https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ವಿಜಯಪುರದಲ್ಲಿ ರೆಡ್ ಬರ್ಡ್ ಖಾಸಗಿ ಜೆಟ್ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ.ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿಸಲಾಗಿದೆ.
ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ವೇಳೆ ಇಂಧನ ಖಾಲಿಯಾದ ಕಾರಣ ವಿಮಾನ ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ರೆಡ್ ಬರ್ಡ ಎವಿಯೇಷನ್ ಎಂಬ ವಿಮಾನ ತರಬೇತಿ ಸಂಸ್ಥೆ ಉಪಯೋಗಿಸುತ್ತಿದ್ದ ಸೆಸ್ನಾ 172 ಟ್ಯಾಂಗೋ ಚಾರ್ಲಿ ಲಘು ವಿಮಾನದಲ್ಲಿ ಕ್ಯಾಪ್ಟನ್ ಕುನಾಲ್ ಮಲ್ಹೋತ್ತಾ ಹಾಗೂ ತರಬೇತಿ ನಿರತ ಪೈಲಟ್ ಕುನಾಲ್ ಶಂಕರ್ ಇದ್ದರು. ಆದ್ರೆ, ಘಟನೆಯಲ್ಲಿ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಘಟನೆಗೆ ಏನು ಕಾರಣ ಎನ್ನುವುದು ತಿಳಿದುಬರಬೇಕಿದೆ.
https://www.newsics.com/2026/02/08/farmer-killed-in-mob-attack-villagers-protest/