https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಭಾರತದ ಚಿತ್ರನಟಿ ತಾಪ್ಸಿ ಪನ್ನು ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಚಿತ್ರರಂಗದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಕೋರ್ಟ್ ರೂಮ್ ನಾಟಕ “ಅಸ್ಸಿ” ಯಲ್ಲಿ ಕಾಣಿಸಿಕೊಂಡ ನಟಿ ತಾಪ್ಸಿ ಪನ್ನು ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಸೆಟ್‌ನಲ್ಲಿನ ಅಸ್ವಸ್ಥತೆ, ಐಟಂ ಸಾಂಗ್ ಸಂಸ್ಕೃತಿ ಮತ್ತು ಭಾರತೀಯ ಚಲನಚಿತ್ರೋದ್ಯಮದಲ್ಲಿನ ದ್ವಿಗುಣ ಮಾನದಂಡಗಳ ಬಗ್ಗೆ ಮಾತನಾಡಿದರು.
ಸಂದರ್ಶನದಲ್ಲಿ ಮಾತನಾಡುತ್ತಾ ತಾಪ್ಸಿ, ‘ದಕ್ಷಿಣದ ಚಿತ್ರಗಳಲ್ಲಿ ನಟಿಯರನ್ನು ಗ್ಲಾಮರಸ್ ಆಗಿ ತೋರಿಸಲು ನಿರ್ದೇಶಕರು ಪ್ಯಾಡೆಡ್ ಬ್ರಾ ಧರಿಸುವಂತೆ ಒತ್ತಾಯಿಸುತ್ತಾರೆ. ಸೆಟ್‌ನಲ್ಲಿ ಹುಡುಗಿಯರು ಹೆಚ್ಚಾಗಿ ಇರುವುದಿಲ್ಲ, ಹಾಗಾಗಿ ನಿರ್ದೇಶಕರು ಅಸಿಸ್ಟೆಂಟ್ ಡೈರೆಕ್ಟರ್ ಮೂಲಕ ಈ ವಿಷಯವನ್ನು ಸ್ಟೈಲಿಸ್ಟ್‌ಗಳಿಗೆ ತಿಳಿಸುತ್ತಾರೆ, ನಂತರ ಅದು ನಮಗೆ ತಲುಪುತ್ತದೆ. ಹಾಡಿನ ಚಿತ್ರೀಕರಣದ ಮಧ್ಯೆ ಹೋಗಿ ಬಟ್ಟೆ ಬದಲಿಸಿ ಬರುವುದು ಎಷ್ಟು ಮುಜುಗುರ ತರುತ್ತದೆ ಎಂದು ಅವರು ಯೋಚಿಸುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತ ಮತ್ತು ಭೋಜಪುರಿ ಸಿನಿಮಾಗಳಲ್ಲಿ ಹೊಕ್ಕಳನ್ನು ತೋರಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ದಕ್ಷಿಣದ ಚಿತ್ರರಂಗದವರಿಗೆ ಹೊಕ್ಕಳಿನ ಮೇಲೆ ವಿಶೇಷ ಪ್ರೀತಿ, ನಟಿಯರ ಹೊಕ್ಕುಳು ತೋರಿಸಲು ಅವರು ಗಮನ ವಹಿಸುತ್ತಾರೆ. ಬಾಲಿವುಡ್‌ನಲ್ಲಿ ನಟಿಯರ ಎದೆಯ ಭಾಗದ ಪ್ರದರ್ಶನಕ್ಕೆ ಆದ್ಯತೆ ನೀಡಲಾಗುತ್ತದೆ. ದಕ್ಷಿಣದ ಸಿನಿಮಾಗಳಲ್ಲಿ ಹೊಕ್ಕಳನ್ನು ತೋರಿಸುವುದೇ ಒಂದು ಕಾಮದ ಪ್ರತೀಕ ಎಂಬಂತೆ ಬಿಂಬಿಸಲಾಗುತ್ತದೆ. ಇದು ನನಗೆ ಇಂದಿಗೂ ಅರ್ಥವಾಗದ ವಿಷಯ’ ಎಂದಿದ್ದಾರೆ.