https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಬಹುಕಾಲದ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿಗಳಾಗಿದ್ದಾರೆ. ತೆಲುಗು ಮತ್ತು ಕೊಡವ ಎಂಬ ಎರಡು ಸಂಪ್ರದಾಯಗಳೆರಡರಲ್ಲೂ ವಿವಾಹವಾಗಿದ್ದು, ತಮ್ಮ ಮದುವೆಯ ಫೋಟೋಗಳು ಮತ್ತು ಹೃದಯಸ್ಪರ್ಶಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಜೋಡಿಯ ಮದುವೆ ಎರಡು ವಿಭಿನ್ನ ಸಂಪ್ರದಾಯಗಳ ಸಮ್ಮಿಲನವಾಗಿತ್ತು. ಫೆಬ್ರವರಿ 26 ರಂದು ಬೆಳಿಗ್ಗೆ 10:10ಕ್ಕೆ ವಿಜಯ್ ಅವರ ಸಂಪ್ರದಾಯದಂತೆ ಸಾಂಪ್ರದಾಯಿಕ ತೆಲುಗು ಶೈಲಿಯಲ್ಲಿ ವಿವಾಹ ನೆರವೇರಿತು. ನಂತರ ಸಂಜೆ ರಶ್ಮಿಕಾ ಅವರ ಮೂಲದ ಕೊಡವ (ಕೊಡಗು) ಸಂಪ್ರದಾಯದಂತೆ ಮತ್ತೊಂದು ವಿವಾಹ ಸಮಾರಂಭ ಜರುಗಿತು.
ವಿಜಯ್ ದೇವರಕೊಂಡ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಮದುವೆಯ ಧಾರೆ ಎರೆಯುವ ಕ್ಷಣದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿರುವುದು ಕಂಡುಬಂದಿದೆ. ಆನಂದಬಾಷ್ಪ ಸುರಿಸುತ್ತಿರುವ ರಶ್ಮಿಕಾ ಅವರ ಈ ಫೋಟೋಗಳು ಈಗ ವೈರಲ್ ಆಗಿದ್ದು, ಇಬ್ಬರ ನಡುವಿನ ಗಾಢವಾದ ಪ್ರೀತಿಗೆ ಕನ್ನಡಿ ಹಿಡಿದಿವೆ.
ವಿಜಯ್ ದೇವರಕೊಂಡ ಬರೆದ ಹೃದಯಸ್ಪರ್ಶಿ ಸಾಲುಗಳು
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ “ಒಂದು ದಿನ ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಂಡೆ. ಆಕೆ ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು, ಅವಳು ಎದುರಿಗೆ ಕುಳಿತಿದ್ದರೆ ನಾನು ಮಾಡುವ ಊಟಕ್ಕೆ ಒಂದು ಅರ್ಥ ಸಿಗುತ್ತಿತ್ತು ಎಂದು ಅನ್ನಿಸಿತು. ನನ್ನ ಜೀವನಕ್ಕೆ ನೆಮ್ಮದಿ ಮತ್ತು ಮನೆ ಎಂಬ ಭಾವ ನೀಡಲು ಅವಳು ಬೇಕೇ ಬೇಕು ಎಂದು ನನಗೆ ಅರಿವಾಯಿತು. ಹಾಗಾಗಿ, ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿ ಮಾಡಿಕೊಂಡೆ. 26.02.2026.” ಎಂದು ಬರೆದಿದ್ದಾರೆ.
https://www.instagram.com/p/DVOOY-egX_M/?igsh=MjJ2bmxnc3gyYTFy