Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 1.1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಿ ಶಸ್ತ್ರಾಸ್ತ್ರ ಖರೀದಿಗೆ ಮುಂದಾದ ಪೋಲೆಂಡ್‌
ಪ್ರಮುಖವಿದೇಶ

1.1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಿ ಶಸ್ತ್ರಾಸ್ತ್ರ ಖರೀದಿಗೆ ಮುಂದಾದ ಪೋಲೆಂಡ್‌

Share
2 Min Read
SHARE

newsics.com

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇದೇ ಹೊತ್ತಿನಲ್ಲಿ ಜಗತ್ತಿನ ಅತಿಹೆಚ್ಚು ಚಿನ್ನದ ದಾಸ್ತಾನು ಹೊಂದಿರುವ ದೇಶವೊಂದು ತನ್ನ ಬಂಗಾರವನ್ನು ಮಾರಿ ಯುದ್ಧೋಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ. ಇತ್ತ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ತಾರಕಕ್ಕೇರಿರುವುದು ಈ ಬೆಳವಣಿಗೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಕಳೆದ ಒಂದು ವಾರದಿಂದ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇತರ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಭೀಕರ ಯುದ್ಧವು ಗಲ್ಫ್ ರಾಷ್ಟ್ರಗಳಲ್ಲಿ ಅಸ್ಥಿರತೆ ಉಂಟುಮಾಡಿದ್ದು, ಇದೇ ಕಾರಣಕ್ಕೆ ಯುರೋಪ್ ರಾಷ್ಟ್ರವಾದ ಪೋಲೆಂಡ್ ತನ್ನ ರಕ್ಷಣಾ ಪಡೆಯನ್ನು ಬಲಪಡಿಸಲು ಮುಂದಾಗಿದೆ. ಕಳೆದ ಆಪರೇಷನ್‌ ಸಿಂದೂರ್‌ ವೇಳೆ ಪೋಲೆಂಡ್‌ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಭಾರತ ಹಾಗೂ ಪೋಲೆಂಡ್‌ ನಡುವಿನ ವೈಮನಸ್ಯ ಕೂಡ ಹೆಚ್ಚಾಗಿತ್ತು.
ಚಿನ್ನ ಮಾರಿ ₹1.1 ಲಕ್ಷ ಕೋಟಿ ನಿಧಿ ಸಂಗ್ರಹ!
ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಖರೀದಿಸುತ್ತಿದ್ದ ಪೋಲೆಂಡ್, ಈಗ ತನ್ನ ಮೀಸಲು ಚಿನ್ನವನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಪೋಲೆಂಡ್‌ನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಅದಂ ಗ್ಲಾಪಿನ್ಸ್ಕಿ (Adam Glapinski) ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಸುಮಾರು 13 ಬಿಲಿಯನ್ ಡಾಲರ್ (ಅಂದಾಜು ₹1.1 ಲಕ್ಷ ಕೋಟಿ) ಮೌಲ್ಯದ ಚಿನ್ನವನ್ನು ಮಾರಿ ಆಧುನಿಕ ಶಸ್ತ್ರಾಸ್ತ್ರ, ಟ್ಯಾಂಕ್ ಮತ್ತು ಕ್ಷಿಪಣಿಗಳನ್ನು ಖರೀದಿಸುವುದು ಇವರ ಯೋಜನೆಯಾಗಿದೆ. ಪೋಲೆಂಡ್ ಸದ್ಯ 550 ಟನ್ ಚಿನ್ನದ ದಾಸ್ತಾನು ಹೊಂದಿದ್ದು, ವಿಶ್ವದ 12ನೇ ಅತಿದೊಡ್ಡ ಚಿನ್ನದ ನಿಕ್ಷೇಪ ಹೊಂದಿರುವ ದೇಶವಾಗಿದೆ.
ಯುರೋಪಿಯನ್ ಒಕ್ಕೂಟದ ಸಾಲ ಬೇಡ ಎಂದ ಪೋಲೆಂಡ್
ಶಸ್ತ್ರಾಸ್ತ್ರಗಳ ಖರೀದಿಗಾಗಿ ಯುರೋಪಿಯನ್ ಒಕ್ಕೂಟ (EU) ನೀಡುವ ಸಾಲದ ಯೋಜನೆಗೆ (SAFE) ಒಪ್ಪಿಕೊಳ್ಳುವ ಬದಲು, ಪೋಲೆಂಡ್ ತನ್ನದೇ ಆದ ‘Polish SAFE 0%’ ಎಂಬ ಯೋಜನೆಯನ್ನು ರೂಪಿಸಿದೆ. ಇಯು ಸಾಲದ ಮೇಲೆ ಬಡ್ಡಿ ಹೆಚ್ಚಿರುವುದು ಮತ್ತು ಅದು ಅಮೆರಿಕದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಪೋಲೆಂಡ್ ಸರ್ಕಾರಕ್ಕಿದೆ. ಆದ್ದರಿಂದ, ಈಗಿನ ಗರಿಷ್ಠ ದರದಲ್ಲಿ ಚಿನ್ನವನ್ನು ಮಾರಿ ಲಾಭ ಮಾಡಿಕೊಳ್ಳುವುದು ಮತ್ತು ಆ ಹಣವನ್ನು ರಕ್ಷಣಾ ವಲಯಕ್ಕೆ ಬಳಸುವುದು ಪೋಲೆಂಡ್‌ನ ತಂತ್ರವಾಗಿದೆ.
ಎರಡೂ ಕಡೆ ಲಾಭದ ತಂತ್ರ
ಪೋಲೆಂಡ್ ಗವರ್ನರ್ ಪ್ರಕಾರ, ಈಗ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿದೆ. ಈ ಸಮಯದಲ್ಲಿ ಸ್ವಲ್ಪ ಚಿನ್ನ ಮಾರಿ ಲಾಭ ಪಡೆದು, ಅದನ್ನು ಸೇನೆಗೆ ಬಳಸುವುದು ಸೂಕ್ತ. ಭವಿಷ್ಯದಲ್ಲಿ ಚಿನ್ನದ ಬೆಲೆ ಸ್ಥಿರವಾದಾಗ ಮತ್ತೆ ಅದನ್ನು ಖರೀದಿಸಿ ದಾಸ್ತಾನು ಹೆಚ್ಚಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ.

ಭಾರತ ವಿರುದ್ಧದ ಸೋಲಿಗೆ ನಾನು ಮಾಡಿದ ತಪ್ಪೇ ಕಾರಣ!; ಹ್ಯಾರಿ ಬ್ರೂಕ್ ಪಶ್ಚಾತ್ತಾಪ

TAGGED:Poland sold gold worth 1.1 lakh crore to buy weapons
Share This Article
Facebook Twitter Copy Link Print
Previous Article ಭಾರತ ವಿರುದ್ಧದ ಸೋಲಿಗೆ ನಾನು ಮಾಡಿದ ತಪ್ಪೇ ಕಾರಣ!; ಹ್ಯಾರಿ ಬ್ರೂಕ್ ಪಶ್ಚಾತ್ತಾಪ
Next Article Gold Price Bengaluru: ಚಿನ್ನಪ್ರಿಯರಿಗೆ ಗುಡ್ ನ್ಯೂಸ್’; ಬಂಗಾರದ ದರದಲ್ಲಿ 7,700 ರೂ. ಕುಸಿತ!

Popular Posts

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

You Might Also Like

ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?