Subscribe ನ್ಯೂಸಿಕ್ಸ್ ಕನ್ನಡ
newsics.com
ಫೆಬ್ರವರಿ 28 ರಂದು ಅಪರೂಪದ ಖಗೋಳ ಘಟನೆ ಸಂಭವಿಸಲಿದೆ. ಈ ತಿಂಗಳು ಒಂದೇ ನೇರ ರೇಖೆಯಲ್ಲಿ ಆರು ಗ್ರಹಗಳು ಕಾಣಿಸಿಕೊಳ್ಳಲಿವೆ. ಈ ಅಪರೂಪದ ವಿದ್ಯಮಾನವನ್ನು ಖಗೋಳಶಾಸ್ತ್ರಜ್ಞರು ‘ಗ್ರಹಗಳ ಮೆರವಣಿಗೆ’ ಎಂದು ಕರೆಯುತ್ತಾರೆ.
ಆರು ಗ್ರಹಗಳು ಆಕಾಶದಲ್ಲಿ ಒಂದೇ ನೇರ ರೇಖೆಯಲ್ಲಿ ಕಾಣಿಸಿಕೊಳ್ಳುವ ‘ಗ್ರಹಗಳ ಮೆರವಣಿಗೆ’ ಎಂಬ ಅಪರೂಪದ ಖಗೋಳ ವಿದ್ಯಮಾನ ಸಂಭವಿಸಲಿದೆ.
ಈ ಅಪರೂಪದ ಗ್ರಹಗಳ ಮೆರವಣಿಗೆ ಸೂರ್ಯಾಸ್ತದ ನಂತರ ಒಂದೇ ಪ್ರದೇಶದಲ್ಲಿ ಕಾಣಿಸಿಕೊಳ್ಳಲಿವೆ. ಸೌರವ್ಯೂಹದ 6 ಗ್ರಹಗಳು ಒಟ್ಟಿಗೆ ಗುಂಪಾಗಿ ಗೋಚರಿಸುತ್ತವೆ. ಈ ಅದ್ಭುತವಾದ ವಿದ್ಯಮಾನ ನೋಡಲು ಖಗೋಳಶಾಸ್ತ್ರಜ್ಞರು ಕಾಯುತ್ತಿದ್ದಾರೆ.
ನಾಸಾ ವರದಿ ಪ್ರಕಾರ, ಫೆಬ್ರವರಿ 28 ರ ಶನಿವಾರ ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ ಗೋಚರಿಲಿದೆ. ಇಂದಿನಿಂದ ಫೆಬ್ರವರಿ ಅಂತ್ಯದವರೆಗೆ, ಬುಧ, ಶುಕ್ರ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಇರುತ್ತವೆ. ಕೆಲವು ಗ್ರಹಗಳನ್ನು ಬರಿಗಣ್ಣಿನಿಂದ ನೋಡಲು ಸುಲಭವಾಗಿದ್ದರೆ, ಇತರ ಗ್ರಹಗಳನ್ನು ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ನೋಡಬೇಕಾಗುತ್ತದೆ.