https://youtube.com/shorts/JFDfzeRUAUw?si=UPiQjhCFAIkLXEhb
newsics.com
ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿಯನ್ನು ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡತಿ ಬಳಿಯಲ್ಲಿ ನಡೆದಿದೆ.
24 ವರ್ಷದ ರಂಜಿತಾ ಪ್ರಿಯಕರ ಅಯ್ಯಪ್ಪನಿಂದಲ ಕೊ*ಲೆಯಾದ ಯುವತಿ. ಮೃತ ರಂಜಿತಾ ಹಾಗೂ ಆರೋಪಿ ಅಯ್ಯಪ್ಪ ಇಬ್ಬರು ಮೂಲತಃ ಕೊಡಗಿನ ಪೊನ್ನಂಪೇಟೆ ನಿವಾಸಿಗಳು. ವರ್ತೂರು ಬಳಿಯ ಡ್ರೈ ಪ್ರೂಟ್ ಅಂಗಡಿಯಲ್ಲಿ ಸೂಪರ್‌ವೈಸರ್ ಆಗಿ ಅಯ್ಯಪ್ಪ ಕೆಲಸ ಮಾಡಿಕೊಂಡಿದ್ದನು. ಮದುವೆಯಾಗಿ ಹೆಂಡ್ತಿಯನ್ನು ಬಿಟ್ಟಿದ್ದ ಅಯ್ಯಪ್ಪ ಪಕ್ಕದೂರಿನ ರಂಜಿತಾಳನ್ನು ಪ್ರೀತಿಸುತ್ತಿದ್ದನು.
ಈ ಅಯ್ಯಪ್ಪನನ್ನು ಮದುವೆಯಾಗಬೇಕೆಂದು ರಂಜಿತಾ ಬೆಂಗಳೂರಿಗೆ ಬಂದಿದ್ದಳು. ಪತ್ನಿಗೆ ಡಿವೋರ್ಸ್ ನೀಡದೇ ರಂಜಿತಾ ಜೊತೆಯಲ್ಲಿಯೇ ಅಯ್ಯಪ್ಪ ಸಂಸಾರ ನಡೆಸುತ್ತಿದ್ದನು. ಮದುವೆ ವಿಚಾರವಾಗಿ ಅಯ್ಯಪ್ಪ ಮತ್ತು ರಂಜಿತಾ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಅಯ್ಯಪ್ಪ ವೈಯರ್‌ನಿಂದ ಕುತ್ತಿಗೆ ಬಿಗಿದು ರಂಜಿತಾಳನ್ನು ಕೊ*ಲೆ ಮಾಡಿದ್ದಾನೆ.
ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.