Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ಇಟಲಿ ಪತ್ರಿಕೆ ವರದಿ ನೀಡಿದ ಹಿನ್ನೆಲೆಯಲ್ಲಿ ಇಟಲಿ ಪತ್ರಿಕೆಯ ವರದಿಗೆ ಕೇಂದ್ರ ಸರ್ಕಾರ ಗರಂ ಆಗಿದೆ. ವಿಮಾನ ಅಪಘಾತಕ್ಕೆ ಪೈಲಟ್ ಕಾರಣ ಎನ್ನುವ ಪತ್ರಿಕೆಯ ವರದಿ ಆಧಾರ ರಹಿತವಾಗಿದೆ ಎಂದು ತಿಳಿಸಿದೆ.
ದೃಢೀಕರಿಸದ ವರದಿಗಳಿಂದ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಸೃಷ್ಟಿಯಾಗುತ್ತದೆ. ತನಿಖೆ ಪ್ರಗತಿಯಲ್ಲಿರುವಾಗ ತಪ್ಪು ಮಾಹಿತಿ ನೀಡದಂತೆ ನಾಗರಿಕ ವಿಮಾನಯಾನ ಸಚಿವಾಲಯ ಕಿಡಿಕಾರಿದೆ.
ಅಧಿಕೃತ ತನಿಖಾ ವರದಿ ಬರುವ ಮೊದಲು ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಹೇಳಲಾಗಿದೆ. ಅಪೂರ್ಣ ಮಾಹಿತಿಯನ್ನು ಆಧರಿಸಿದ ವರದಿಗಾರಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸುವಂತೆ ಸಚಿವಾಲಯ ಸೂಚನೆ ನೀಡಿದೆ. ವಿದೇಶಿ ವರದಿಗಳಲ್ಲಿನ ಸತ್ಯಾಸತ್ಯತೆ ಪರಿಶೀಲಿಸದೆ ಹಂಚಿಕೊಳ್ಳಬೇಡಿ ಎಂದು ಹೇಳಿದ್ದು, ಸಾರ್ವಜನಿಕರು ಕೇವಲ ಅಧಿಕೃತ ಮೂಲಗಳ ಮಾಹಿತಿಯನ್ನು ಅಷ್ಟೇ ನಂಬಲು ಮನವಿ ಮಾಡಲಾಗಿದೆ. ತನಿಖಾ ದತ್ತಾಂಶ ಆಧರಿಸದ ಮಾಹಿತಿಯನ್ನು ನಂಬಬೇಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂತರರಾಷ್ಟ್ರೀಯ ವರದಿ ಸತ್ಯಾಸತ್ಯತೆ ಬಗ್ಗೆ ತನಿಖೆಯನ್ನು ತಜ್ಞರು ಮುಂದುವರೆಸಿದ್ದಾರೆ.
https://www.newsics.com/2026/02/13/cm-siddaramaiah-to-present-17th-budget-on-march-6/