https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಪ್ರಗ್ನೆಂಟ್ ಮಾಡಿ, 13 ಲಕ್ಷ ರೂಪಾಯಿ ಜೊತೆಗೆ 2 ಬೆಡ್ ರೂಂ ಫ್ಲಾಟ್ ಪಡೆಯಿರಿ ಎಂದು ಸುಂದರ ಮಹಿಳೆಯೊಬ್ಬ಼ರ ಮೆಸೇಜ್ ಜೊತೆಗೆ ಫೋಟೋ ಭಾರಿ ಹರಿದಾಡುತ್ತಿದೆ. ಹಲವರು ವ್ಯಾಟ್ಸಾಪ್ ಖಾತೆಗೆ ಈ ಮೆಸೇಜ್ ಬರುತ್ತಿದೆ. ಇದೇ ವೇಳೆ ಈ ಮಾಹಿತಿ ಗೌಪ್ಯವಾಗಿಡಿ.
ನಿಮಗೆ ಒಕೆ ಎಂದರೆ ಕರೆ ಮಾಡಿ ಅಥವಾ ಮೆಸೇಜ್ ಮಾಡಿ ಎಂಬ ಸಂದೇಶ ಬರುತ್ತಿದೆ. ಅಪ್ಪಿ ತಪ್ಪಿ ಈ ಫೋನ್ ನಂಬರ್‌ಗೆ ಕರೆ ಮಾಡಿದರೆ ಮೆಸೇಜ್ ಮಾಡಿದರೆ ನಿಮ್ಮ ಕಷ್ಟಕಾಲ ಆರಂಭಗೊಳ್ಳಲಿದೆ.
ಆಲ್ ಇಂಡಿಯಾ ಪ್ರಗ್ನೆಂಟ್ ಸ್ಕ್ಯಾಮ್
ನನ್ನ ಗಂಡನಿಂದ ಗರ್ಭಿಣಿಯಾಗಲು ಸಾಧ್ಯವಿಲ್ಲ. ಹಲವು ಪ್ರಯತ್ನ ಬಳಿಕ ಪರೀಕ್ಷೆಯಲ್ಲೂ ದೃಢಪಟ್ಟಿದೆ. ಹೀಗಾಗಿ ನಾನು ಗರ್ಭಿಣಿಯಾಗಬೇಕು. ನನಗೆ ಮಗು ಬೇಕು. ನೀವು ನನ್ನ ಪ್ರೆಗ್ಮೆಂಟ್ ಮಾಡಿ. ನಾನು ಗರ್ಭಿಣಿಯಾದರೆ ನಿಮಗೆ 13 ಲಕ್ಷ ರೂಪಾಯಿ ನಗದು ಹಾಗೂ 2 ಬೆಡ್ ರೂಂ ಮನೆ ನೀಡುತ್ತೇನೆ ಎಂಬ ಮೆಸೇಜ್ ನೋಡಿ ಹಲವರು ಮರುಳಾಗಿದ್ದಾರೆ. ಅಷ್ಟೇ ವೇಗದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ವಿಡಿಯೋ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಮೆಸೇಜ್ ಬಂದ ಬಳಿಕ ಫೋನ್ ಅಥವಾ ಮೆಸೇಜ್ ಮಾಡಿದರೆ ನಿಮ್ಮ ಜೊತೆ ಮಹಿಳೆ ಮಾತನಾಡುತ್ತಾಳೆ. ಬಳಿಕ ಫೋನ್ ಮೂಲಕವೇ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಿಜಿಸ್ಟ್ರೇಶನ್, ಜಿಎಸ್‌ಟಿ ಸೇರಿದಂತೆ ಇತರ ರಿಜಿಸ್ಟ್ರೇಶನ್‌ಗೆ ಹಣ ನೀಡಬೇಕು ಎಂಬ ಸೂಚನೆಯಂಂತೆ ನೀವು ಹಣ ಪಾವತಿಸಿದರೆ ಬಳಿಕ ಹಲವು ಕಾರಣ ಹೇಳಿ ಹಣ ವಸೂಲಿ ಮಾಡುತ್ತಾರೆ. ಇಲ್ಲಿ ನೀವು ಜಾಣರಾದರೆ ಸಮಸ್ಯೆಯಿಂದ ಹೊರಬಂದರೆ ಉತ್ತಮ. ಆದರೆ ನೀವು ಅತೀ ಜಾಣತನ ತೋರಿದರೆ ಮತ್ತೆ ಸಂಕಷ್ಟ ಹೆಚ್ಚು.
ವಿಡಿಯೋ ಬ್ಲಾಕ್ ಮೇಲ್
ನೀವು ಹಣ ಪಾವತಿಸಲು ನಿರಾಕರಿಸಿದರೆ, ಅಥವಾ ಬೇರೆ ಕಾರಣ ಹೇಳಿದರೆ ಮುಂದಿನ ಹಂತ ಮತ್ತಷ್ಟು ತಿರುವು ಪಡೆಯಲಿದೆ. ನಿಮ್ಮನ್ನು ಕೆಲ ಸ್ಥಳಗಳಿಗೆ ಬರಲು ಸೂಚಿಸಲಾಗುತ್ತದೆ. ನೀವು ನಿಗಿದಿತ ಸ್ಥಳಕ್ಕೆ ತೆರಳಿದರೆ ಕೋಣೆಯೊಳಗೆ ಮಹಿಳೆ ನಿಮ್ಮನ್ನು ಬರಮಾಡಿಕೊಳ್ಳುತ್ತಾಳೆ. ಬಳಿಕ ನಿಮ್ಮ ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಲಾಗುತ್ತದೆ. ಈ ವೇಳೆ ಅವರು ಹೇಳಿದ ಹಣ ನೀವುಕೊಡಲೇಬೇಕಾಗುತ್ತದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ.