https://youtube.com/shorts/PRG7YTSZHd8?si=BMsmmRTf3CzVSrft
Subscribe ನ್ಯೂಸಿಕ್ಸ್ ಕನ್ನಡ
newsics.com
ಸೌದಿ ಅರೇಬಿಯಾದ ಮದುವೆಯೊಂದರಲ್ಲಿ ಅತಿಥಿಗಳಿಗೆ ವಧುವಿನ ಸಹೋದರ ಚಿನ್ನದ ಬಿಸ್ಕಟ್‌ಗಳನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿದ್ದು, ಹಳದಿ ಸುಂದರಿ ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಜೀವನದ ಉಳಿತಾಯವನ್ನೆಲ್ಲಾ ಒಟ್ಟುಗೂಡಿಸಿ ಚಿನ್ನ ತೆಗೆಯುವ ಸಂದರ್ಭವಾಗಿದೆ. ಈ ತಿಂಗಳ ಆರಂಭದಲ್ಲಿ ಕೊಂಚ ಕುಸಿತ ಕಂಡಿದ್ದ ಚಿನ್ನ ಮತ್ತೆ ಏರಿಕೆಯಾಗುತ್ತಿದೆ.
@FrontalForce ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈವರೆಗೆ 74 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಸೌದಿಯ ಶ್ರೀಮಂತದ ಕುಟುಂಬದ ಮದುವೆಯಲ್ಲಿ ಚಿನ್ನವನ್ನು ಕಾಣಿಕೆಯಾಗಿ ನೀಡಲಾಗಿದೆ ಎಂದು @grok ಸಹ ಖಚಿತಪಡಿಸಿದೆ.
ಇದೀಗ ಸೌದಿ ಅರೇಬಿಯಾದ ಮದುವೆಯ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹಲ್-ಚಲ್ ಸೃಷ್ಟಿಸಿದೆ. ಸುಮಾರು 100 ಗ್ರಾಂ ತೂಕವಿರುವಷ್ಟು ಶುದ್ಧ ಚಿನ್ನದ ಬಿಸ್ಕಟ್‌ಗಳನ್ನು ಅತಿಥಿಗಳಿಗೆ ಉಡುಗೊರೆ ರೂಪದಲ್ಲಿ ನೀಡಲಾಗಿದೆ. ವಧುವಿನ ಸೋದರ ಈ ಗಿಫ್ಟ್ ವಿತರಿಸಿದ್ದಾನೆ. ವಿಡಿಯೋದಲ್ಲಿ ಚಿನ್ನದ ಬಿಸ್ಕಟ್ ತೆಗೆದುಕೊಳ್ಳಲು ನಿರಾಕರಿಸಿರೋದನ್ನು ಸಹ ಗಮನಿಸಬಹುದು.