newsics.com
ಅಫ್ಘಾನ್ ಗಡಿ ಭಾಗದಲ್ಲಿ ಪಾಕ್ ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ತಾಲಿಬಾನಿಗಳು ಪಾಕಿಸ್ತಾನದ ನೂರ್ ಖಾನ್ ಏರ್ ಬೇಸ್ ಸೇರಿದಂತೆ ಹಲವು ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ.
ಪಾಕಿಸ್ತಾನದ ಪ್ರಮುಖ ವಾಯುನೆಲೆ ಹಾಗೂ ರಕ್ಷಣಾ ಸೌಲಭ್ಯಗಳ ಕೇಂದ್ರಗಳಾಗಿರುವ ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಪಾಕಿಸ್ತಾನದ 12 ನೇ ವಿಭಾಗದ ಪ್ರಧಾನ ಕಚೇರಿಯಾದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಮತ್ತು ಖೈಬರ್ ಪಖ್ತುಂಖ್ವಾದ ಮೊಹಮ್ಮದ್ ಏಜೆನ್ಸಿಯಲ್ಲಿರುವ ಖ್ವಾಜೈ ಶಿಬಿರ ಗುಲ್ನಿ ಸೇನಾನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಕುರಿತು ತಮ್ಮ X ಖಾತೆ ಮೂಲಕ ಮಾಹಿತಿ ಹಂಚಿಕೊಂಡಿರುವ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳು ಹಾಗೂ ಮಿಲಿಟರಿ ಕೇಂದ್ರಗಳ ಮೇಲೆ ನಿಖರ ಮತ್ತು ಸಂಘಟಿತ ವೈಮಾನಿಕ ಕಾರ್ಯಾಚರಣೆಗಳನ್ನು ನಡೆಸಿದೆ. ಈ ದಾಳಿಗಳು ಉದ್ದೇಶಿತ ಗುರಿಯಾಗಿದ್ದ ಪ್ರದೇಶಗಳಲ್ಲಿ ಗಮನಾರ್ಹ ಹಾನಿಯುಂಟುಮಾಡಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಕಳೆದ ಕೆಲ ದಿನಗಳಲ್ಲಿ ಅಫ್ಘಾನ್ ನ ಕಾಬೂಲ್, ಬಗ್ರಾಮ್, ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆಸಿದ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಲಾಗಿದೆ. ಈ ಮೂಲಕ ಅಫ್ಘಾನ್ ವಾಯುಪ್ರದೇಶದಲ್ಲಿ ಯಾವುದೇ ಉಲ್ಲಂಘನೆ ಅಥವಾ ಪ್ರತಿಕೂಲ ಪಾಕಿಸ್ತಾನಿ ಅಂಶಗಳಿಂದ ಆಕ್ರಮಣಕಾರಿ ಕೃತ್ಯಗಳಿಗೆ ತ್ವರಿತ, ನಿರ್ಣಾಯಕ ಮತ್ತು ಪ್ರಮಾಣಾನುಗುಣ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ತೋರಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನದ ನೂರ್ ಖಾನ್ ಸೇರಿದಂತೆ ಪ್ರಮುಖ ವಾಯುನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ಅತ್ಯಂತ ನಿಖರ ವೈಮಾನಿಕ ದಾಳಿಯನ್ನು ನೆನಪಿಸುವಂತಿದೆ. ಕಳೆದ ವರ್ಷ ಪಹಲ್ಗಾಮ್ ದಾಳಿಯ ಬಳಿಕ ಪ್ರತೀಕಾರವಾಗಿ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನದ ನೂರ್ ಖಾನ್ ಬೇಸ್ ಮೇಲೆ ನಡೆಸಿದ ದಾಳಿ ತೀವ್ರತೆ ಎಷ್ಟಿತೆಂದರೆ, ಈ ಏರ್ ಬೇಸ್ ಬಹುತೇಕ ಧ್ವಂಸಗೊಂಡು ನೆಲಸಮವಾಗಿದ್ದು, ಖುದ್ದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಂಕರ್ ನಲ್ಲಿ ಆವಿತು ಕೂರುವಂತೆ ಮಾಡಿತ್ತು. ಇನ್ನು, ಈ ದಾಳಿಯಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳಲು ಪಾಕ್ ಗೆ ವರ್ಷಗಳೇ ಹಿಡಿಯಲಿದ್ದು, ಈ ನಡುವೆ ಗಾಯದ ಮೇಲೆ ಬರೆ ಹಾಕಿದಂತೆ ತಾಲಿಬಾನಿಗಳು ಸಹ ಇದೇ ಏರ್ ಬೇಸ್ ಮೇಲೆ ದಾಳಿ ಮಾಡಿದ್ದಾರೆ.
https://x.com/i/status/2028334486598131997
Gold & Silver ಯುದ್ಧ ಹಿನ್ನೆಲೆ: ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಏರಿಕೆ
ಇರಾನ್ ಪರ ಮಾತನಾಡಿ ಪೇಚಿಗೆ ಸಿಲುಕಿದ ಪಾಕ್ ಪ್ರಧಾನಿ! ಟ್ರಂಪ್ ಕೆಂಗಣ್ಣಿಗೆ ಗುರಿ