https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳನ್ನೆಲ್ಲಾ ಒಟ್ಟುಗೂಡಿಸಿ ‘ದೊಡ್ಮನೆ ಹಬ್ಬ’ ಎಂಬ ವಿಶೇಷ ಕಾರ್ಯಕ್ರಮವನ್ನ ಕಲರ್ಸ್ ಕನ್ನಡ ವಾಹಿನಿ ಆಯೋಜಿಸಿತ್ತು. ಸುಷ್ಮಾ ಕೆ ರಾವ್ ನಿರೂಪಣೆ ಮಾಡಿದ್ದರು. ಈ ಕುರಿತಂತೆ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ರಕ್ಷಿತಾ ಶೆಟ್ಟಿ ಆಂಕರ್ ಸುಷ್ಮಾ ಕೆ ರಾವ್ ಬಗ್ಗೆಯೇ ಅಸಮಧಾನ ಹೊರಹಾಕಿದ್ದಾರೆ.
ರಕ್ಷಿತಾ.. ರಕ್ಷಿತಾ.. ಇದು ನಾಮಿನೇಷನ್ ಅಲ್ಲ ಅಂತಿದ್ದರು. ನಮಗೂ ಕೂಡ ಮಾತಾಡೋದಕ್ಕೆ ತುಂಬಾ ಇತ್ತು. ನಾವು ಮಾತಾಡುವಾಗ ಯಾಕೆ ಕಮ್ಮಿ ಮಾತಾಡಿ ಅಂತಿದ್ದರು?’’ ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಅಂದ್ಹಾಗೆ, ರಕ್ಷಿತಾ ಮಾತಾಡೋಕೆ ಆರಂಭಿಸಿದಾಗ ‘’ಇದು ನಾಮಿನೇಷನ್ ಅಲ್ಲ’’ ಎಂದಿದ್ದು ಗಿಲ್ಲಿ ನಟ. ‘’ಹೋಸ್ಟ್ ಹೋಗಿ.. ಪದೇ ಪದೇ ಪದೇ ಗಿಲ್ಲಿ – ಕಾವ್ಯ ಹತ್ತಿರ ಮಾತಾಡ್ತಿದ್ರು. ನಾವು ಮಾತ್ರ ಸುಮ್ಮನೆ ನಿಂತಿದ್ವಿ. ಮಾತಾಡಲಿ.. ನೋ ಪ್ರಾಬ್ಲಂ.. ಆದರೆ, ನಾವು ಕೂಡ ನಿಂತುಕೊಂಡಿದ್ದೇವೆ. 10 ನಿಮಿಷದಿಂದ ನಾನು ಹೀಗೇ ನಿಂತುಕೊಂಡಿದ್ದೆ. ಅಂದ್ರೆ, ನಾವು ಕೂಡ ಇದ್ದೇವೆ. ನಮಗೂ ಮಾತಾಡೋಕೆ ಉಂಟು’’ ಎಂದು ಸಂದರ್ಶನದಲ್ಲಿ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
’ಕರಿಬಸಪ್ಪ ಮಾತಾಡುವಾಗ.. ನಿಮ್ಮ ಮೋಟಿವೇಷನ್ ಸಾಕು ಅಂತಿದ್ದರು. ನಾವು ಮಾತಾಡುವಾಗ ಎಲ್ಲರೂ ಕಿವಿ ಮುಚ್ಚಿಕೊಳ್ಳೋದನ್ನ ಮಾಡುತ್ತಿದ್ದರು. ಆದರೆ, ಗಿಲ್ಲಿ – ಕಾವ್ಯ ಮಾತಾಡೋವಾಗ ನೋ ಪ್ರಾಬ್ಲಂ ಆ?’’ ಎಂದು ರಕ್ಷಿತಾ ಶೆಟ್ಟಿ ಕೇಳಿದ್ದಾರೆ.
ಅಂಗವಿಕಲ ಯುವಕನ ಹನಿಟ್ರ್ಯಾಪ್ ಗೆ ಯತ್ನ; ಯುವತಿ ಸೇರಿದಂತೆ ನಾಲ್ವರು ಅರೆಸ್ಟ್