https://youtube.com/shorts/PRG7YTSZHd8?si=BMsmmRTf3CzVSrft
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ರೌಡಿ ಶೀಟರ್ ಬಿಲ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದ ಐದನೇ ಆರೋಪಿ ಬೆಂಗಳೂರು ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಕೊನೆಗೂ ಪೊಲೀಸರ ವಶವಾಗಿದ್ದಾರೆ.
ಬೈರತಿ ಬಸವರಾಜ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಸಿಐಡಿ ಕಚೇರಿಗೆ ಅವರನ್ನು ಕರೆತಂದು ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾಗೊಂಡ ಬೆನ್ನಲ್ಲೇ ಬೈರತಿ ಬಸವರಾಜ ಅವರ ಬಂಧನಕ್ಕೆ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು.
ಗುಜರಾತ್‌ನಿಂದ ವಿಮಾನದ ಮೂಲಕ ನರರಕ್ಕೆ ಬರುತ್ತಿರುವ ಮಾಹಿತಿ ತಿಳಿದು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಾದಿದ್ದ ಸಿಐಡಿ ಪೊಲೀಸರು ಟರ್ಮಿನಲ್ 1ರಲ್ಲಿ ಬಸವರಾಜ್ ಬೈರತಿ ಅವರನ್ನು ವಶಕ್ಕೆ ಪಡೆದರು.
ಪೊಲೀಸ್ ಆಗಬೇಕೆಂದುಕೊಂಡಿದ್ದ ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ಹುಡುಗಿ ಕಡೆಯವರು – ವಿಡಿಯೋ ನೋಡಿ
ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್‌ಗಳನ್ನು ಉಡುಗೊರೆಯಾಗಿ ನೀಡಿದ ವಧುವಿನ ಸೋದರ – ವೈರಲ್ ವಿಡಿಯೋ ನೋಡಿ