Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ತಾಳಿ ಕಟ್ಟುವ ವೇಳೆ ಹಸೆಮಣೆಯಿಂದ ಕೈಕೊಟ್ಟು ಹೋದ ವಧು
ಕರ್ನಾಟಕಪ್ರಮುಖ

ತಾಳಿ ಕಟ್ಟುವ ವೇಳೆ ಹಸೆಮಣೆಯಿಂದ ಕೈಕೊಟ್ಟು ಹೋದ ವಧು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಮದುವೆ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ವಧು ‘ಈ ಮದುವೆ ನನಗೆ ಬೇಡ’ ಎಂದು ಮಂಟಪದಿಂದ ಹೊರನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.

ಶೃಂಗೇರಿ ಪಟ್ಟಣದ ಈಡಿಗ ಸಮುದಾಯ ಭವನದಲ್ಲಿ ಇಂದು 41 ವರ್ಷದ ದೀಕ್ಷಿತ್ ಹೆಗ್ಡೆ ಹಾಗೂ 29 ವರ್ಷದ ಸುಷ್ಮಾ ಅವರ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೀಕ್ಷಿತ್‌ಗೆ ಇದು ಮೊದಲ ಮದುವೆಯಾಗಿದ್ದರೆ, ಸುಷ್ಮಾಗೆ ಇದು ಎರಡನೇ ಮದುವೆಯಾಗಿತ್ತು. ಈಗಾಗಲೇ 9 ಸುಷ್ಮಾಗೆ ವರ್ಷದ ಮಗನೂ ಇದ್ದಾನೆ. ತನ್ನ ಮಗನಿಗೆ ಅಪ್ಪನ ಸ್ಥಾನ ನೀಡುವ, ತನಗೆ ಆಸರೆಯಾಗುವ ವ್ಯಕ್ತಿ ಎಂದು ನಂಬಿ ಸುಷ್ಮಾ ಈ ಸಂಬಂಧಕ್ಕೆ ಒಪ್ಪಿದ್ದರು.

ಮದುವೆ ಸಂಭ್ರಮದಲ್ಲಿದ್ದ ಸುಷ್ಮಾಗೆ ಅಪರಿಚಿತ ವ್ಯಕ್ತಿಗಳಿಂದ ಬಂದ 5 ಪುಟಗಳ ದೂರು ಪತ್ರವೊಂದು ಕೈಸೇರಿದೆ ಎನ್ನಲಾಗಿದೆ. ಈ ಪತ್ರದಲ್ಲಿ ವರ ದೀಕ್ಷಿತ್ ಹೆಗ್ಡೆಯ ಬಗ್ಗೆ ಆಘಾತಕಾರಿ ವಿಷಯಗಳಿದ್ದವು. ಇದನ್ನು ಓದಿದ ಸುಷ್ಮಾ ವರನ ಕಡೆಯವರನ್ನು ಪ್ರಶ್ನಿಸಿದಾಗ ಏನೇ ಕೇಳಿದರೂ ಆಮೇಲೆ ಹೇಳುತ್ತೇನೆ ಎಂದು ಮುಂದೂಡಿಕೆ ಮಾಡುತ್ತಾ ಬಂದಿದ್ದರು. ಆದರೆ, ಇದೀಗ ಮದುಮಗನ ಸತ್ಯಗಳು ಒಂದೊಂದಾಗಿ ಹೊರಬರಲಾರಂಭಿಸಿವೆ. ಇದರಿಂದ ಆಕ್ರೋಶಗೊಂಡ ಸುಷ್ಮಾ ಮದುವೆ ನಿಲ್ಲಿಸಲು ನಿರ್ಧರಿಸಿದ್ದಾರೆ.

ಸುಷ್ಮಾ ಆರೋಪದ ಪ್ರಕಾರ, ದೀಕ್ಷಿತ್ ಮೊದಲನೆಯದಾಗಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದನು. ಎರಡನೇಯದಾಗಿ ಆತನ ಮೇಲೆ ಈಗಾಗಲೇ ಕೆಲವು ಪೊಲೀಸ್ ಪ್ರಕರಣಗಳು (Police Case) ದಾಖಲಾಗಿದ್ದು, ಆ ವಿಷಯವನ್ನೂ ಮುಚ್ಚಿಡಲಾಗಿತ್ತು. ಮುಖ್ಯವಾಗಿ 2021ರಲ್ಲಿ ನಡೆದ ರಾಜ್ಯವೇ ಬೆಚ್ಚಿ ಬೀಳಿಸುವ ಬಾಲಕಿ ಮೇಲಿನ ಅತ್ಯಾ*ಚಾರ ಕೇಸಿನಲ್ಲಿ ದೀಕ್ಷಿತ್ ಆರೋಪಿ ಆಗಿದ್ದಾನೆ. ಜೊತೆಗೆ, ಮನೆಯಲ್ಲಿ ದೀಕ್ಷಿತ್‌ನ ತಾಯಿ ಆರೋಗ್ಯವೂ ಸರಿಯಿಲ್ಲ ಎಂಬ ಸತ್ಯವನ್ನು ಮದುವೆಗೂ ಮುನ್ನ ಹೇಳಿರಲಿಲ್ಲ. ಈ ಬಗ್ಗೆ ಸುಷ್ಮಾ ಈ ಹಿಂದೆ ಕೇಳಿದಾಗಲೆಲ್ಲಾ ದೀಕ್ಷಿತ್, ‘ಒಮ್ಮೆ ಮದುವೆ ಆಗಲಿ, ಆಮೇಲೆ ಎಲ್ಲವನ್ನೂ ಹೇಳ್ತೀನಿ’ ಎಂದು ಹಾರಿಕೆ ಉತ್ತರ ನೀಡುತ್ತಿದ್ದ ಎನ್ನಲಾಗಿದೆ.
ಮದುವೆ ಮಂಟಪದಲ್ಲಿ ಹೈಡ್ರಾಮಾ ಶುರುವಾಗುತ್ತಿದ್ದಂತೆ ಸ್ಥಳಕ್ಕೆ ಸಿಡಿಪಿಓ (CDPO) ಅಧಿಕಾರಿಗಳು ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿದರು. ಯುವತಿಗೆ ಸಂಧಾನದ ಮೂಲಕ ತಿಳಿಹೇಳಲು ಪ್ರಯತ್ನಿಸಿದರಾದರೂ, ‘ನಂಬಿಕೆ ದ್ರೋಹ ಮಾಡಿದವನ ಜೊತೆ ನಾನು ಜೀವನ ನಡೆಸಲು ಸಾಧ್ಯವಿಲ್ಲ’ ಎಂದು ಸುಷ್ಮಾ ಖಡಕ್ಕಾಗಿ ಹೇಳಿ ಮಂಟಪದಿಂದ ಹೊರನಡೆದಿದ್ದಾರೆ. ನಂಬಿಕೆಯ ಮೇಲೆ ನಿಲ್ಲಬೇಕಾದ ದಾಂಪತ್ಯದ ಅಡಿಪಾಯವೇ ಸುಳ್ಳಿನ ಮೇಲೆ ನಿರ್ಮಾಣವಾಗಲು ಹೊರಟಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಚರ್ಚಿಸುತ್ತಿದ್ದಾರೆ. ಸದ್ಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮದುವೆ ಅರ್ಧಕ್ಕೆ ನಿಂತು ದಿಬ್ಬಣ ವಾಪಸ್ ಹೋಗಿದೆ.

ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ! ವಿಡಿಯೋ ವೈರಲ್

TAGGED:The bride who lost her hand in the wedding ceremony while tying the tiara
Share This Article
Facebook Twitter Copy Link Print
Previous Article ತ್ರಿಶಾ ಮೇಲೆ ಟ್ರೋಲ್ ಸುರಿಮಳೆ ಯಾಕೆ?
Next Article ಖಮೇನಿ ಮನೆಯನ್ನೇ ಸ್ಫೋಟಿಸಿದ ಇಸ್ರೇಲ್; ಸುರಕ್ಷಿತ ಸ್ಥಳಕ್ಕೆ ಸುಪ್ರೀಂ ನಾಯಕ ರವಾನೆ

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?