https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಮನಗರ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಟ್ಟಗುಪ್ಪೆ ಗ್ರಾಮದ ಕೆರೆ ಬಳಿ ನಡೆದಿದೆ.
ರೌಡಿ ಶೀಟರ್ ನಿಮಾನ್ಸ್ ರಾಜ ಎಂಬುವವನು ಮತ್ತವನ ಸಹಚರರು ಯುವಕನೊಬ್ಬನನ್ನು ಕೆರೆ ಬಳಿ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ.
ಹಲ್ಲೆಗೊಳಗಾದ ಯುವಕ ಪ್ರಾಣ ಉಳಿಸಿಕೊಳ್ಳಲು ಹಲ್ಲೆಕೋರರ ಕಾಲು ಹಿಡಿದಿದ್ದಾನೆ, ಕೈಮುಗಿದು ಅತ್ತಿದ್ದಾನೆ. ಆದರೆ, ರೌಡಿ ಸಹಚರರಿಗೆ ಮಾತ್ರ ಕಿಂಚಿತ್ತೂ ಕರುಣೆ ಬಂದಿಲ್ಲ. ಯುವಕನ ತಲೆಗೆ ಹೊಡೆದು ಗಾಯಗೊಳಿಸಿ, ಆ ಗಾಯದ ಮೇಲೆ ಮದ್ಯ ಸುರಿದು ಸಂಭ್ರಮಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಮನಗರ ಪೊಲೀಸರ ಕಾರ್ಯಕ್ಷಮತೆಯ ಮೇಲೆ ಪ್ರಶ್ನೆ ಎದ್ದಿದೆ. . ಸದ್ಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಕೃತಿ ಮೆರೆದ ರೌಡಿ ಶೀಟರ್ ಸಹಚರರಿಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
https://www.newsics.com/2026/02/25/a-look-at-16-scenes-from-the-kerala-story-2/