https://youtube.com/shorts/yMSO-E277Og?si=gFSvtQQHQjZ3lXBt
newsics.com
ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲದ ತೀವ್ರ ಅಭಾವ ಉಂಟಾಗಿದ್ದು, ಇದರ ಬಿಸಿ ಈಗ ಹೋಟೆಲ್ ಗ್ರಾಹಕರಿಗೆ ತಟ್ಟುತ್ತಿದೆ. ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ತಿಂಡಿ ತಿಂದ ಗ್ರಾಹಕನಿಗೆ ಬಿಲ್‌ನಲ್ಲಿ ಹೆಚ್ಚುವರಿಯಾಗಿ 30 ರೂಪಾಯಿ ಗ್ಯಾಸ್ ಸಪ್ಲೈ ಚಾರ್ಜ್ ವಿಧಿಸಿದ್ದಾರೆ.
ನಗರದ ಪಿಜಿಯೊಂದರಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ತಿಂಡಿಗಾಗಿ ಸ್ಥಳೀಯ ಮಿಸ್ಟರ್ ಆಂಧ್ರ ಮೀಲ್ಸ್ ಹೋಟೆಲ್‌ಗೆ ತೆರಳಿದ್ದರು. ತಿಂಡಿ ತಿಂದ ನಂತರ ಅವರಿಗೆ ನೀಡಲಾದ ಬಿಲ್‌ನಲ್ಲಿ ತಿಂಡಿಯ ಬೆಲೆಯ ಜೊತೆಗೆ ಪ್ರತ್ಯೇಕವಾಗಿ 30 ರೂ.ಗಳನ್ನು ‘ಗ್ಯಾಸ್ ಸಪ್ಲೈ ಚಾರ್ಜ್’ ಎಂದು ಸೇರಿಸಲಾಗಿತ್ತು. ಇದನ್ನು ಕಂಡು ಹೆದರಿ ಹೋದ ಗ್ರಾಹಕರು ಆ ಬಿಲ್ ಅನ್ನು ಫೋಟೋ ತೆಗೆದು ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಿಲ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೋಟೆಲ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
https://www.newsics.com/2026/03/12/family-feud-5-months-pregnant-atma-murdered-by-set-on-fire/