newsics.com
ಯುದ್ಧದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಕೊರತೆಯುಂಟಾಗಿದೆ. ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಲುಪುತ್ತಿಲ್ಲ. ಹೀಗಾಗಿ, ಬಹುತೇಕ ಹೋಟೆಲ್, ಕೆಫೆ, ರೆಸ್ಟೋರೆಂಟ್ಗಳು ಬಾಗಿಲು ಮುಚ್ಚಿವೆ. ಈ ಮಧ್ಯೆ ಬೆಂಗಳೂರಿನ ಕೆಫೆಯೊಂದರಲ್ಲಿ ಲಿಂಬೆ ಪಾನಕದ ಬೆಲೆ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ.
ಒಂದು ಮಿಂಟ್ ಲೆಮನೇಡ್ಗೆ ಬರೋಬ್ಬರಿ 179 ರೂಪಾಯಿ. ಎರಡು ಮಿಂಟ್ ಲೆಮನೇಡ್ಗೆ ಬರೋಬ್ಬರಿ 358 ರೂಪಾಯಿಗಳನ್ನ ಬೆಂಗಳೂರು ಕೆಫೆಯೊಂದು ಚಾರ್ಜ್ ಮಾಡಿದೆ. ಇಷ್ಟೇ ಆಗಿದ್ದರೆ ಸುದ್ದಿ ಆಗುತ್ತಿರಲಿಲ್ಲ. ಇದರೊಂದಿಗೆ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಅಂತ್ಹೇಳಿ ಎಕ್ಸ್ಟ್ರಾ 17.01 ರೂಪಾಯಿಯನ್ನ ಬೆಂಗಳೂರು ಕೆಫೆ ಚಾರ್ಜ್ ಮಾಡಿದೆ. ಜಿಎಸ್ಟಿ ಸೇರಿ ಬರೀ ಎರಡು ಮಿಂಟ್ ಲೆಮನೇಡ್ಗೆ ಗ್ರಾಹಕರೊಬ್ಬರು 374 ರೂಪಾಯಿ ಬಿಲ್ ಕೊಟ್ಟಿದ್ದಾರೆ.
ಲಿಂಬೆ ಪಾನಕ ತಯಾರಿಗೆ ಗ್ಯಾಸ್ ಬಳಕೆ ಮಾಡಿದ್ರೆ, ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಅಂತ ಹಾಕೋದ್ರಲ್ಲಿ ಅರ್ಥ ಇದೆ. ಆದರೆ, ಅಡುಗೆ ಅನಿಲವೇ ಬಳಸದೆ ಮಾಡುವ ಮಿಂಟ್ ಲೆಮನೇಡ್ಗೆ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದೊಂಥರಾ ಪರಿಸ್ಥಿತಿಯನ್ನ ದುರ್ಬಳಕೆ ಮಾಡಿಕೊಂಡು ಮಾಡುವ ಹಗಲು ದರೋಡೆ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ. ಕಟುವಾಗಿ ಟೀಕಿಸುತ್ತಿದ್ದಾರೆ.
ಸರಸದಲ್ಲಿದ್ದಾಗಲೇ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ; ವೈರಲ್ ವಿಡಿಯೋ ನೋಡಿ