Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ
ಕರ್ನಾಟಕಪ್ರಮುಖ

ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ

Share
2 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

ಇತ್ತೀಚೆಗೆ ತರಕಾರಿಯನ್ನ ಕೂಡ ಆರೋಗ್ಯಕರ ಪದಾರ್ಥ ಎಂದು ಪರಿಗಣಿಸೋಕೆ ಆಗಲ್ಲ. ಯಾಕಂದ್ರೆ ಕಾಲ ಬದಲಾಗಿದೆ. ತಿನ್ನೋ ವಸ್ತು ಇಂದ ಹಿಡಿದು ಎಲ್ಲವೂ ಕೆಮಿಕಲ್ ಮಯವಾಗಿದೆ. ಹೀಗಿರೋವಾಗ ತರಕಾರಿ ಮಾತ್ರ ಆರೋಗ್ಯಕರ, ಡಯಟ್‌ಗೆ ಉಪಯುಕ್ತ, ತರಕಾರಿ ತಿನ್ನೋದ್ರಿಂದ ಲೈಫ್‌ಸ್ಟೈಲ್ ಚೆನ್ನಾಗಿರುತ್ತೆ ಅಂದುಕೊಳ್ಳೋಕಾಗಲ್ಲ. ಅದರಲ್ಲೂ ಈಗ ಆಗಿರೋ ಬೆಳವಣಿಗೆಯಿಂದ ತರಕಾರಿ ತಿನ್ನೋದಕ್ಕೂ ಹೆದರೋ ಪರಿಸ್ಥಿತಿ ಬಂದಿದೆ.

ಇದೀಗ ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿ ಭಾರಿ ಲೋಹವಾಗಿರುವ ಸೀಸದ ಅಂಶ ಮತ್ತು ಕ್ರಿಮಿನಾಶಕಗಳ ಅವಶೇಷಗಳು ಕಂಡು ಬಂದಿದ್ದು, ಇವುಗಳನ್ನು ಸೇವಿಸಿದರೆ ಕಿಡ್ನಿ ಹಾಗೂ ಮಿದುಳು ಕಾಯಿಲೆ ಬರಲಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನಗರದ ಅನೇಕ ತರಕಾರಿಗಳಲ್ಲಿ ಅಪಾಯಕಾರಿ ಅಂಶಗಳಿರುವ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಎನ್‌ಜಿಟಿ ನಿರ್ದೇಶನದಂತೆ ತರಕಾರಿಗಳ ಪರೀಕ್ಷೆ ನಡೆಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು.

ಈ ಸಮಿತಿಯ ಸದಸ್ಯರು ಬೆಂಗಳೂರು ನಗರ, ನೆಲಮಂಗಲ, ಚಿಕ್ಕಬಳ್ಳಾಪುರದ ವಿವಿಧ ಎಪಿಎಂಸಿಗಳು, ಹಾಪ್‌ಕಾಮ್ಸ್‌ಗಳು, ತರಕಾರಿ ಬೆಳೆಯುವ ಪ್ರದೇಶಗಳಿಂದ 72 ಮಾದರಿಯ ತರಕಾರಿಗಳನ್ನು ಸಂಗ್ರಹಿಸಿದ್ದರು. ಪರೀಕ್ಷೆಯ ಭಾಗವಾಗಿ ಹೊಲಗಳಲ್ಲಿನ ಮಣ್ಣು ಮತ್ತು ಬೆಳೆಗಳಿಗೆ ಬಳಸುವ ಸಂಸ್ಕರಿಸಿದ ನೀರು, ಅಂತರ್ಜಲ ಕೂಡ ಸಂಗ್ರಹಿಸಿ ಎಫ್‌ಎಸ್‌ಎಸ್‌ಎಐ ಅನುಮೋದಿತ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ.

ಅಧ್ಯಯನಕ್ಕೋಸ್ಕರ ಈ ಸಮಿತಿ ಒಟ್ಟು 72 ತರಕಾರಿಗಳ ಮಾದರಿಗಳನ್ನು ಮಾರುಕಟ್ಟೆ ಮತ್ತು ಕೃಷಿ ಕ್ಷೇತ್ರಗಳಿಂದ ಸಂಗ್ರಹಿಸಿತು. ಈಗ ಪರೀಕ್ಷಾ ಫಲಿತಾಂಶಗಳಲ್ಲಿ 19 ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಸೀಸ ಕಂಡುಬಂದಿದೆ.

ಸಾವಯವ ತರಕಾರಿ ಎಂದು ಮಾರಾಟ ಮಾಡಲಾಗುತ್ತಿದ್ದ 1 ಕೆ.ಜಿ ಬದನೆಕಾಯಿಯಲ್ಲಿ 1.953 ಎಂ.ಜಿ ಸೀಸ ಕಂಡು ಬಂದಿದೆ. ಇದು ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದಕ್ಕಿಂತ 20 ಪಟ್ಟು ಅಧಿಕ. ತೊಂಡೆಕಾಯಿಯಲ್ಲಿ 18 ಪಟ್ಟು, ಬೀನ್ಸ್‌ನಲ್ಲಿ 9 ಪಟ್ಟು ಸೀಸ ಕಂಡು ಬಂದಿದೆ. ಹಸಿರೆಲೆಗಳು ಹಾಗೂ ಕ್ಯಾಬೇಜ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಸೀಸ, ಸೌತೆಕಾಯಿ, ದಪ್ಪ ಮೆಣಸಿನಕಾಯಿ, ಹಾಗಲಕಾಯಿ, ಬೀಟ್‌ರೂಟ್, ಬಜ್ಜಿ ಮೆಣಸಿನಕಾಯಿಯಲ್ಲೂ ಕೂಡ ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿದೆ.

ತರಕಾರಿಗಳಲ್ಲಿ ಕಂಡು ಬಂದಿರುವ ಸೀಸ ಮತ್ತು ಕ್ರಿಮಿನಾಶಕ ಅವಶೇಷಗಳ ಕುರಿತು ಎಚ್ಚರಿಕೆ ವಹಿಸಬೇಕು. ನಿಯಮಿತವಾಗಿ ತರಕಾರಿಗಳ ಪರೀಕ್ಷೆ ಮಾಡುತ್ತಿರಬೇಕು. ಅಪಾಯಕಾರಿ ಅಂಶಗಳು ತರಕಾರಿಗಳಲ್ಲಿ ಸೇರ್ಪಡೆಗೊಳ್ಳದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಅನುಸರಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

https://www.newsics.com/2026/02/24/drug-lord-el-mencho-killed-us-company-books-every-flight-to-protect-employee/

 

TAGGED:Toxic substances found in vegetables grown in these areas of Bengaluru
Share This Article
Facebook Twitter Copy Link Print
Previous Article ಡ್ರಗ್ ಲಾರ್ಡ್‌ ಹತ್ಯೆ ಬಳಿಕ ಬೆಂಕಿಯುಂಡೆಯಾದ ಮೆಕ್ಸಿಕೋ: ಉದ್ಯೋಗಿಯ ರಕ್ಷಣೆಗೆ ಎಲ್ಲ ವಿಮಾನದಲ್ಲೂ ಸೀಟ್ ಬುಕ್ ಮಾಡಿದ ಅಮೆರಿಕ ಕಂಪನಿ!
Next Article Gold Rate ಅತ್ತ ಬಂಗಾರದ ಬೆಲೆ ಏರಿಕೆ , ಬೆಳ್ಳಿ ಬೆಲೆ ಇಳಿಕೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?