Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > SSLC ಪರೀಕ್ಷೆ 2026ರ ವೇಳಾಪಟ್ಟಿ, ಸಮಯ, ಡ್ರೆಸ್‌ಕೋಡ್ ಡಿಟೇಲ್ಸ್ ಇಲ್ಲಿದೆ
ಕರ್ನಾಟಕಪ್ರಮುಖ

SSLC ಪರೀಕ್ಷೆ 2026ರ ವೇಳಾಪಟ್ಟಿ, ಸಮಯ, ಡ್ರೆಸ್‌ಕೋಡ್ ಡಿಟೇಲ್ಸ್ ಇಲ್ಲಿದೆ

Share
3 Min Read
SHARE

newsics.com

2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಇದೇ ಮಾರ್ಚ್ 18ರಿಂದ ಏಪ್ರಿಲ್ 2ರ ವರೆಗೆ ನಡೆಯಲಿದ್ದು, ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.
ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆ ವರೆಗೆ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ಬರೆಯಬೇಕಾದರೆ ಹಾಲ್ ಟಿಕೆಟ್ ಅವಶ್ಯವಾಗಿದೆ. ಅದೇ ರೀತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬಸ್ ಕಂಡೆಕ್ಟರ್ಗೆ ಹಾಲ್ ಟಿಕೆಟ್ ತೋರಿಸಿದರಷ್ಟೇ ಉಚಿತವಾಗಿ ಪ್ರಯಾಣಿಸುವ ಅವಕಾಶ ಸಿಗಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿ 2026 ಪ್ರಕಾರ, 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ. ಈ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುತ್ತಿದೆ.
ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
* ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ಗಂಟೆವರೆಗೆ ಇರಲಿದ್ದು, ಒಟ್ಟು ಪರೀಕ್ಷಾ ಅವಧಿ 3 ಗಂಟೆ 15 ನಿಮಿಷಗಳು.
* ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಓದಲು 15 ನಿಮಿಷಗಳ ಸಮಯ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಯನ್ನು ಬೆಳಿಗ್ಗೆ 10 ಗಂಟೆಗೆ ನೀಡಲಾಗುತ್ತದೆ. ನಂತರ ವಿದ್ಯಾರ್ಥಿಗಳು 10:15ರಿಂದ ಉತ್ತರ ಬರೆಯಲು ಆರಂಭಿಸಬಹುದು.
* ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ಅಂದರೆ, ಬೆಳಿಗ್ಗೆ 9:45ರಿಂದ 10 ಗಂಟೆಯೊಳಗೆ ತಲುಪಲು ಸೂಚಿಸಲಾಗಿದೆ.
* ಹಾಲ್ ಟಿಕೆಟ್ (ಪ್ರವೇಶ ಪತ್ರ) ಮತ್ತು ಅಗತ್ಯ ದಾಖಲೆಗಳನ್ನು ಜೊತೆಯಲ್ಲಿ ತರಬೇಕು ಎಂದು ಮಂಡಳಿ ಸೂಚಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ
ಮಾರ್ಚ್ 18 – ಪ್ರಥಮ ಭಾಷೆ
ಮಾರ್ಚ್ 23 – ವಿಜ್ಞಾನ
ಮಾರ್ಚ್ 25 – ದ್ವಿತೀಯ ಭಾಷೆ
ಮಾರ್ಚ್ 28 – ಗಣಿತ
ಮಾರ್ಚ್ 30 – ತೃತೀಯ ಭಾಷೆ
ಏಪ್ರಿಲ್‌ 2 – ಸಮಾಜ ವಿಜ್ಞಾನ
ವಿಷಯವಾರು ವೇಳಾಪಟ್ಟಿ
* ಮಾರ್ಚ್ 18: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (ಎನ್‌ಸಿಇಆರ್‌ಟಿ), ಸಂಸ್ಕೃತಿ)
* ಮಾರ್ಚ್ 23: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
* ಮಾರ್ಚ್‌ 25: ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ)
* ಮಾರ್ಚ್ 28: ಕೋರ್ ಸಬ್ಜೆಕ್ಟ್‌ (ಗಣಿತ, ಸಮಾಜಶಾಸ್ತ್ರ)
* ಮಾರ್ಚ್‌ 30: ತೃತೀಯ ಭಾಷೆ (ಹಿಂದಿ (NCERT), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ)
* ಏಪ್ರಿಲ್‌ 1: ಜಿ.ಟಿ.ಎಸ್. ವಿಷಯಗಳು (ಎಲಿಮೆಂಟ್ಸ್‌ ಆಫ್ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್ – IV, ಎಲಿಮೆಂಟ್ಸ್‌ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್ – IV, ಲಿಮೆಂಟ್ಸ್‌ ಆಫ್ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ – IV, ಪ್ರೋಗ್ರಾಮಿಂಗ್ ಇನ್ ANSI ‘C’)
* ಏಪ್ರಿಲ್‌ 2: ಕೋರ್ ಸಬ್ಜೆಕ್ಟ್‌: ಸಮಾಜ ವಿಜ್ಞಾನ
ಡ್ರೆಸ್‌ಕೋಡ್ ಮತ್ತು ನಿಯಮಗಳು
* ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸುವುದು ಕಡ್ಡಾಯ.
* ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಸರಳ ಹಾಗೂ ಸರಿಯಾದ ಶಾಲೆಯ ಯೂನಿಫಾರ್ಮ್ ಧರಿಸಿ ಬರಬೇಕು.
ಪರೀಕ್ಷಾ ಕೇಂದ್ರದಲ್ಲಿ ಯಾವೆಲ್ಲಾ ವಸ್ತುಗಳಿಗೆ ಅನುಮತಿ?
* ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್
* ನೀಲಿ ಅಥವಾ ಕಪ್ಪು ಬಣ್ಣದ ಬಾಲ್‌ಪಾಯಿಂಟ್ ಪೆನ್‌ಗಳು
* ಜಾಮಿಟರ್ ಬಾಕ್ಸ್ (ಗಣಿತ ಪರೀಕ್ಷೆಗೆ)
* ಪಾರದರ್ಶಕ ನೀರಿನ ಬಾಟಲ್
* ಪರೀಕ್ಷೆಗೆ ಅಗತ್ಯವಿರುವ ವಸ್ತುಗಳು
* ಮುಖ್ಯವಾಗಿ ಹಾಲ್ ಟಿಕೆಟ್ ಇಲ್ಲದಿದ್ದರೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್‌ಗೆ ಪ್ರವೇಶ ನೀಡಲಾಗುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.
ಯಾವೆಲ್ಲಾ ವಸ್ತುಗಳಿಗೆ ನಿಷೇಧ?
* ಮೊಬೈಲ್ ಫೋನ್‌ಗಳು
* ಸ್ಮಾರ್ಟ್ ವಾಚ್‌ಗಳು
* ಬ್ಲೂಟೂತ್ ಸಾಧನಗಳು, ಇಯರ್‌ಫೋನ್‌ಗಳು
* ಕ್ಯಾಲ್ಕ್ಯುಲೇಟರ್‌ಗಳು (ವಿಶೇಷವಾಗಿ ಅನುಮತಿ ನೀಡಿದಲ್ಲಿ ಮಾತ್ರ)
* ನೋಟ್ಸ್ ಅಥವಾ ಚೀಟಿಗಳು
* ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು
* ಈ ಮೇಲಿನ ನಿಯಮಗಳನ್ನು ಉಲ್ಲಂಘಿಸಿದರೆ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು
* ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷ ಮುಂಚಿತವಾಗಿ ತಲುಪಬೇಕು.
* ನಿಗದಿಪಡಿಸಿದ ಆಸನದಲ್ಲಿ ಕುಳಿತುಕೊಳ್ಳಬೇಕು.
* ಉತ್ತರ ಪತ್ರಿಕೆಯ ಮೇಲೆ ನೋಂದಣಿ ಸಂಖ್ಯೆ ಮತ್ತು ವಿಷಯದ ಕೋಡ್ ಅನ್ನು ಎಚ್ಚರಿಕೆಯಿಂದ ಬರೆಯಬೇಕು.
* ಪರೀಕ್ಷಾ ಕೊಠಡಿಯಲ್ಲಿ ನಿಶ್ಶಬ್ದ ಮತ್ತು ಶಿಸ್ತು ಕಾಯ್ದುಕೊಳ್ಳಬೇಕು.
* ಪರೀಕ್ಷಾ ಅಧಿಕಾರಿಗಳು ನೀಡುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
* ಜೊತೆಗೆ, ಪರೀಕ್ಷೆಗೆ ಮುನ್ನವೇ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್‌ನಲ್ಲಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು, ಇದರಿಂದ ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲ ಉಂಟಾಗುವುದನ್ನು ತಪ್ಪಿಸಬಹುದು. ಒಟ್ಟಿನಲ್ಲಿ ಪರೀಕ್ಷೆ ಬರೆಯುವ ಎಲ್ಲಾ ವಿದಾರ್ಥಿಗಳಿಗೆ ನಮ್ಮ ಕಡೆಯಿಂದ ಆಲ್‌ ದಿ ಬೆಸ್ಟ್‌.

ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದುವುದು ‘ದ್ವಿಪತ್ನಿತ್ವ’ ವಲ್ಲ ಎಂದ ಹೈಕೋರ್ಟ್!

TAGGED:dress code details are hereSSLC Exam 2026: Scheduletiming
Share This Article
Facebook Twitter Copy Link Print
Previous Article ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದುವುದು ‘ದ್ವಿಪತ್ನಿತ್ವ’ ವಲ್ಲ ಎಂದ ಹೈಕೋರ್ಟ್!
Next Article ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಚ್ಚರಿಯ ಹೇಳಿಕೆ!

Popular Posts

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?