Subscribe ನ್ಯೂಸಿಕ್ಸ್ ಕನ್ನಡ
newsics.com
ಮುಂಬೈ: ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಎಂಎಂ ಬೇಗ್ ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮನೆಯಲ್ಲೇ ಅವರ ಹೀನಾಯ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಿರ್ಮಾಪಕ ಬೇಗ್ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ಖ್ಯಾತ ಪ್ರಚಾರಕ ಹನೀಫ್ ಜವೇರಿ ಹೇಳಿದ್ದಾರೆ.
ಬೇಗ್ ಅವರು 4 ರಿಂದ 5 ದಿನಗಳಿಂದ ಮನೆಯಿಂದ ಹೊರಗೆ ಬಾರದ ಕಾರಣ, ನೆರೆಹೊರೆಯವರು ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದರು. ಇದರ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಲವಂತವಾಗಿ ಬಾಗಿಲು ತೆರೆದಾಗ ಅಲ್ಲಿ ಬೇಗ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜನಪ್ರಿಯ ಬಾಲ ಕಲಾವಿದೆ ಬೇಬಿ ಗುಡ್ಡು ಅವರ ತಂದೆ ಮತ್ತು ರಜಿಯಾ ಸುಲ್ತಾನ್ ಮತ್ತು ನಿರ್ದೇಶನದ ಛೋಟಿ ಬಹು ಮುಂತಾದ ಚಿತ್ರಗಳಲ್ಲಿ ಎಂ ಎಂ ಬೇಗ್ ತೊಡಗಿಸಿಕೊಂಡಿದ್ದರು.
ಬೇಗ್ ತಮ್ಮ ವೃತ್ತಿಜೀವನವನ್ನು ಜೆ ಓಂ ಪ್ರಕಾಶ್, ವಿಮಲ್ ಕುಮಾರ್ ಮತ್ತು ರಾಕೇಶ್ ರೋಷನ್ ಅವರಿಗೆ ಗೋವಿಂದ ಕೆ ಆದ್ಮಿ ಖಿಲೋನಾ ಹೈ, ಜೈಸಿ ಕರ್ನಿ ವೈಸಿ ಭರ್ನಿ, ಮತ್ತು ಕರ್ಜ್ ಚುಕಾನಾ ಹೈ, ಅನಿಲ್ ಕಪೂರ್-ನಟನೆಯ ಕಾಲಾ ಬಜಾರ್ ಮತ್ತು ಕಿಶನ್ ಕನ್ಹಯ್ಯಾ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು.
ಸ್ವತಂತ್ರ ನಿರ್ದೇಶಕರಾಗಿ, ಅವರು ನಾಸಿರುದ್ದೀನ್ ಶಾ ಅವರ ಮಾಸೋಮ್ ಗವಾಹ್ (1990) ಸೇರಿದಂತೆ ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಅದು ಬಿಡುಗಡೆಯಾಗದೆ ಉಳಿದಿದೆ. ಬಳಿಕ ಶಿಲ್ಪಾ ಶಿರೋಡ್ಕರ್ ನಟಿಸಿದ ಛೋಟಿ ಬಹು (1994) ಚಿತ್ರವನ್ನು ನಿರ್ದೇಶಿಸಿದ್ದರು.