https://youtube.com/shorts/yMSO-E277Og?si=gFSvtQQHQjZ3lXBt
newsics.com
ರಾಮನಗರ: ಕೌಟಿಂಬಿಕ ಕಲಹಕ್ಕೆ ಮನನೊಂದು ಐದು ತಿಂಗಳ ಗರ್ಭಿಣಿ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮನೆಯ ರೂಮ್ನಲ್ಲಿಯೇ ನಯನಾ (19) ಮೃತಪಟ್ಟಿದ್ದಾರೆ. ಕಳೆದ 9 ತಿಂಗಳ ಹಿಂದೆ ಸುನೀಲ್ ಜೊತೆ ನಯನಾ ಅವರ ವಿವಾಹವಾಗಿತ್ತು ಎನ್ನಲಾಗಿದೆ.
ಪತಿ ಸುನೀಲ್, ಅತ್ತೆ ಹಾಗೂ ಮಾವನ ವಿರುದ್ಧ ಯುವತಿಯ ಪೋಷಕರು ದೂರು ನೀಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
https://www.newsics.com/2026/03/12/bomb-threat-emailed-to-3-foreign-embassies-in-bengaluru/