https://youtube.com/shorts/tAQS6h_SZWA?si=vAoxcVAHQglCsru5
Subscribe ನ್ಯೂಸಿಕ್ಸ್ ಕನ್ನಡ
newsics.com
ಪುಟ್ಟ ಮಗುವೊಂದಕ್ಕೆ ವ್ಯಕ್ತಿಯೊಬ್ಬ ಬಿಯರ್ ಕುಡಿಸಿ, ಸಿಗರೇಟ್ ಸೇದಿಸುತ್ತಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ವೈರಲ್ ಆಗ್ತಿದೆ.
ವೈರಲ್ ಆಗಿರುವ ಈ ಆಘಾತಕಾರಿ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಮಗುವಿಗೆ ಬಿಯರ್ ಬಾಟಲಿಯನ್ನು ಹಿಡಿಸಿ ಕುಡಿಯುವಂತೆ ಒತ್ತಾಯಿಸುತ್ತಿದ್ದಾನೆ. ಅಷ್ಟಕ್ಕೆ ನಿಲ್ಲದ ಆತ, ಸಿಗರೇಟನ್ನು ಮಗುವಿನ ಬಾಯಿಗಿಟ್ಟು ಹೇಗೆ ಸೇದಬೇಕು ಎಂದು ಹೇಳಿ ಕೊಡಿತ್ತಿದ್ದಾನೆ. ಚಿಕ್ಕ ವಯಸ್ಸಿನ ಮಗುವನ್ನು ಈ ರೀತಿ ಶೋಷಣೆಗೆ ಒಳಪಡಿಸುತ್ತಿರುವಾಗ ಅಲ್ಲಿಯೇ ಇದ್ದ ಮತ್ತೊಬ್ಬರು ಇದನ್ನು ವಿಡಿಯೋ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೈಕ್ ನಂಬರ್‌ನಿಂದ ಸಿಕ್ಕಿತು ಕ್ಲೂ!
ವಿಡಿಯೋದಲ್ಲಿ ಮೋಟಾರ್ ಸೈಕಲ್ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಅದರ ನೋಂದಣಿ ಸಂಖ್ಯೆ RJ25 SS 8392 ಎಂದು ಓದಬಹುದಾಗಿದೆ. ಈ ನಂಬರ್‌ನಲ್ಲಿರುವ ‘RJ’ ಅಕ್ಷರಗಳು ರಾಜಸ್ಥಾನ ರಾಜ್ಯಕ್ಕೆ ಸೇರಿದ್ದಾಗಿವೆ. ಹೀಗಾಗಿ ಈ ಘಟನೆ ರಾಜಸ್ಥಾನದಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ವಿಡಿಯೋ ವೈರಲ್ರಾಜಸ್ಥಾನ ಪೊಲೀಸರಿಗೆ ಟ್ಯಾಗ್ ಮಾಡಿ ಆಕ್ರೋಶದಿವ್ಯಾ ತಂಡನ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಜಸ್ಥಾನ ಪೊಲೀಸರನ್ನು (@PoliceRajasthan) ಟ್ಯಾಗ್ ಮಾಡಿ ಈ ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಇದು ಯಾವುದೇ ರೀತಿಯಲ್ಲೂ ಸ್ವೀಕಾರಾರ್ಹವಲ್ಲ. ಮಕ್ಕಳನ್ನು ಈ ರೀತಿ ಶೋಷಣೆ ಮಾಡುವುದು ಭಾರತೀಯ ಕಾನೂನಿನಡಿ ಕಠಿಣ ಶಿಕ್ಷೆಗೆ ಅರ್ಹವಾದ ಅಪರಾಧ. ಮಕ್ಕಳನ್ನು ಕೇವಲ ರೀಲ್ಸ್ ಅಥವಾ ಕಂಟೆಂಟ್ ಮಾಡಲು ಬಳಸಿಕೊಳ್ಳಬಾರದು ಎಂದು ಅವರು ಕಿಡಿಕಾರಿದ್ದಾರೆ.
ಹೆಂಡತಿಯ ಮೂಳೆ ಮುರಿಯುವವರೆಗೂ ಹೊಡೆಯಬಹುದು; ತಾಲಿಬಾನ್ನ ಕಾನೂನಿಂದ ಬೆಚ್ಚಿಬಿದ್ದ ಮಹಿಳೆಯರು