https://youtube.com/shorts/I7q3Ny48oOg?si=RFP8giogzKefv9jC
newsics.com
ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಶಿಕ್ಷಕಿ ಮಸಾಜ್ ಮಾಡಿಸಿಕೊಂಡ ಘಟನೆ ಚಿತ್ರಕೂಟ ಶಾಲೆಯೊಂದರಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಮಧು ರೈ, ಪಾಠ ಮಾಡುವ ಬದಲು, ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಂದ ಮಸಾಜ್ ಮಾಡಿಸಿಕೊಂಡಿದ್ದಾಳೆ.ಜ್ಞಾನದ ದೀಪ ಬೆಳಗಬೇಕಾದ ಗುರುವೇ, ಮಕ್ಕಳನ್ನು ಇಂತಹ ಕೀಳು ಕೆಲಸಗಳಿಗೆ ಬಳಸಿಕೊಂಡಿರುವುದು ಪೋಷಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ಕೂಡಲೇ ತನಿಖೆಗೆ ಆದೇಶಿಸಿದೆ. ಚಿತ್ರಕೂಟದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿಗಳು (BSA) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲು ಮುಂದಾಗಿರುವುದು ವರದಿಯಾಗಿದೆ.