https://youtube.com/shorts/yMSO-E277Og?si=gFSvtQQHQjZ3lXBt
newsics.com
ಬೆಂಗಳೂರು : ಬೆಂಗಳೂರಲ್ಲಿರುವ ಜಪಾನ್ ಇಸ್ರೇಲ್ ಹಾಗೂ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗಳಿಗೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಇಮೇಲ್ ಸಂದೇಶ ಕಳುಹಿಸಿದ್ದಾರೆ.
ಇಮೇಲ್‌ನಲ್ಲಿ ಕಚೇರಿಗಳಲ್ಲಿ RDX ಸೇರಿದಂತೆ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಹೇಳಲಾಗಿತ್ತು. ಈ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಚೇರಿ ಆವರಣದಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಕಾರಣ ಇದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನೆಯ ನಂತರ ಈ ಇಮೇಲ್‌ಗಳನ್ನು ಸೈಬರ್ ಕ್ರೈಂ ವಿಭಾಗಕ್ಕೆ ಕಳುಹಿಸಿ ತನಿಖೆ ಆರಂಭಿಸಲಾಗಿದೆ.
https://www.newsics.com/2026/03/12/iran-allows-indian-oil-ships-to-pass-through-strait-of-hormuz/