Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರಿಗರ ವರ್ಕಿಂಗ್ ಹುಚ್ಚಿನ ಬಗ್ಗೆ ಉದ್ಯಮಿ ಹೇಳಿದ್ದೇನು?
ಕರ್ನಾಟಕಪ್ರಮುಖ

ಬೆಂಗಳೂರಿಗರ ವರ್ಕಿಂಗ್ ಹುಚ್ಚಿನ ಬಗ್ಗೆ ಉದ್ಯಮಿ ಹೇಳಿದ್ದೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಇತ್ತೀಚೆಗೆ ಉದ್ಯಮಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರೋ ಪೋಸ್ಟ್ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಜನ ಬರೀ ‘ಕೆಲಸಗಾರರಾಗಿ’ ಉಳಿದಿದ್ದಾರೆ, ಇಲ್ಲಿನವರಿಗೆ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲ ಅಂತ ಇವರು ಕಿಡಿಕಾರಿದ್ದಾರೆ. ಇದಕ್ಕೆ ಅವರು ‘ಬೆಂಗಳೂರು ವೈರಸ್’ ಅಂತ ಹೆಸರಿಟ್ಟಿದ್ದಾರೆ. ಈ ವೈರಸ್‌ನಿಂದ ತಪ್ಪಿಸಿಕೊಳ್ಳೋಕೆ ಅವರು ಸಿಟಿಯನ್ನೇ ಬಿಟ್ಟು ಗೋವಾಕ್ಕೆ ಹೋಗಿದ್ದಾರೆ.

ಅಲ್ಲಿನ ಶಾಂತಿಯುತ ಜೀವನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಂಕಿತಾ ವೆಂಗುರ್ಲೇಕರ್ ಅನ್ನೋ ಉದ್ಯಮಿ ಈ ಚರ್ಚೆಯನ್ನ ಶುರು ಮಾಡಿದವರು. ಇವರು ಇತ್ತೀಚೆಗೆ ಬೆಂಗಳೂರಿನ ಕೈವಾರ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ರು.

ಬೆಟ್ಟದ ತುದಿಯಲ್ಲಿ ನಿಂತು ತಂಪಾದ ಗಾಳಿ ಮತ್ತು ಮಂಜಿನ ಸೌಂದರ್ಯ ಸವಿಯೋ ಬದಲು, ಅಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮಾತಾಡ್ತಿರೋದು ಇವರ ಕಿವಿಗೆ ಬಿತ್ತು.

ಅವರಿಬ್ಬರು ಒಬ್ಬರಿಗೊಬ್ಬರು “ನೀವೇನು ಮಾಡ್ತೀರಿ?” ಅಂತ ಕೇಳ್ತಿದ್ರು. ಅಲ್ಲಿಂದ ಶುರುವಾದ ಮಾತು ಸಂಬಳ, ಕೆಲಸದ ಅವಕಾಶ ಮತ್ತು ಕಂಪನಿಗಳ ಮೇಲೆ ನಿಂತುಬಿಡ್ತು.

ಈ ಘಟನೆ ಅಂಕಿತಾ ಅವರಿಗೆ ತುಂಬಾ ಬೇಸರ ತರಿಸಿತು. ಸುಂದರವಾದ ಪ್ರಕೃತಿಯ ನಡುವೆಯೂ ಜನರಿಗೆ ಕೆಲಸದ ಚಿಂತೆಯೇ ಕಾಡ್ತಿದೆ ಅಂದ್ರೆ ಇದು ಒಂದು ರೀತಿಯ ‘ವೈರಸ್’ ಅಲ್ವಾ ಅಂತ ಅವರು ಪ್ರಶ್ನಿಸಿದ್ದಾರೆ.

ಅಂಕಿತಾ ಅವರ ಪ್ರಕಾರ, ಬೆಂಗಳೂರಿನಲ್ಲಿ ನೀವು ಎಲ್ಲೇ ಹೋಗಿ ಅದು ಆಟದ ಮೈದಾನವಾಗಿರಲಿ, ಬೆಳಗಿನ ವಾಕಿಂಗ್‌ ಆಗಿರಲಿ ಅಥವಾ ಯಾರದ್ದೋ ಜೊತೆ ಡಿನ್ನರ್ ಪಾರ್ಟಿಗೆ ಹೋಗಿರಲಿ ಜನರು ಮೊದಲು ಕೇಳೋದು “ನೀವು ಏನು ಕೆಲಸ ಮಾಡ್ತೀರಿ?” ಅನ್ನೋ ಪ್ರಶ್ನೆಯನ್ನೇ.

ಅಷ್ಟೇ ಯಾಕೆ, ಯಾರದ್ದಾದ್ರೂ ಸಾವಿನ ಮನೆಯಲ್ಲಿ ಅಥವಾ ಹುಟ್ಟುಹಬ್ಬದ ಸಂಭ್ರಮದಲ್ಲೂ ಜನ ಕೆಲಸದ ಬಗ್ಗೆಯೇ ಮಾತಾಡ್ತಾರೆ.

ಮನುಷ್ಯರು ತಮ್ಮನ್ನು ತಾವು ಕೇವಲ ‘ಕೆಲಸಗಾರರು’ ಅಂತ ಅನ್ಕೊಂಡಿದ್ದಾರೆ. ಇದರಿಂದ ಸಂಬಂಧಗಳು, ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಹಾಳಾಗ್ತಿದೆ ಅಂತ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕೆಲಸದ ಹುಚ್ಚನ್ನೇ ಅವರು “ಬೆಂಗಳೂರು ವೈರಸ್” ಅಂತ ಕರೆದಿದ್ದಾರೆ.

ಈ ಕೆಲಸದ ಒತ್ತಡದ ಜೀವನದಿಂದ ಬೇಸತ್ತ ಅಂಕಿತಾ ಅವರು ಬೆಂಗಳೂರು ಬಿಟ್ಟು ಗೋವಾಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲಿನ ಜೀವನದ ವೇಗ ನಿಧಾನವಾಗಿದೆ ಮತ್ತು ನೆಮ್ಮದಿಯಾಗಿದೆ ಅನ್ನೋದು ಅವರ ಅಭಿಪ್ರಾಯ.

ಗೋವಾದಲ್ಲಿ ಜನ ಕೆಲಸವನ್ನೇ ಬದುಕು ಅನ್ಕೊಂಡಿಲ್ಲ, ಬದಲಿಗೆ ಜೀವನವನ್ನ ಎಂಜಾಯ್ ಮಾಡೋದಕ್ಕೆ ಆದ್ಯತೆ ನೀಡ್ತಾರೆ.

ಬೆಂಗಳೂರಿನಲ್ಲಿ ನಾವು ಬರೀ ಗಡಿಯಾರದ ಮುಳ್ಳಿನಂತೆ ಓಡ್ತಾ ಇರ್ತೀವಿ, ಆದ್ರೆ ಗೋವಾದಲ್ಲಿ ನಮಗಾಗಿ ನಾವು ಸಮಯ ಮೀಸಲಿಡಬಹುದು ಅಂತ ಅವರು ಹೇಳಿದ್ದಾರೆ. ಕೆಲಸದ ನಡುವೆ ಸಮತೋಲನ ಇರಬೇಕು ಅನ್ನೋದು ಅವರ ಮುಖ್ಯ ಉದ್ದೇಶ. ಅಂಕಿತಾ ವೆಂಗುರ್ಲೇಕರ್ ಅವರ ಈ ಮಾತುಗಳು ಲಿಂಕ್ಡ್‌ಇನ್‌ನಲ್ಲಿ ಸಖತ್ ವೈರಲ್ ಆಗ್ತಿವೆ. ಬಹಳಷ್ಟು ಜನ ಅವರ ಮಾತನ್ನು ಒಪ್ಪಿದ್ದಾರೆ, “ಹೌದು, ಬೆಂಗಳೂರಿನಲ್ಲಿ ನಾವು ನಮ್ಮ ಅಸ್ತಿತ್ವವನ್ನೇ ಮರೆತು ಓಡ್ತಿದ್ದೇವೆ” ಅಂತ ಕಮೆಂಟ್ ಮಾಡ್ತಿದ್ದಾರೆ.

ಖಮೇನಿ ಫೋಟೊ ಇರುವ ಮೊಬೈಲ್ ಕವರ್‌ ಮಾರಾಟ: ವೈರಲ್ ವಿಡಿಯೋ ನೋಡಿ

TAGGED:What did the businessman say about the workaholic attitude of Bengaluruans?
Share This Article
Facebook Twitter Copy Link Print
Previous Article ಖಮೇನಿ ಫೋಟೊ ಇರುವ ಮೊಬೈಲ್ ಕವರ್‌ ಮಾರಾಟ: ವೈರಲ್ ವಿಡಿಯೋ ನೋಡಿ
Next Article ಹೊರಗೆ ಬಂದರೆ ಅಪಾಯ ತಪ್ಪಿದ್ದಲ್ಲ, ಈ ಸಂಸ್ಥೆ ಕೊಟ್ಟಿದೆ ಅತೀದೊಡ್ಡ ವಾರ್ನಿಂಗ್!

Popular Posts

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

You Might Also Like

ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?