂ ಆಲಿಯಾ ದೊಡ್ಡ ಮೊತ್ತವನ್ನು ಗಳಿಸುತ್ತಾರೆ.
ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ, ಆಲಿಯಾ ಅವರಿಗೆ ಕೋಟ್ಯಂತರ ಮೌಲ್ಯದ ಆಸ್ತಿಗಳಿವೆ. ಆಲಿಯಾ ಲಂಡನ್‌ನ ಕೋವೆಂಟ್ ಗಾರ್ಡನ್ ಪ್ರದೇಶದಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ ಮತ್ತು ಆ ಮನೆಯ ಬೆಲೆ 25 ಕೋಟಿ ರೂ. ಇದಲ್ಲದೆ, ನಟಿ ಮುಂಬೈನ ಬಾಂದ್ರಾದಲ್ಲಿ ಒಂದು ಬಂಗಲೆಯನ್ನು ಹೊಂದಿದ್ದಾರೆ. ಬಂಗಲೆಯ ಬೆಲೆ 32 ಕೋಟಿ ರೂ. ನಟಿ ಬಳಿ ಅನೇಕ ಐಷಾರಾಮಿ ಕಾರುಗಳಿವೆ.
https://www.newsics.com/2026/03/16/four-members-of-the-same-family-die-after-inhaling-bike-fumes/