https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಬಾಲಿವುಡ್‌ನ ಕಿರುತೆರೆ ನಟಿ ಹಾಗೂ ಸೋಶಿಯಲ್ ಮೀಡಿಯಾದ ಸ್ಟಾರ್ ಉರ್ಫಿ ಜಾವೇದ್, ತಮ್ಮ ಫ್ಯಾಷನ್‌ನಿಂದಾಗಿ ಅವರು ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಚಿತ್ರ-ವಿಚಿತ್ರ ಉಡುಗೆಗಳಿಂದ ಫ್ಯಾಷನ್ ಜಗತ್ತಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಉರ್ಫಿಯ ಉಡುಗೆಗಳು ಆಗಾಗ ಟ್ರೋಲ್‌ಗೆ ಒಳಗಾಗುತ್ತವೆ, ಆದರೆ ಅವರು ಟೀಕಿಸುವವರಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಬದಲಿಗೆ ತಿರುಗೇಟು ನೀಡುತ್ತಾರೆ. ಇದೀಗ ತನ್ನ ಜನ್ಮದಿನದ ಟ್ಯಾಟೂ ಹಾಕಿಸಿಕೊಂಡು ಪ್ರೀತಿಯ ನಾಟಕವಾಡಿದ ನಟ ಪಾರಸ್ ಕಲ್ನಾವತ್ ಅವರ ವಂಚನೆಯನ್ನು ಬಯಲು ಮಾಡಿದ್ದಾರೆ.
ಈಚೆಗೆ ನಟಿ ತಮ್ಮ ಬಾಯ್ಫ್ರೆಂಡ್ ಬಗ್ಗೆ ನೋವಿನ ದಿನಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮಾಜಿ ಬಾಯ್ಫ್ರೆಂಡ್ ಹೇಗೆ ತಮ್ಮನ್ನು ಮೋಸಗೊಳಿಸಿದ ಎನ್ನುವ ಬಗ್ಗೆ ಈಕೆ ಹೇಳಿದ್ದಾರೆ. ಒಂದಲ್ಲ, ಎರಡಲ್ಲ ಹಲವಾರು ಬಾರಿ ಹೇಗೆ ಮೋಸ ಮಾಡಿದ ಎನ್ನುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ನನ್ನ ಜನ್ಮದ ದಿನಾಂಕವನ್ನು ಆತ ಹಚ್ಚೆ ಹಾಕಿಸಿಕೊಂಡಿದ್ದ. ಅದನ್ನು ನೋಡಿ ಆತ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಎಂದುಕೊಂಡಿದ್ದೆ. ಬಣ್ಣದ ಮಾತುಗಳಿಂದ ನನ್ನನ್ನು ಮರುಳು ಮಾಡಿದ. ಆದರೆ ಆತ ಹಾಕಿಸಿಕೊಂಡಿದ್ದು ನನ್ನ ಜನ್ಮ ದಿನಾಂಕ ಆಗಿರಲಿಲ್ಲ, ಬದಲಿಗೆ ಅದೇ ದಿನದಂತೆ ಆತನ ತಂದೆಯೂ ಹುಟ್ಟಿದ ದಿನ. ಬಹುಶಃ ಅವರ ಟ್ಯಾಟೂ ಅದಾಗಿತ್ತು. ಅದರೆ ನಾನು ನನ್ನ ಬರ್ತ್ಡೇ ಎಂದು ಮೋಸ ಹೋದೆ ಎಂದಿದ್ದಾರೆ ಉರ್ಫಿ.
ಆದರೆ ಅದನ್ನೇ ತೋರಿಸಿ ತೋರಿಸಿ ನನ್ನನ್ನು ಮೋಸ ಮಾಡುತ್ತಿದ್ದ, ನಾನು ಅದನ್ನು ನಂಬಿ ಮೋಸ ಹೋದೆ ಎಂದಿದ್ದಾರೆ. ಆಮೇಲೆ ಹಲವು ಹುಡುಗಿಯರಿಗೂ ಆತ ಮೋಸ ಮಾಡಿದ್ದ ಎನ್ನುವುದು ತಿಳಿಯಿತು ಎಂದಿದ್ದಾರೆ. ಜೊತೆಗೆ ನೀವೂ ಹೀಗೆ ಮೋಸ ಹೋಗಬೇಡಿ ಎಂದು ವಾರ್ನ್ ಮಾಡಿದ್ದಾರೆ ನಟಿ.
ಅಷ್ಟಕ್ಕೂ ಉರ್ಫಿಯ ಬಾಯ್ಫ್ರೆಂಡ್ ಆಗಿದ್ದವರ ಹೆಸರು ಪರಸ್ ಕಲ್ನಾವತ್ . ಹಿಂದಿಯ ಅನುಪಮಾ ಎನ್ನುವ ಧಾರಾವಾಹಿಯ ನಟ ಇವರು. ಅಮ್ಮನ ಮುದ್ದಿನ ಮಗನಾಗಿ, ತಾಯಿಯನ್ನು ಬಹಳ ಇಷ್ಟಪಡುವ ಅಮರ್ ಪಾತ್ರವನ್ನು ಇವರು ಮಾಡಿದ್ದರು.ಆದರೆ ಕೆಲ ಕಂತುಗಳ ಬಳಿಕ ಇವರನ್ನು ಅನುಪಮಾ ಧಾರಾವಾಹಿಯಿಂದ ಹೊರಕ್ಕೆ ಹಾಕಲಾಗಿತ್ತು. ಆಗ ಅವರು ಬಹಳ ಸುದ್ದಿಯಲ್ಲಿದ್ದರು. ಅಷ್ಟಕ್ಕೂ ಇವರನ್ನು ಹೊರಕ್ಕೆ ಹಾಕಿದ್ದ ಕಾರಣವೇನೆಂದರೆ, ಧಾರಾವಾಹಿ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಎನ್ನಲಾಗಿತ್ತು.