https://youtube.com/shorts/yMSO-E277Og?si=gFSvtQQHQjZ3lXBt
newsics.com
ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದ ಸಂದಿಗ್ಧ ಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅತಿದೊಡ್ದ ರಾಜತಾಂತ್ರಿಕ ಗೆಲುವಾಗಿದೆ.
ಭಾರತದ ಹಡಗುಗಳ ಸಾಗಾಟಕ್ಕೆ ಇರಾನ್ ಅನುಮತಿ ನೀಡಿದೆ. ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಹಡಗಿಗಳು ಸಂಚರಿಸಲು ಇರಾನ್ ಗ್ರೀನ್ ಸಿಗ್ನಲ್ ನೀಡಿದೆ.
ಭಾರತದ ಭಾವುಟವಿರುವ ಟ್ಯಾಂಕರ್ ಗಳನ್ನು ಹೊರ್ಮುಜ್ ಜಲಸಂಧಿಯಲ್ಲಿ ಸಾಗಲು ಅವಕಾಶ ನೀಡುವಂತೆ ಇರಾನ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ಹಡಗುಗಳು ಸಾಗಿ ಬಂದಿವೆ. ಪುಷ್ಪಕ್ ಹಾಗೂ ಪರಿಮಳ ಎಂಬ ಎರಡು ತೈಲ ಟ್ಯಾಂಕರ್ ಗಳ ನೌಕೆಗಳು ಆಗಮಿಸಿವೆ.
ಮೊನ್ನೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಇರಾನ್ ಜೊತೆ ಮಾತುಕತೆ ನಡೆಸಿದ್ದರು. ಭಾರತದ ಹಡಗುಗಳಿಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದರು. ಇರಾನ್ ವಿದೇಶಾಂಗ ಸಚಿವರ ಜೊತೆ ಭಾರತದ ವಿದೇಶಾಂಗ ಸಚಿವರು ನಡೆಸಿದ್ದ ಮಾತುಕತೆ ಫಲಪ್ರದವಾಗಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಹಡಗುಗಳ ಓಡಾಟಕ್ಕೆ ಇರಾನ್ ಅವಕಾಶ ನೀಡಿದೆ.
https://www.newsics.com/2026/03/12/us-301-investigation-on-16-countries-including-india-china/