Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವಗಂಗಾ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣದಲ್ಲಿ ಜ್ಯೋತಿಷಿಯೊಬ್ಬರಿಗೆ 200 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶಿವಗಂಗಾ ಜಿಲ್ಲಾ ಪೋಕ್ಸೋ ತ್ವರಿತ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ತೀರ್ಪು ಸಮಾಜದಲ್ಲಿ ಅಪ್ರಾಪ್ತರ ವಿರುದ್ಧದ ಅಪರಾ‘ಗಳಿಗೆ ಕಠಿಣ ಸಂದೇಶವಾಗಿ ಪರಿಣಮಿಸಿದೆ.
ಮನಗಿರಿ ಪ್ರದೇಶದ 52 ವರ್ಷದ ರಾಮಕೃಷ್ಣನ್ ಶಿಕ್ಷೆಗೆ ಗುರಿಯಾದ ಜ್ಯೋತಿಷಿ. ಜ್ಯೋತಿಷ್ಯ ಹೇಳುವುದು ಹಾಗೂ ದೋಷ ನಿವಾರಣೆಗೆ ಪರಿಕಾರ ಪೂಜೆಗಳನ್ನು ನಡೆಸುವುದನ್ನು ಆತ ತನ್ನ ವೃತ್ತಿಯಾಗಿಸಿಕೊಂಡಿದ್ದ. 2021ರ ನವೆಂಬರ್‌ನಲ್ಲಿ ಮಹಿಳೆಯೊಬ್ಬರು ತಮ್ಮ 18 ಹಾಗೂ 14 ವರ್ಷದ ಇಬ್ಬರು ಪುತ್ರಿಯರು ಓದಿನಲ್ಲಿ ಹಿನ್ನಡೆ ಅನು‘ವಿಸುತ್ತಿರುವ ಬಗ್ಗೆ ಪರಿಹಾರ ತಿಳಿದುಕೊಳ್ಳಲು ರಾಮಕೃಷ್ಣನ್ ಸಂಪರ್ಕಿಸಿದ್ದರು.
ಆ ಸಂದ‘ರ್ದಲ್ಲಿ ಕೆಲ ಆಚರಣೆಗಳನ್ನು ನಡೆಸಬೇಕಿದ್ದು, ಅದರ _ಭಾಗವಾಗಿ ಬಾಲಕಿಯರನ್ನು ತನ್ನ ಮನೆಗೆ ಕರೆತರುವಂತೆ ಜ್ಯೋತಿಷಿ ಸೂಚಿಸಿದ್ದನು. ಆತನ ಮಾತುಗಳನ್ನು ನಂಬಿದ ತಾಯಿ, ಇಬ್ಬರು ಹೆಣ್ಣುಮಕ್ಕಳನ್ನು ಆತನ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಗೆ ಹೋದ ಬಳಿಕ ಮಹಿಳೆಯನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲು ಹೇಳಿದ ರಾಮಕೃಷ್ಣನ್, ಬಾಲಕಿಯರನ್ನು ಬೇರೆ ಕೋಣೆಗೆ ಕರೆದುಕೊಂಡು ಹೋಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದೇ ವಿಷಯವನ್ನು ಹೊರಗೆ ಹೇಳಿದರೆ ಪೋಷಕರ ಜೀವಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಬಾಲಕಿಯರು ‘ಯದಿಂದ ಘಟನೆ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಸುಮಾರು ಎರಡು ವರ್ಷಗಳ ಬಳಿಕ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಲೈಂಗಿಕವಾಗಿ ಹರಡುವ ರೋಗ ತಗುಲಿರುವುದು ಬಹಿರಂಗವಾಯಿತು. ನಂತರ ಪೋಷಕರು ಸೂಕ್ಷ್ಮವಾಗಿ ವಿಚಾರಿಸಿದಾಗ ನಡೆದ ದೌರ್ಜನ್ಯ ಬೆಳಕಿಗೆ ಬಂದಿದೆ.
ಘಟನೆಯಿಂದ ಬೆಚ್ಚಿಬಿದ್ದ ಪೋಷಕರು ತಿರುಪತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಶಿವಗಂಗಾ ಜಿಲ್ಲಾ ಪೋಕ್ಸೋ ಾಸ್ಟ್ ಟ್ರ್ಯಾಕ್ ನ್ಯಾಯಾಲಯವು ಆರೋಪಿ ವಿರುದ್ಧದ ಆರೋಪಗಳು ಸಾಬೀತಾಗಿರುವುದಾಗಿ ಘೋಷಿಸಿದೆ. ನ್ಯಾಯಾಧೀಶ ಗೋಕುಲ್ ಮುರುಗನ್ ಅವರು ರಾಮಕೃಷ್ಣನ್‌ಗೆ 200 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಜತೆಗೆ, ತಮಿಳುನಾಡು ಸರ್ಕಾರವು ಸಂತ್ರಸ್ತ ಇಬ್ಬರು ಬಾಲಕಿಯರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಈ ತೀರ್ಪು ಅಪ್ರಾಪ್ತರ ಮೇಲಿನ ಲೈಂಗಿಕ ಅಪರಾ‘ಗಳಿಗೆ ವಿರುದ್ಧ ಕಾನೂನು ಎಷ್ಟು ಕಠಿಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಪಾಕಿಸ್ತಾನಿಗಳಿಂದ ದಾಳಿ; 16 ವರ್ಷದಿಂದ ನಡೆಸುತ್ತಿದ್ದ ರೆಸ್ಟೋರೆಂಟ್ ಮುಚ್ಚಲು ನಿರ್ಧರಿಸಿದ ಭಾರತೀಯ